Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಳಪೆ ಪ್ರದರ್ಶನ, ರನ್‌ ಬರ, ಅಭಿಷೇಕ್‌ ಶರ್ಮಾ ಮೇಲೆ ಅಪಾಯದ ತೂಗುಗತ್ತಿ

ಟೀಮ್ ಇಂಡಿಯಾ ಸದ್ಯ ಸೂಪರ್ 8 ಹಂತದಲ್ಲಿ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸಿದೆ. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ನೀಡಿರುವ ಪ್ರದರ್ಶನ ನಿಜಕ್ಕೂ ಚಿಂತೆಯ ಗೆರೆಗಳು ಮೂಡುವಂತೆ ಮಾಡಿವೆ. ಟೀಮ್ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಲೈನ್‌ ಅಪ್‌ ದಕ್ಷಿಣ ಆಫ್ರಿಕಾದ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ವಿಫಲವಾಗಿದ್ದು, 76 ರನ್‌ಗಳ ಸೋಲು ಕಂಡಿದೆ. ಭಾರತ ತನ್ನ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಟಿ20 ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಲಾಗಿದ್ದ ಟೀಮ್ ಇಂಡಿಯಾ, ನೀಡಿದ ಪ್ರದರ್ಶನ ಪ್ರಶ್ನೆಗಳು ಹುಟ್ಟು ಹಾಕುವಂತೆ ಮಾಡಿದೆ.

ಜಿಂಬಾಬ್ವೆ ತಂಡದ ವಿರುದ್ಧ ಟೀಮ್ ಇಂಡಿಯಾ ಫೆಬ್ರವರಿ 26 ರಂದು ಚೆನ್ನೈನಲ್ಲಿ ತನ್ನ ಸೂಪರ್ 8 ಹಂತದ ಎರಡನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ದೊಡ್ಡ ಅಂತರದ ಗೆಲುವು ದಾಖಲಿಸುವುದು ಅನಿವಾರ್ಯವಾಗಿದೆ. ಏಕೆಂದರೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ನೀಡಿದ ಪ್ರದರ್ಶನ ನೆಟ್‌ ರನ್‌ ರೇಟ್‌ ಮೇಲೆ ನೇರ ಪರಿಣಾಮ ಬೀರಿದೆ. ಈ ರನ್‌ ರೇಟ್‌ ಸುಧಾರಿಸಿಕೊಳ್ಳಲು ಭಾರತಕ್ಕೆ ಬೆಸ್ಟ್‌ ಚಾನ್ಸ್‌. ಈ ವೇಳೆ ತಂಡದ ಸ್ಫೋಟಕ ಬ್ಯಾಟರ್ ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ.

India vs Zimbabwe

ಕಳೆದ ವರ್ಷ ಟಿ20 ಫಾರ್ಮೆಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಸೂಪರ್ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ, ಟಿ20 ವಿಶ್ವಕಪ್‌ನಲ್ಲಿ ಮಂಕಾಗಿದ್ದಾರೆ. ಇವರ ಬ್ಯಾಟ್ ಮೌನಕ್ಕೆ ಶರಣಾಗಿದೆ. ಬಿಗ್ ಹಿಟ್‌ ಬಾರಿಸಿ ಅಬ್ಬರಿಸುತ್ತಿದ್ದ ಅಭಿಷೇಕ್‌ ರನ್‌ ಕಲೆ ಹಾಕುವುದನ್ನೇ ಮರೆತಂತೆ ಕಾಣುತ್ತಿದೆ. ಲೀಗ್‌ ಹಂತದ ಸತತ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಅಭಿಷೇಕ್‌ ಸೂಪರ್ 8 ಹಂತದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಸೂಚನೆಯನ್ನು ನೀಡಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧವೂ ಇವರ ರನ್ ಬರ ಎದುರಿಸಿದರು.

ಬ್ಯಾಕ್‌ ಟು ಬ್ಯಾಕ್ ಮ್ಯಾಚ್‌ಗಳಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿರುವ ಅಭಿಷೇಕ್ ಶರ್ಮಾ ಅವರ ಸ್ಥಾನದ ಮೇಲೆ ಈಗ ಪ್ರಶ್ನೆಗಳು ಎದ್ದಿವೆ. ಟಿ20 ವಿಶ್ವಕಪ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಅಭಿಷೇಕ್‌ 15 ರನ್‌ ಮಾತ್ರ ಸಿಡಿಸಿದ್ದಾರೆ. ನಿಜಕ್ಕೂ ಅಭಿಷೇಕ್‌ ಶರ್ಮಾ ಪ್ರದರ್ಶನ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ.

India vs Zimbabwe

ಬದಲಾವಣೆಯ ಗಾಳಿ

ಅಭಿಷೇಕ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು, ಬೆಂಚ್ ಕಾಯುತ್ತಿರುವ ಸಂಜು ಸ್ಯಾಮ್ಸನ್‌ ಅವರಿಗೆ ಜಾಕ್‌ಪಾಟ್ ಹೊಡೆಯುವ ಚಾನ್ಸ್ ಇದೆ. ಸಂಜು ಸ್ಯಾಮ್ಸನ್‌ ಅವರಿಗೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶವನ್ನು ನೀಡಿದರೆ ಅಚ್ಚರಿಯಿಲ್ಲ. ಸಂಜು ಸ್ಯಾಮ್ಸನ್‌ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರನ್‌ ಕಲೆ ಹಾಕದೇ ಇರುವುದುಕ್ಕೆ ಬೆಂಚ್ ಕಾಯುತ್ತಿದ್ದಾರೆ. ಹಾಗಿದ್ದರೆ ಅಭಿಷೇಕ್‌ ಮುಂದಿನ ಪಂದ್ಯಗಳಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರ ನಡೆಯುತ್ತಾರಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

1
2-2026

Story first published: Tuesday, February 24, 2026, 8:10 [IST]
Other articles published on Feb 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+