Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ZIM: ಭಾರತ-ಜಿಂಬಾಬ್ವೆ ಟಿ20 ಸರಣಿಯ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

ಜುಲೈ 3 ಬುಧವಾರ, ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡವು 5 ಟಿ20 ಪಂದ್ಯಗಳ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಜುಲೈ 6 ರಿಂದ ಮೊದಲ ಟಿ20 ಪಂದ್ಯ ಪ್ರಾರಂಭವಾಗಲಿದೆ.

ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಯಂಗ್‌ ಟೀಮ್‌ ಇಂಡಿಯಾ ಪ್ರವಾಸಕ್ಕೆ ತೆರಳಿದೆ. ಅನೇಕ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

India vs Zimbabwe T20 Series Schedule Live Streaming

ಮೂವರು ಬದಲಿ ಆಟಗಾರರಿಗೆ ಸ್ಥಾನ

ಬಾರ್ಬಡೋಸ್‌ನಲ್ಲಿ ಬೆರಿಲ್‌ ಚಂಡುಮಾರುತದಿಂದಾಗಿ ಟಿ20 ವಿಶ್ವಕಪ್‌ ಗೆದ್ದ ಬಳಿಕ ಟೀಮ್‌ ಇಂಡಿಯಾ ಸಿಲುಕಿಕೊಂಡಿದೆ.ಇದರಿಂದಾಗಿ ನಿಗದಿತ ಸಮಯಕ್ಕೆ ತವರಿಗೆ ಮರಳದ ಕಾರಣ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಅವರು ಜಿಂಬಾಬ್ವೆ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಆಡುತ್ತಿಲ್ಲ.

ಸದ್ಯ ಜಿಂಬಾಬ್ವೆಗೆ ತೆರಳಿರುವ ಭಾರತ ತಂಡದಲ್ಲಿ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಸೇರ್ಪಡೆಗೊಂಡಿದ್ದಾರೆ. ಈ ಸರಣಿಯಲ್ಲಿ ಯುವ ಐಪಿಎಲ್ ಸ್ಟಾರ್‌ಗಳಾದ ಅಭಿಷೇಕ್ ಶರ್ಮಾ, ಧ್ರುವ ಜುರೆಲ್, ರಿಯಾನ್ ಪರಾಗ್ ಮತ್ತು ತುಷಾರ್ ದೇಶಪಾಂಡೆ ಮೊದಲ ಬಾರಿಗೆ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿವಿಎಸ್‌ ಲಕ್ಷ್ಮಣ್ ಕೋಚ್‌

ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಮೊದಲ ಬಾರಿಗೆ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ನಿತೀಶ್ ಗಾಯದ ಕಾರಣದಿಂದ ಹೊರಗುಳಿದ್ದಾರೆ. ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ, ವಿವಿಎಸ್ ಲಕ್ಷ್ಮಣ್ ತಂಡದೊಂದಿಗೆ ಹಂಗಾಮಿ ಕೋಚ್ ಆಗಿ ಜಿಂಬಾಬ್ವೆಗೆ ತೆರಳಿದ್ದಾರೆ. ಸರಣಿಯ ಎಲ್ಲಾ ಟಿ20 ಪಂದ್ಯಗಳು ಹರಾರೆಯಲ್ಲಿರುವ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

India vs Zimbabwe T20 Series Schedule Live Streaming

ಭಾರತ vs ಜಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ

ಮೊದಲ ಟಿ20 - ಶನಿವಾರ, ಜುಲೈ 6
ಎರಡನೇ ಟಿ20 - ಭಾನುವಾರ, ಜುಲೈ 7
ಮೂರನೇ ಟಿ20 - ಬುಧವಾರ, ಜುಲೈ 10
ನಾಲ್ಕನೇ ಟಿ20 - ಶನಿವಾರ, ಜುಲೈ 13
ಐದನೇ ಟಿ20 - ಭಾನುವಾರ, ಜುಲೈ 14

ಉಭಯ ತಂಡಗಳ ಆಟಗಾರರ ಹೆಸರು

ಭಾರತ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಧ್ರುವ್ ಜುರೆಲ್ (ವಿಕೆಟ್‌ ಕೀಪರ್‌), ಶಿವಂ ದುಬೆ, ರಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್ ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

ಮೊದಲ ಎರಡು ಟಿ20 ಪಂದ್ಯಗಳಿಗೆ: ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ.

ಜಿಂಬಾಬ್ವೆ: ಸಿಕಂದರ್ ರಝಾ (ನಾಯಕ), ಫರಾಜ್ ಅಕ್ರಂ, ಬ್ರಿಯಾನ್ ಬೆನೆಟ್, ಜೊನಾಥನ್ ಕ್ಯಾಂಪ್‌ಬೆಲ್, ಟೆಂಡೈ ಚಟಾರಾ, ಲ್ಯೂಕ್ ಜೊಂಗ್ವೆ, ಇನ್ನೋಸೆಂಟ್ ಕೈಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ವೆಲ್ಲಿಂಗ್‌ಟನ್ ಮಸಕಡ್ಜಾ, ಬ್ರ್ಯಾಂಡನ್ ಮಾವುಟಾ, ಆಶೀರ್ವಾದ ನಜರಾಬ್ವಾನಿ, ಆಶೀರ್ವಾದ ನಜರಾಬ್ವಾನಿ ರಿಚರ್ಡ್ ನ್ಗರ್ವಾ, ಮಿಲ್ಟನ್ ಶುಂಬಾ.

ಭಾರತ vs ಜಿಂಬಾಬ್ವೆ ಟಿ20 ಸರಣಿಯ ಲೈವ್ ಸ್ಟ್ರೀಮಿಂಗ್

ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿ ಶನಿವಾರದಿಂದ (ಜುಲೈ 6) ಭಾರತೀಯ ಕಾಲಮಾನ ಸಂಜೆ 4:30ಕ್ಕೆ ಆರಂಭವಾಗಲಿವೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತ ಮತ್ತು ಜಿಂಬಾಬ್ವೆ ಪಂದ್ಯಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲಿದೆ. ಭಾರತದಲ್ಲಿ ಟಿ20 ಸರಣಿಯ ಲೈವ್ ಸ್ಟ್ರೀಮಿಂಗ್ SonyLiv ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.

Story first published: Wednesday, July 3, 2024, 12:55 [IST]
Other articles published on Jul 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+