Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಹುಟ್ಟುವ ಮುನ್ನವೇ ಭಾರತ ಟೆಸ್ಟ್‌ನಲ್ಲಿ ಗೆಲುವು ಕಂಡಿತ್ತು: ಕೊಹ್ಲಿಗೆ ಗವಾಸ್ಕರ್ ತಿರುಗೇಟು

Gavaskar takes a dig at India captain Virat Kohli | Oneindia Kannada
India were also winning in the 70s and 80s, he wasnt born then

ಕೊಲ್ಕತ್ತಾ ಐತಿಹಾಸಿಕ ಪಂದ್ಯವನ್ನು ಗೆದ್ದು ಭಾರತ ಸರಣಿಯನ್ನು 2-0ಅಂತರದಲ್ಲಿ ವಶಕ್ಕೆ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಒಂದು ಮಾತು ಮಾಜಿ ನಾಯಕ ಗವಾಸ್ಕರ್ ಅವರನ್ನು ಕೆರಳಿಸಿದೆ. ಕೋಹ್ಲಿಯ ಮಾತಿಗೆ ಗವಾಸ್ಕರ್ ತಮ್ಮದೇ ಧಾಟಿಯಲ್ಲಿ ಉತ್ತರವನ್ನೂ ನೀಡಿದ್ದಾರೆ.

ಪಿಂಕ್ ಐತಿಹಾಸಿಕ ಟೆಸ್ಟ್‌ ಪಂದ್ಯವನ್ನು ಗೆದ್ದ ಬಳಿಕ ಮಾತನಾಡುತ್ತಾ ಭಾರತ ತಂಡದ ನಾಯಕ ಕೊಹ್ಲಿ ಇದೆಲ್ಲಾ ಆರಂಭವಾಗಿದ್ದು 2000ನೇ ಇಸವಿಯಲ್ಲಿ ದಾದಾ(ಸೌರವ್ ಗಂಗೂಲಿ) ಕಾಲದಿಂದ ಎಂದಿದ್ದರು

ಟೆಸ್ಟ್‌ನಲ್ಲಿ ಭಾರತ ಗೆಲುವನ್ನು ಕಾಣಬಹುದು ಎಂದು ತೋರಿಸಿದ್ದು ಗಂಗೂಲಿ ಎಂಬ ಮಾತನ್ನು ಆಡಿದ್ದರು. ಆದರೆ ಈ ಮಾತು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್‌ಗೆ ಇಷ್ಟವಾಗಿಲ್ಲ.

ಪಂದ್ಯ ಗೆದ್ದ ಬಳಿಕ ಸುನಿಲ್ ಗಾವಸ್ಕರ್ ಇದೊಂದು ಅದ್ಭುತ ಪಂದ್ಯವಾಗಿತ್ತು. ಭಾರತ ಅದ್ಭುತವಾಗಿ ಆಡಿ ಪಂದ್ಯವನ್ನು ಗೆದ್ದುಕೊಂಡಿದೆ ಎಂದರು. ಜೊತೆಗೆ ಕೊಹ್ಲಿ ಆಡಿದ ಮಾತಿಗೆ ಗಾವಸ್ಕರ್ 'ಬಹುಶಃ ಈ ಮಾತನ್ನು ಭಾರತ ತಂಡದ ನಾಯಕ ಬಿಸಿಸಿಐ ಅಧ್ಯಕ್ಷರನ್ನು ಮೆಚ್ಚಿಸಲು ಹೇಳಿರಬೇಕು' ಎಂದು ತಿರುಗೇಟು ನೀಡಿದ್ದಾರೆ.

'ಭಾರತ ತಂಡದ ನಾಯಕ 2000ನೇ ಇಸವಿಯಲ್ಲಿ ದಾದಾ ನಾಯಕತ್ವದಲ್ಲಿ ಟೆಸ್ಟ್‌ ಗೆಲ್ಲಲು ಆರಂಭಿಸಿತು ಎಂದಿದ್ದಾರೆ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರೋದರಿಂದ ಅವರ ಬಗ್ಗೆ ಉತ್ತಮ ಮಾತುಗಳನ್ನ ಹೇಳುವ ಉದ್ದೇಶದಿಂದ ಈ ರೀತ ಮಾತನ್ನ ಹೇಳಿರ ಬಹುದು ಆದರೆ ಭಾರತ 70 ಮತ್ತು 80ರ ದಶಕದಿಂದಲೇ ವಿದೇಶದಲ್ಲಿ ಗೆಲ್ಲಲು ಆರಂಭಿಸಿತು' ಎಂದು ಗವಾಸ್ಕರ್ ಹೇಳಿದರು.

ತುಂಬಾ ಜನರು ಈಗಲೂ 2000ನೇ ಇಸವಿಯಿಂದಲೇ ಭಾರತ ಟೆಸ್ಟ್‌ ಸರಣಿಯನ್ನು ಆಡಲು ಆರಂಭಿಸಿತು ಅಂದುಕೊಂಡಿದ್ದಾರೆ. ಆದರೆ ಭಾರತ 70ರ ದಶಕದಲ್ಲಿ ಗೆದ್ದಿತ್ತು. 1986ರಲ್ಲೂ ಟೆಸ್ಟ್‌ಗೆದ್ದಿತ್ತು ಮತ್ತು ಡ್ರಾ ಕೂಡ ಮಾಡಿಕೊಂಡಿತ್ತು. ಆಗ ಭಾರತ ತಂಡದ ನಾಯಕ ಕೊಹ್ಲಿ ಹುಟ್ಟಿರಲೇ ಇಲ್ಲ ಎಂಬುದಾಗಿ ಹೇಳಿದ್ದಾರೆ.

Story first published: Monday, November 25, 2019, 19:37 [IST]
Other articles published on Nov 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+