For Quick Alerts
ALLOW NOTIFICATIONS  
For Daily Alerts
 

'ಮಂದೂಡಿರುವ ಪಂದ್ಯ ಯಾವಾಗ ನಡೆದರೂ ಭಾರತವೇ ಗೆಲ್ಲುವ ಫೇವರಿಟ್ ತಂಡ'

‘India will be favourites whenever the postponed Test vs England takes place’: Irfan Pathan

ನವದೆಹಲಿ: ಕೋವಿಡ್-19 ಭೀತಿಯಿಂದಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ರದ್ದಾಗಿದೆ. ಮುಂದೆ ಆ ಪಂದ್ಯ ಯಾವಾಗ ನಡೆಸಲಾಗುತ್ತದೆ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಮುಂದೂಡಲಾಗಿರುವ ಆ ಟೂರ್ನಿ ಯಾವಾಗ ನಡೆದರೂ ಟೀಮ್ ಇಂಡಿಯಾ ಪಂದ್ಯ ಗೆಲ್ಲುತ್ತದೆ ಎಂದು ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್‌ 10ರಂದು ಭಾರತ-ಇಂಗ್ಲೆಂಡ್ ಮಧ್ಯೆ ಐದನೇ ಟೆಸ್ಟ್ ಪಂದ್ಯ ನಡೆಯುವುದರಲ್ಲಿತ್ತು. ಆದರೆ ಟೀಮ್ ಇಂಡಿಯಾದ ಕೋಚ್‌ಗಳು, ಬೆಂಬಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಪಂದ್ಯವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, ಇಂಗ್ಲೆಂಡ್‌ನಲ್ಲಿನ ಟೀಮ್ ಇಂಡಿಯಾದ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದ್ದು, ಭಾರತ 2-1ರ ಮುನ್ನಡೆಯಲ್ಲಿದೆ. ಮುಂದೆ ಯಾವಾಗ ಐದನೇ ಟೆಸ್ಟ್ ಪಂದ್ಯ ನಡೆದರೂ ಭಾರತ ಗೆಲ್ಲುವ ಫೇವರಿಟ್ ತಂಡವಾಗಿದೆ ಎಂದು ಪಠಾಣ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 10 ರಂದು ಟ್ವೀಟ್ ಮಾಡಿದ್ದ ಪಠಾಣ್, "ಇಂಗ್ಲೆಂಡ್ ಸರಣಿಯುದ್ದಕ್ಕೂ ಭಾರತ ಅತ್ಯುತ್ತಮ ಹೋರಾಟದ ಸ್ಫೂರ್ತಿಯೊಂದಿಗೆ ವಿಶೇಷ ನಡೆ ತೋರಿದೆ. ಭಾರತ ತೋರಿದ ಉನ್ನತ ಮಟ್ಟದ ಕೌಶಲ ಮೆಚ್ಚಿಕೊಳ್ಳುವಂತದ್ದು. ಮುಂದೂಡಲ್ಪಟ್ಟಿರುವ ಈ ಟೆಸ್ಟ್ ಪಂದ್ಯ ಯಾವಾಗ ನಡೆದರೂ ಭಾರತೀಯ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ ಎನ್ನೋದನ್ನು ನಾನು ಭರವಸೆಯಿಂದ ಹೇಳುತ್ತೇನೆ," ಎಂದು ಇರ್ಫಾನ್ ಬರೆದುಕೊಂಡಿದ್ದಾರೆ.

ಕೋವಿಡ್-19 ಪ್ರಕರಣಗಳು ಹೆಚ್ಚಿದ್ದರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ ಪಂದ್ಯ ರದ್ದಾಗಿದೆ. ಕಾರಣ ಟೀಮ್ ಇಂಡಿಯಾದಲ್ಲಿ ಮುಖ್ಯವಾಗಿ ಕೋಚಿಂಗ್, ಸಿಬ್ಬಂದಿ ವಿಭಾಗದಲ್ಲಿ ಬಹಳಷ್ಟು ಪ್ರಕರಣಗಳು ಕಾಣಿಸಿಕೊಂಡಿದ್ದವು. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್‌ ಶ್ರೀಧರ್, ಫಿಸಿಯೋ ನಿತಿನ್ ಪಾಟೆಲ್‌, ಮತ್ತೊಬ್ಬ ಬೆಂಬಲ ಸಿಬ್ಬಂದಿ ಜೂನಿಯರ್ ಫಿಸಿಯೋ ಯೋಗೇಶ್ ಪಾರ್ಮರ್ ಕೋವಿಡ್-19 ಫಲಿತಾಂಶಗಳು ಪಾಸಿಟಿವ್ ಬಂದಿದ್ದರಿಂದ ಕೊನೇ ಟೆಸ್ಟ್‌ ಅನ್ನು ಮುಂದೂಡಲು ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗಳು ಅಂತಿಮವಾಗಿ ನಿರ್ಧರಿಸಿದ್ದವು. ಕೊನೇ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಎಲ್ಲರ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಕೋಚ್‌ಗಳು, ಬೆಂಬಲ ಸಿಬ್ಬಂದಿಗಳ ನೆರವೇ ಇಲ್ಲದೆ ಇಡೀ ಒಂದು ಟೆಸ್ಟ್‌ ಪಂದ್ಯ ಆಡೋದು ಸುಲಭದ ಮಾತಾಗಿರಲಿಲ್ಲ. ಹಾಗಾಗಿ ಪಂದ್ಯ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಪಂದ್ಯದ ರದ್ದಿಗೆ ಅಸಲಿ ಕಾರಣ ವಿವರಿಸಿದ ದಿನೇಶ್ ಕಾರ್ತಿಕ್
ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಯೋ ಬಬಲ್‌ ಒಳಗಿರುವ ಭಾರತದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್, ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯದ ರದ್ದತಿ ಬಗ್ಗೆ ಮಾತನಾಡಿದ್ದಾರೆ. "ನಾನು ನಾಲ್ಕನೇ ಟೆಸ್ಟ್‌ ಪಂದ್ಯದ ಬಳಿಕ ಭಾರತೀಯ ಕೆಲ ಆಟಗಾರರ ಜೊತೆ ಮಾತನಾಡಿದೆ. ಆದರೆ ಹೆಚ್ಚಿನವರಲ್ಲಿ ಮಾತನಾಡಿಲ್ಲ. ಅವರು ದಣಿದಿದ್ದಾರೆ. ಎಲ್ಲಾ ಪಂದ್ಯಗಳು ಬೆನ್ನು ಬೆನ್ನಿಗೆ ನಡೆದಿದ್ದಾಗಿದೆ. ಆದರೆ ಅವರಿಗೆ ಕೇವಲ ಒಬ್ಬನೇ ಒಬ್ಬ ಫಿಸಿಯೋ (ಯೋಗೇಶ್ ಪಾರ್ಮರ್) ಉಳಿದಿದ್ದರು. ಹೀಗಾಗಿ ಅವರೆಲ್ಲ ಆ ಒಬ್ಬನೇ ಫಿಸಿಯೋನ ಸಹಾಯ ಪಡೆಯಬೇಕಾಗಿತ್ತು. ಬಹಳ ಕೆಲಸಗಳು ಅವರಿಂದಲೇ ಆಗಬೇಕಾಗಿದೆ. ಈಗ ಅವರಿಗೂ ಪಾಸಿಟಿವ್ ಬಂದಿದೆ. ಹೀಗಾಗಿ ಸಮಸ್ಯೆ ಶುರುವಾಗಿದೆ," ಎಂದು ಕಾರ್ತಿಕ್ ಹೇಳಿದ್ದಾರೆ.

Story first published: Saturday, September 11, 2021, 2:08 [IST]
Other articles published on Sep 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+