ಇಂಗ್ಲೆಂಡ್ ವಿರುದ್ಧ ಈ ಅಂತರದಲ್ಲಿ ಸರಣಿ ಗೆದ್ದರೆ ಭಾರತ ವಿಶ್ವ ನಂ.1 ಟಿ20 ತಂಡವಾಗಲಿದೆ!

ನವದೆಹಲಿ: ಈ ಮೊದಲು ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20ಐ ಮೂರೂ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಅಗ್ರಸ್ಥಾನ ಉಳಿಸಿಕೊಂಡಿದೆ. ಉಳಿದಂತೆ ಏಕದಿನ ಮತ್ತು ಟಿ20ಐ ಎರಡೂ ಕ್ರಿಕೆಟ್ ಮಾದರಿಗಳಲ್ಲಿ ಕೆಳಗಿನ ಕ್ರಮಾಂಕದಲ್ಲಿದೆ.
ಈಗಿನ ಐಸಿಸಿ ರ್‍ಯಾಂಕಿಂಗ್ ಗಮನಿಸಿದರೆ ಟೆಸ್ಟ್‌ನಲ್ಲಿ ಭಾರತ, ನ್ಯೂಜಿಲೆಂಡ್ ಆಸ್ಟ್ರೇಲಿಯಾ, ಏಕದಿನದಲ್ಲಿ ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಟಿ20ಐನಲ್ಲಿ ಇಂಗ್ಲೆಂಡ್, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿವೆ. ಇದರಲ್ಲಿ ಟಿ20ಐನಲ್ಲಿ ಅಗ್ರಶ್ರೇಯಾಂಕಕ್ಕೆ ಏರಲು ವಿರಾಟ್ ಕೊಹ್ಲಿ ಪಡೆಗೆ ಅವಕಾಶವಿದೆ.
ಪ್ರವಾಸ ಸರಣಿಗಾಗಿ ಭಾರತಕ್ಕೆ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಈಗಾಗಲೇ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1ರ ಸೋಲನುಭವಿಸಿದೆ. ಮಾರ್ಚ್ 12ರಿಂದ ಭಾರತದೆದುರು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಈ ಸರಣಿಯಲ್ಲಿ ಭಾರತ ದೊಡ್ಡ ಅಂತರದಲ್ಲಿ ಸರಣಿ ಗೆದ್ದರೆ ಟಿ20ಐನಲ್ಲಿ ನಂ.1 ಸ್ಥಾನಕ್ಕೇರಲು ಅವಕಾಶವಿದೆ.
ಟಿ20 ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ ನಂ.1 ಸ್ಥಾನಕ್ಕೇರಬೇಕಾದರೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 4-1ರ ಗೆಲುವು ಕಾಣಬೇಕು. ಆದರೆ ಇದು ಬಲುಕಷ್ಟ ಸಾಧ್ಯ. ಯಾಕೆಂದರೆ ಇಯಾನ್ ಮಾರ್ಗನ್ ಪಡೆ ಕೂಡ ಬಲಿಷ್ಠವಾಗಿವೆ. ಸದ್ಯ ಅಗ್ರ ಸ್ಥಾನದಲ್ಲಿರುವ ಇಂಗ್ಲೆಂಡ್ 275 ರೇಟಿಂಗ್ ಪಾಯಿಂಟ್ಸ್, ಭಾರತ 268 ಪಾಯಿಂಟ್ಸ್ ಮತ್ತು ಆಸ್ಟ್ರೇಲಿಯಾ 267 ರೇಟಿಂಗ್ ಪಾಯಿಂಟ್ಸ್ ಹೊಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications