ಇಂಗ್ಲೆಂಡನ್ನು ಭಾರತ 2-1 ಅಥವಾ 2-0 ಸೋಲಿಸಲಿದೆ: ಪನೇಸರ್

ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಟೀಮ್ ಇಂಡಿಯಾ 2-1ರಿಂದ ರೋಚಕವಾಗಿ ಜಯಿಸಿತ್ತು. ಇನ್ನು ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿಯಿಂದ ಆರಂಭಗೊಳ್ಳಲಿದೆ. ಭಾರತಕ್ಕೆ ಪ್ರವಾಸ ಬರಲಿರುವ ಇಂಗ್ಲೆಂಡ್ ಚೆನ್ನೈನಲ್ಲಿ ಆರಂಭಿಕ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದೆ.
ಫೆಬ್ರವರಿ 5ರಂದು ಮೊದಲ ಟೆಸ್ಟ್ ಪಂದ್ಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ದ್ವಿತೀಯ ಟೆಸ್ಟ್ ಕೂಡ ಇದೇ ಸ್ಟೇಡಿಯಂನಲ್ಲಿ ಫೆಬ್ರವರಿ 13ರಿಂದ ಆರಂಭಗೊಳ್ಳಲಿದೆ. ಚೆನ್ನೈನಲ್ಲಿ ಹಿಂದಿನಸಾರಿ ಟೆಸ್ಟ್ ಪಂದ್ಯ ನಡೆದಿದ್ದು 2016ರಲ್ಲಿ. ಆವತ್ತು ಅಲಾಸ್ಟೇರ್ ಕುಕ್ ಮುಂದಾಳತ್ವದ ಇಂಗ್ಲೆಂಡ್ ತಂಡವನ್ನು ಭಾರತ ಇನ್ನಿಂಗ್ಸ್ ಸಹಿತ 75 ರನ್ ಸೋಲನುಭವಿಸಿತ್ತು.
ಟೆಸ್ಟ್ ಸರಣಿ ಗೆಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಟೈಮ್ಸ್ ಆಫ್ ಇಂಡಿಯಾದ ಪ್ರಶ್ನೆಗೆ ಇಂಗ್ಲೆಂಡ್‌ನ ಮಾಜಿ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್, 'ಭಾರತ ಸರಣಿ ಗೆಲ್ಲುತ್ತದೆ. ಆದರೆ ಭಾರತ 4-0ಯಿಂದ ಗೆದ್ದರೆ ಅಚ್ಚರಿಯಾಗಲಿದೆ. ನನ್ನ ಪ್ರಕಾರ ಭಾರತ 2-1 or 2-0ರಿಂದ ಗೆಲ್ಲುತ್ತದೆ,' ಎಂದಿದ್ದಾರೆ.
1933ರಿಂದ 2016ರ ವರೆಗೆ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಒಟ್ಟು 60 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 19 ಸಾರಿ ಗೆದ್ದಿದೆ. ಇಂಗ್ಲೆಂಡ್ 13 ಸಾರಿ ಜಯ ಕಂಡಿದೆ. 28 ಪಂದ್ಯಗಳು ಡ್ರಾ ಎನಿಸಿವೆ. ಚೆನ್ನೈ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ 5, ಇಂಗ್ಲೆಂಡ್ 3 ಪಂದ್ಯಗಳನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications