IND vs SL: ಆಸ್ಟ್ರೇಲಿಯಾ-ಇಂಗ್ಲೆಂಡ್ ಮಾಡಲಾಗದ್ದನ್ನು ಟೀಮ್ ಇಂಡಿಯಾ ಮಾಡಲಿದೆ!
ಆಗಸ್ಟ್ 4 ಭಾನುವಾರ, ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಇದುವರೆಗೆ ಏಕದಿ್‌ನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳು ಸಾಧಿಸಲು ಸಾಧ್ಯವಾಗದ ಸಾಧನೆ ಮಾಡಲು ಟೀಮ್ ಇಂಡಿಯಾ ರೆಡಿಯಾಗಿದೆ.
ಇಂದು (ಆಗಸ್ಟ್ 4) ನಡೆಯಲಿರುವ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ದಾಖಲೆ ಬರೆಯಲಿದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿಯೇ ಈ ವಿಶಿಷ್ಟ ಸಾಧನೆ ಮಾಡಬಹುದಾಗಿತ್ತು. ಆದರೆ ಪಂದ್ಯ ಟೈ ಆದ ಕಾರಣ ಅವಕಾಶವನ್ನು ಭಾರತ ಕೈ ಚೆಲ್ಲಿತ್ತು.

ಏನಿದು ವಿಶೇಷ ದಾಖಲೆ
ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಗೆಲುವುಗಳನ್ನು ಸಾಧಿಸಿದ ದಾಖಲೆಯನ್ನು ಹೊಂದಿದೆ. ಶ್ರೀಲಂಕಾ ವಿರುದ್ಧ ಆಡಿದ 169 ಏಕದಿನ ಪಂದ್ಯಗಳಲ್ಲಿ ಭಾರತ ಇದುವರೆಗೆ 99 ಗೆಲುವು ದಾಖಲಿಸಿದೆ.
ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಏಕದಿನ ಪಂದ್ಯವನ್ನು ಭಾರತ ಗೆದ್ದರೆ, ಒಂದೇ ತಂಡದ ವಿರುದ್ಧ 100 ಗೆಲುವು ಸಾಧಿಸಿ ದಾಖಲೆಯನ್ನು ಸೃಷ್ಟಿಸಲಿದೆ.ಈ ಮೂಲಕ ಒಂದೇ ತಂಡದ ವಿರುದ್ಧ 100 ಏಕದಿನ ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಲಿದೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳು ಕೂಡ ಈ ದಾಖಲೆಯನ್ನು ಮಾಡುವಲ್ಲಿ ಭಾರತದ ಹಿಂದೆ ಇವೆ.ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಇದುವರೆಗೆ 96 ಗೆಲುವುಗಳನ್ನು ದಾಖಲಿಸಿದೆ. ಇದು ಭಾರತಕ್ಕಿಂತ ಕಡಿಮೆಯಾಗಿದೆ.
ಆಸ್ಟ್ರೇಲಿಯ 142 ಪಂದ್ಯಗಳಲ್ಲಿ 96 ಗೆಲುವು ದಾಖಲಿಸಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ 157 ಏಕದಿನ ಪಂದ್ಯಗಳಲ್ಲಿ 93 ಗೆಲುವುಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇಂಗ್ಲೆಂಡ್ ತಂಡ ಟಾಪ್-5ರಲ್ಲಿಯೂ ಇಲ್ಲ. ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಕ್ರಮವಾಗಿ 88 ಮತ್ತು 84 ಏಕದಿನ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡವು ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ.
ಏಕದಿನದಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಗೆಲುವುಗಳು
ಶ್ರೀಲಂಕಾ ವಿರುದ್ಧ ಭಾರತ- 99 ಗೆಲುವುಗಳು
ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ- 96 ಗೆಲುವುಗಳು
ಶ್ರೀಲಂಕಾ ವಿರುದ್ಧ ಪಾಕಿಸ್ತಾನ- 93 ಗೆಲುವುಗಳು -
ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ- 88 ಗೆಲುವುಗಳು
ಭಾರತ ವಿರುದ್ಧ ಆಸ್ಟ್ರೇಲಿಯಾ- 84 ಗೆಲುವುಗಳು
ಭಾರತ vs ಶ್ರೀಲಂಕಾದ ಏಕದಿನ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್‌ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಸರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
ಶ್ರೀಲಂಕಾ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಾಲ್ ಮೆಂಡಿಸ್, ಸದಿರ ಸಮರವಿಕ್ರಮ, ಕಮಿಂದು ಮೆಂಡಿಸ್, ಜೆನಿತ್ ಲಿಯಾನಗೆ, ನಿಶಾನ್ ಮದುಷ್ಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಚಮಿಕಾ ಕರುಣಾರತ್ನೆ, ಮಹಿಷ್ ತೀಕ್ಷಣ, ಮೊಯಿತಾ ಧನರಾಜ, ಅಶಿಲ ಧನರಾಜ್ , ಇಶಾನ್ ಮಾಲಿಂಗ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications