Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಡೇ-ನೈಟ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಆಡುತ್ತಿಲ್ಲ

India will not play D/N Test in Australia: BCCI to CA

ನವದೆಹಲಿ, ಮೇ 7: ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಸಂದರ್ಭ ನಡೆಸಲುದ್ದೇಶಿಸಿದ್ದ ಡೇ-ನೈಟ್ ಟೆಸ್ಟ್ ಪಂದ್ಯಾಟದಲ್ಲಿ ಭಾರತ ಕ್ರಿಕೆಟ್ ತಂಡ ಪಾಲ್ಗೊಳ್ಳುತ್ತಿಲ್ಲ ಎಂದು ಬಿಸಿಸಿಐಯು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಅಧಿಕೃತವಾಗಿ ತಿಳಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾವು ತವರಿನಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಸಲು ಉದ್ದೇಶಿಸಿತ್ತು. ಈ ಪಂದ್ಯಾಟಕ್ಕೆ ಟೀಮ್ ಇಂಡಿಯಾವನ್ನೂ ಆಹ್ವಾನಿಸಿತ್ತು. ಆದರೆ ಭಾರತದ ಕ್ರಿಕೆಟ್ ಮಂಡಳಿ ಸಾಂಪ್ರದಾಯಿಕ ಕೆಂಪು ಚೆಂಡು ಪಂದ್ಯದ ನಿಯಮ ಮೀರಿ ಪಿಂಕ್ ಬಾಲ್ ಪಂದ್ಯದಲ್ಲಿ ಪಾಲ್ಗೊಳ್ಳಲಾಗದು ಎಂದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಹೇಳಿದೆ.

ರವಿಶಾಸ್ತ್ರಿ ಮುಂದಾಳತ್ವದ ಭಾರತ ಕ್ರಿಕೆಟ್ ತಂಡ ನಿರ್ವಹಣಾ ಸಮಿತಿಯು ಡೇ-ನೈಟ್ ಟೆಸ್ಟ್ ಪಂದ್ಯಾಟಕ್ಕಾಗಿ ಟೀಮ್ ಇಂಡಿಯಾಕ್ಕೆ ಸುಮಾರು 18 ತಿಂಗಳ ತರಬೇತಿಯ ಅವಶ್ಯಕತೆಯಿದೆ ಎಂದು ಸುಪ್ರೀಮ್ ಕೋರ್ಟ್ ನೇಮಿತ ಭಾರತ ಕ್ರಿಕೆಟ್ ಆಡಳಿತ ಸಮಿತಿಗೆ ತಿಳಿಸಿತ್ತು. ಅದರಂತೆ ಪಿಂಕ್ ಬಾಲ್ ಟೆಸ್ಟ್ ನಿಂದ ಭಾರತವೀಗ ಸಂಪೂರ್ಣ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ.

Story first published: Monday, May 7, 2018, 20:21 [IST]
Other articles published on May 7, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+