ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಭಾರತ 5 ಟಿ20ಐ ಪಂದ್ಯಗಳನ್ನಾಡಲಿದೆ: ಗಂಗೂಲಿ

India will play five T20Is against England, says BCCI president Sourav Ganguly

ನವದೆಹಲಿ: ಮುಂಬರುವ ವರ್ಷಾರಂಭದಲ್ಲಿ ಭಾರತಕ್ಕೆ ಪ್ರವಾಸ ಬರುವ ಇಂಗ್ಲೆಂಡ್ ತಂಡದ ವಿರುದ್ಧ ಆತಿಥೇಯ ಭಾರತ ತಂಡ ಐದು ಪಂದ್ಯಗಳ ಟಿ20ಐ ಸರಣಿ ಆಡಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿ

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ವೇಳೆ ಡೇ-ನೈಟ್ ಟೆಸ್ಟ್ ಅನ್ನು ಅಹ್ಮದಾಬಾದ್‌ನಲ್ಲಿ ನಡೆಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಟೂರ್ನಿಯ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಆದರೆ ಸರಣಿಯು ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20ಐಗಳನ್ನು ಒಳಗೊಂಡಿರಲಿದೆ ಎಂದು ಭಾರತದ ಮಾಜಿ ನಾಯಕ ಗಂಗೂಲಿ ಮಾಹಿತಿ ನೀಡಿದ್ದಾರೆ.

'ಭಾರತಕ್ಕೆ ಪ್ರವಾಸ ಬರುತ್ತಿರುವ ಇಂಗ್ಲೆಂಡ್ ತಂಡ ಇಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು, ಮೂರು ಏಕದಿನ ಪಂದ್ಯಗಳನ್ನು ಮತ್ತು ಐದು ಟಿ20ಐ ಪಂದ್ಯಗಳನ್ನಾಡಲಿದೆ. ದ್ವಿಪಕ್ಷೀಯ ಸರಣಿಯಲ್ಲಿ ಎರಡೇ ತಂಡಗಳು ಇರುವುದರಿಂದ ಇದನ್ನು ಆಯೋಜಿಸೋದು ಸುಲಭ. ಆದರೂ ನಾವು ಪರಿಸ್ಥಿಗಳ ಬಗ್ಗೆ ಗಮನ ಹರಿಸುತ್ತಿರುತ್ತೇವೆ,' ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ.

ಸಹಾ ಆಸ್ಟ್ರೇಲಿಯಾಕ್ಕೆ ಹೋಗೋದಾದ್ರೆ ರೋಹಿತ್, ಇಶಾಂತ್ ಯಾಕಿಲ್ಲ?!ಸಹಾ ಆಸ್ಟ್ರೇಲಿಯಾಕ್ಕೆ ಹೋಗೋದಾದ್ರೆ ರೋಹಿತ್, ಇಶಾಂತ್ ಯಾಕಿಲ್ಲ?!

ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚಿದೆ. ಇದೇ ಕಾರಣಕ್ಕೆ ಭಾರತದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಅನ್ನು ಯುಎಇಯಲ್ಲಿ ನಡೆಸಲಾಗಿತ್ತು. ಕೊರೊನಾ ಬಳಿಕ ಭಾರತದಲ್ಲಿ ನಡೆಯುತ್ತಿರುವ ದೊಡ್ಡ ಟೂರ್ನಿಯೆಂದರೆ ಇಂಡಿಯನ್ ಸೂಪರ್‌ ಲೀಗ್ ಫುಟ್ಬಾಲ್. ಕ್ರಿಕೆಟ್ ಪಂದ್ಯಗಳು ಇನ್ನಷ್ಟೇ ನಡೆಯಬೇಕಿದೆ.

Story first published: Tuesday, November 24, 2020, 18:34 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X