For Quick Alerts
ALLOW NOTIFICATIONS  
For Daily Alerts
 

ಸತತ 2ನೇ ವರ್ಷ ಐರ್ಲೆಂಡ್‌ಗೆ ಭಾರತ ಪ್ರವಾಸ: ಆಗಸ್ಟ್‌ನಲ್ಲಿ ನಡೆಯಲಿದೆ ಟಿ20 ಸರಣಿ

India will tour to Ireland for 2nd consecutive year set to play 3 T20Is in August

ಟೀಮ್ ಇಂಡಿಯಾ ಈ ವರ್ಷವೂ ಐರ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಬಗ್ಗೆ ಐರ್ಲೆಂಡ್ ಕ್ರಿಕೆಟ್ ಮಂಡಳಿ ಅಧಿಕೃತ ಘೋಷಣೆ ಮಾಡಿದೆ. ಕಳೆದ ವರ್ಷವೂ ಭಾರತ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದು ಎರಡು ಪಂದ್ಯಗಳ ಟಿ20 ಸರಣಿಯನ್ನಾಡಿತ್ತು. ಆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು ಟೀಮ್ ಇಂಡಿಯಾ.

ಮುಂದಿನ ಆಗಸ್ಟ್ ತಿಂಗಳಿನಲ್ಲಿ ಈ ಸರಣಿ ಆಯೋಜನೆಯಾಗಲಿದ್ದು ಆಗಸ್ಟ್ 18ರಿಂದ 23ರ ಮಧ್ಯೆ ಮೂರು ಪಂದ್ಯಗಳು ನಡೆಯಲಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು ಇದು ಐರಿಷ್ ಪಡೆಯ ಪ್ರತಿಭೆ ಹಾಗೂ ಸ್ಪರ್ಧಾತ್ಮಕತೆಯನ್ನು ಪ್ರತಿನಿಧಿಸುತ್ತದೆ ಎಂದು ಈ ಹೇಳಿಕೆಯಲ್ಲಿ ಹಂಚಿಕೊಂಡಿದೆ.

ಇನ್ನು ಭಾರತದ ವಿರುದ್ಧದ ಈ ಸರಣಿಗೂ ಮುನ್ನ ಐರ್ಲೆಂಡ್ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ವಿಶ್ವಕಪ್ ಸೂಪರ್ ಲೀಗ್ ಸರಣಿಗೆ ಆತೊಥ್ಯ ವಹಿಸಲಿದೆ. ಈ ಪಂದ್ಯಗಳು ಮೇ ತಿಂಗಳಲ್ಲಿಆಯೋಜನೆಯಾಗಲಿದೆ. ಬಾಂಗ್ಲಾದೇಶ ಈಗಾಗಲೇ 2023 ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದರೆ ಐರ್ಲೆಂಡ್ ಇದಕ್ಕಾಗಿ ಬಾಂಗ್ಲಾದೇಶ ವಿರುದ್ಧದ ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಬೇಕಿದೆ.

ಬಾಂಗ್ಲಾದೇಶದ ವಿರುದ್ಧದ ಮೂರು ಪಂದ್ಯಗಳ ಈ ಸರಣಿಯಲ್ಲಿ ಐರ್ಲೆಂಡ್ 3-0 ಅಂತರದಲ್ಲಿ ಗೆಲ್ಲಲು ವಿಫಲವಾದರೆ ಅರ್ಹತಾ ಸುತ್ತಿನಲ್ಲಿ ಭಾಗಿಯಾಗಿ ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಾಗುತದತದೆ. ಜೂನ್‌ನಲ್ಲಿ ಜಿಂಬಾಬ್ವೆಯಲ್ಲಿ 50 ಓವರ್‌ಗಳ ವಿಶ್ವಕಪ್‌ಗೆ ಅರ್ಹತಾ ಪಂದ್ಯಗಳು ನಡೆಯಲಿದೆ.

ಇನ್ನು ಭಾರತದ ವಿರುದ್ಧದ ಟಿ20 ಸರಣಿಯ ಬಗ್ಗೆ ಕ್ರಿಕೆಟ್ ಐರ್ಲೆಂಡ್‌ನ ಮುಖ್ಯಸ್ಥ ವಾರೆನ್ ಡ್ಯೂಟ್ರೋಮ್ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತ ಸತತ ಎರಡನೇ ವರ್ಷ ಐರ್ಲೆಂಡ್‌ಗೆ ಭೇಟಿ ನೀಡಲಿದೆ ಎಂದು ಇಂದು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದೇವೆ. ಅಲ್ಲದೆ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಸೂಪರ್ ಲೀಗ್ ಸರಣಿ ಮೇ ಆರಂಭದಲ್ಲಿ ನಡೆಯಲಿದೆ. ಇನ್ನು ಇಂಗ್ಲಂಡ್ ವಿರುದ್ಧ ಈಗಾಗಲೇ ಘೋಷಿಸಿರುವ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದ್ದು ಬಳಿಕ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಮೂರು ಪಂದ್ಯಗಳ ಏಕದಿನ ಸರಣಿಯ ಮೇಲಿದೆ" ಎಂದಿದ್ದಾರೆ.

ಕಳೆದ ವರ್ಷ ಟೀಮ್ ಇಂಡಿಯಾ ಐರ್ಲೆಂಡ್‌ಗೆ ಪ್ರವಾಸಕೈಗೊಂಡಿದ್ದಾಗ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೆ ಆ ಪ್ರವಾಸದಲ್ಲಿ ಭಾರತ ತಂಡದ ನಾಯಕನಾಗಿ ಅವರು ಅದ್ಭುತ ಯಶಸ್ಸು ಸಾಧಿಸಿದ್ದರು. ಇದೀಗ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ವೈಟ್‌ಬಾಲ್ ತಂಡದ ಖಾಯಂ ಉಪನಾಯಕನಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ.

Story first published: Saturday, March 18, 2023, 8:45 [IST]
Other articles published on Mar 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+