IAU 24-Hour Asia & Oceania Championship: ಜಪಾನ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ
ಟೋಕಿಯೋ (ಜಪಾನ್): ಜಪಾನ್‌ನಲ್ಲಿ ನಡೆದ ಐಎಯು 24-ಗಂಟೆಗಳ ಏಷ್ಯಾ ಮತ್ತು ಓಷಿಷಿಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮೇ 23 ಮತ್ತು 24 ರಂದು ನಡೆದ ಈ ಅತ್ಯಂತ ಕಠಿಣ ಹಾಗೂ ಸವಾಲಿನ ಸ್ಪರ್ಧೆಯಲ್ಲಿ ಭಾರತ ಒಟ್ಟು 5 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ, "ಭಾರತೀಯ ಅಲ್ಟ್ರಾ ರನ್ನಿಂಗ್ ಇತಿಹಾಸದಲ್ಲಿ ಸುವರ್ಣಾಕ್ಷರಗಳ ದಿನ ಎಂದು ಬರದುಕೊಂಡಿದೆ.

ಭಾರತ ಚಿನ್ನದ ಸಾಧನೆ
24 ಗಂಟೆಗಳ ಕಾಲ ನಿರಂತರವಾಗಿ ನಡೆದ ಈ ಸುದೀರ್ಘ ರೇಸ್‌ನಲ್ಲಿ ಭಾರತದ ಪುರುಷರ ತಂಡವು ಜಿದ್ದಾಜಿದ್ದಿನ ಪೈಪೋಟಿ ನಡೆಸಿ ಒಟ್ಟು 815.833 ಕಿಲೋಮೀಟರ್ ದೂರ ಕ್ರಮಿಸುವ ಮೂಲಕ ತಂಡ ಚಿನ್ನದ ಪದಕವನ್ನುತನ್ನದಾಗಿಸಿಕೊಂಡಿತು.
ವೈಯಕ್ತಿಕ ವಿಭಾಗದಲ್ಲೂ ಭಾರತದ ಓಟಗಾರರು ಮೂರೂ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಅಮರ್ ಸಿಂಗ್ ದೇವಂದ ಅವರು 226 ಲ್ಯಾಪ್‌ಗಳಲ್ಲಿ ಒಟ್ಟು 282.881 ಕಿ.ಮೀ ಕ್ರಮಿಸಿ ಚಿನ್ನದ ಪದಕ ಗೆದ್ದರು. ಗಿನೋ ಆಂಟನಿ ಒಟ್ಟು 272.894 ಕಿ.ಮೀ (218 ಲ್ಯಾಪ್) ದೂರ ಕ್ರಮಿಸಿ ಬೆಳ್ಳಿ, ಭಾರತದವರೇ ಆದ ಸೌರವ್ ಕುಮಾರ್ ರಂಜನ್ ಕಂಚಿನ ಪದಕ ಗೆದ್ದರು.
ಮಹಿಳೆಯರ ವಿಭಾಗದಲ್ಲೂ ಭಾರತದ ವನಿತೆಯರ ತಂಡ ಗಮನಾರ್ಹ ಪ್ರದರ್ಶನ ನೀಡಿದರು. ಭಾರತೀಯ ಮಹಿಳಾ ತಂಡವು ಒಟ್ಟಾರೆಯಾಗಿ 667.722 ಕಿ.ಮೀ ದೂರ ಕ್ರಮಿಸಿದ ತಂಡದ ಕಂಚಿ ಪದಕವನ್ನು ಜಯಿಸಿತು. ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ತೆಂಜಿನ್ ಡೋಲ್ಮಾ ಅವರು 228.939 ಕಿ.ಮೀ ದೂರವನ್ನು ಕ್ರಮಿಸಿ ನಾಲ್ಕನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದರು.
ಇತರ ದೇಶಗಳ ಸಾಧನೆ
ಸ್ಪರ್ಧೆಯ ಆತಿಥೇಯ ರಾಷ್ಟ್ರವಾದ ಜಪಾನ್, ಪುರುಷರ ವಿಭಾಗದಲ್ಲಿ ಮಾಸಾಕಿ ಕಿಮೋಟೋ ಅವರ ನೇತೃತ್ವದಲ್ಲಿ ಬೆಳ್ಳಿ ಪದಕ (754.726 ಕಿ.ಮೀ) ಗಳಿಸಿತು. ಆಸ್ಟ್ರೇಲಿಯಾ ತಂಡವು ಪುರುಷರ ವಿಭಾಗದಲ್ಲಿ ಫಿಲ್ ಗೋರ್ (253.392 ಕಿ.ಮೀ) ಅವರ ಸಾಹಸದಿಂದಾಗಿ ಕಂಚಿನ ಪದಕವನ್ನು ಹಾಗೂ ಮಹಿಳಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು (684.450 ಕಿ.ಮೀ) ತನ್ನದಾಗಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications