IND vs NZ: ಭಾರತದ ಸಂಘಟಿತ ಆಟಕ್ಕೆ ಗೆಲುವಿನ 'ಶ್ರೇಯ'; ಸೆಮಸ್‌ನಲ್ಲಿ ಆಸ್ಟ್ರೇಲಿಯಾ ಎದುರಾಳಿ
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ 2025ರ ಅಂತಿಮ ಗುಂಪು ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡ ಎದುರು ನ್ಯೂಜಿಲೆಂಡ್ 44 ರನ್‌ಗಳಿಂದ ಸೋತಿದೆ. ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಭಾರತ ಆಗ್ರಸ್ಥಾನ ಪಡೆದಿದೆ.
ಮಾರ್ಚ್ 4 ರಂದು ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಭಾರತ ಎದುರಿಸಲಿದೆ. ಮತ್ತೊಂದೆಡೆ ಎ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ಎದುರು ಆಡಲಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 45.3 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 44 ರನ್‌ಗಳಿಂದ ಗೆದ್ದಿತು.
ವಿಲಿಯಮ್ಸನ್ ಹೋರಾಟ ವ್ಯರ್ಥ
ಭಾರತ ನೀಡಿದ 250 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುವಾಗ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಇಬ್ಬರೂ ಆರಂಭಿಕರು 50 ರನ್‌ಗಳ ಒಳಗೆ ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, ಕೇನ್ ವಿಲಿಯಮ್ಸನ್ (81) ಒಂದು ತುದಿಯಲ್ಲಿ ದೃಢವಾಗಿ ನಿಂತು ತಂಡದ ಗೆಲುವಿಗೆ ಹೋರಾಡಿದರು. ವಿಲಿಯಮ್ಸನ್ ಆಟ ನೋಡಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನ್ಯೂಜಿಲೆಂಡ್ ಪಂದ್ಯವನ್ನು ಗೆಲ್ಲುತ್ತದೆ ಅಂದುಕೊಂಡಿದ್ದರು. ಆದರೆ, ಅವರಿಗೆ ಯಾರಿಂದಲೂ ಬೆಂಬಲ ಸಿಗಲಿಲ್ಲ. ಕೊನೆಗೆ ಅವರು ಅಕ್ಸರ್ ಪಟೇಲ್ ಎಸೆತದಲ್ಲಿ ಔಟಾದರು. ಇದಾದ ನಂತರ, ಕೊನೆಯ ಓವರ್‌ಗಳಲ್ಲಿ ಸತತ ವಿಕೆಟ್‌ಗಳನ್ನು ಪಡೆಯುವ ಮೂಲಕ ವರುಣ್ ಚಕ್ರವರ್ತಿ ಕಿವೀಸ್ ಪಡೆಯನ್ನು ಕಟ್ಟಿಹಾಕಿದರು.
ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ಮಧ್ಯಮ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ವರುಣ್ 5 ವಿಕೆಟ್ ಪಡೆದರೆ, ಕುಲದೀಪ್ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಅಕ್ಸರ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ಟಾಪ್ -3 ಬ್ಯಾಟರ್‌ಗಳು 30 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಶುಭಮನ್ ಗಿಲ್ (15), ರೋಹಿತ್ ಶರ್ಮಾ (2) ಮತ್ತು ವಿರಾಟ್ ಕೊಹ್ಲಿ (11) ಬೇಗ ವಿಕೆಟ್ ಕಳೆದುಕೊಂಡರು. ಟೀಮ್ ಇಂಡಿಯಾದ ಆರಂಭಿಕ ಹಿನ್ನಡೆಗಳ ನಂತರ, ಶ್ರೇಯಸ್ ಅಯ್ಯರ್ ಮತ್ತು ಅಕ್ಸರ್ ಪಟೇಲ್ ಜವಾಬ್ದಾರಿ ಇನ್ನಿಂಗ್ಸ್ ಆಡಿದರು.
ಈ ಜೋಡಿ ನಾಲ್ಕನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ಆಡುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ಅಕ್ಷರ್ 42 ರನ್ ಗಳಿಸಿ ಔಟಾದರು. ಅರ್ಧಶತಕ ಗಳಿಸಿ ಅದ್ಭುತವಾಗಿ ಆಡುತ್ತಿದ್ದ ಅಯ್ಯರ್ ಕೂಡ 79 ರನ್ ಗಳಿಸಿದಾಗ ಕ್ಯಾಚ್ ಔಟಾದರು. ಇದಾದ ನಂತರ ಹಾರ್ದಿಕ್ ಪಾಂಡ್ಯ ಕೊನೆಯ ಓವರ್‌ಗಳಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡಿ 45 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ಭಾರತ 249 ರನ್‌ಗಳ ಸವಾಲಿನ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications