Cricket u19 Asia Cup: ಭಾರತಕ್ಕೆ 10 ವಿಕೆಟ್ ಜಯ: ವೈಭವ್ ಸೂರ್ಯಂವಶಿ ಅಜೇಯ 76
ಅಂಡರ್ 19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ, ಯುಎಇ ವಿರುದ್ಧ 10 ವಿಕೆಟ್ ಅಮೋಘ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಯುಎಇ 44 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 143 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಭಾರತ "ಎ" ಗುಂಪಿನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಎಇ ತಂಡದ ಆರಂಭ ಕಳಪೆ ಆಗಿತ್ತು. ಆರಂಭಿಕರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ 17 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಯುಎಇ ಪರ ಎಥನ್ ಡಿಸೋಜಾ 17 ರನ್ ಸೇರಿಸಿ ಮೂರನೇ ವಿಕೆಟ್ ರೂಪದಲ್ಲಿ ಔಟ್ ಆದರು.

ಯುಎಇ ತಂಡದ ಪರ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಅಕ್ಷತ್ ರಾಜ್ 26 ರನ್‌ಗಳಿಗೆ ಆಟ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ರಯಾನ್ 48 ಎಸೆತಗಳಲ್ಲಿ 35 ರನ್ ಸಿಡಿಸಿದರು. ಉಳಿದಂತೆ ಉದ್ದೀಶ್ ಸೂರಿ 16 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಯುಎಇ ಪರ ಯಾವ ಬ್ಯಾಟರ್ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಟೀಮ್ ಇಂಡಿಯಾದ ಕರಾರುವಕ್ ದಾಳಿಗೆ ಯುಎಇ ಕುಸಿತ ಕಂಡಿತು.
ಭಾರತದ ಪರ ಯುಧಾಜಿತ್ ಗುಹಾ 15 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಚೇತನ್ ಶರ್ಮಾ ಹಾಗೂ ಕರ್ನಾಟಕದ ಯುವ ಆಟಗಾರ ಹಾರ್ದಿಕ್ ರಾಜ್ ತಲಾ ಎರಡು ವಿಕೆಟ್ ಪಡೆದರು.
ಭರ್ಜರಿ ಆರಂಭ
ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಟೀಮ್ ಇಂಡಿಯಾದ ಆರಂಭಿಕರಾದ ಆಯುಷ್ ಮಾತ್ರೆ ಹಾಗೂ ವೈಭವ್ ಸೂರ್ಯವಂಶಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಅಗತ್ಯ ಇದ್ದ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿತು. ಗೆಲುವಿಗೆ ಅಗತ್ಯ ರನ್‌ಗಳನ್ನು ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿತು. ಈ ಜೋಡಿ 16.1 ಓವರ್‌ಗಳಲ್ಲಿ 143 ರನ್ ಸಿಡಿಸಿ ಗೆಲುವು ದಾಖಲಿಸಿತು.
ಆರಂಭಿಕರಾದ ಆಯುಷ್ ಹಾಗೂ ವೈಭವ್ ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದರು. ಆಯುಷ್ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 67 ರನ್ ಸಿಡಿಸಿದರು. ಇನ್ನು ವೈಭವ್ ಸೂರ್ಯವಂಶಿ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 76 ರನ್ ಸಿಡಿಸಿದರು.
ಭಾರತಕ್ಕೆ ಅಗ್ರ ಸ್ಥಾನ
ಭಾರತ ಅಂಡರ್ 19 ಏಷ್ಯಾಕ್ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಡಿದ ಮೂರು ಪಂದ್ಯಗಳಲ್ಲಿ 2 ಜಯ, 1 ಸೋಲು ಕಂಡಿದ್ದು, 4 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಪಾಕ್ ಸಹ ಇಷ್ಟೇ ಅಂಕ ಕಲೆ ಹಾಕಿ ಎರಡನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications