Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂಡರ್ 18 ಏಷ್ಯಾ ಕಪ್ ಹಾಕಿ: ಜಪಾನ್‌ ವಿರುದ್ಧ ಗೆದ್ದ ಭಾರತ ಚಾಂಪಿಯನ್

ಜಪಾನ್‌ನಲ್ಲಿ ನಡೆದ ಏಷ್ಯಾ ಕಪ್ ಅಂಡರ್-18 ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ತಂಡವು ಅದ್ಭುತ ಪ್ರದರ್ಶನ ನೀಡಿ 4-1 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿ ಚಿನ್ನದ ಪದಕ ಗೆದ್ದಿದೆ. ಮಹತ್ವದ ಫೈನಲ್ ಪಂದ್ಯದಲ್ಲಿ ಭರವಸೆಯ ಆಟಗಾರ ಆಶಿಶ್ ತಾನಿ ಮೂರು ಗೋಲು ಸಿಡಿಸಿ ಜಯದಲ್ಲಿ ಮಿಂಚಿದರು. ಈ ಜಯದ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಸಾಧನೆ ಮಾಡಿದೆ. ಭಾರತ ಯುವ ತಂಡದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸಹ ಅಭಿನಂದನೆ ತಿಳಿಸಿದ್ದಾರೆ.

ಜಪಾನ್ ವಿರುದ್ಧದ ಅಂತಿಮ ಪಂದ್ಯದಲ್ಲಿ, ಭಾರತ ತಂಡವು ಮೊದಲ ಕ್ವಾರ್ಟರ್‌ನಿಂದ ಎದುರಾಳಿ ಮೇಲೆ ಒತ್ತಡವನ್ನು ಹೇರುವಲ್ಲಿ ಸಫಲವಾಯಿತು. ಪಂದ್ಯದ ಎರಡನೇ ನಿಮಿಷದಲ್ಲಿ ಆಶಿಶ್ ತಾನಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದರು. ಈ ಮೂಲಕ ಟೀಮ್ ಇಂಡಿಯಾ ಆರಂಭದಲ್ಲಿ 1-0 ಮುನ್ನಡೆ ಸಾಧಿಸಿತು. ಅಲ್ಲದೆ ಮೊದಲ ಅವಧಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿತು.

India

ಎರಡನೇ ಅವಧಿಯಲ್ಲೂ ಭಾರತ ಎದುರಾಳಿಯ ತಂತ್ರವನ್ನು ಮೆಟ್ಟಿನಿಂತು ಅಬ್ಬರಿಸಿತು. ಈ ಅವಧಿಯಲ್ಲಿ ಭಾರತ ಎದುರಾಳಿಗೆ ಗೋಲು ಬಾರಿಸುವ ಆಸೆಗೆ ಪೆಟ್ಟು ನೀಡಿದರು. ಭಾರತದ ಪರ ಎರಡನೇ ಅವಧಿಯ ಅಂತ್ಯದಲ್ಲಿ ಆಶಿಶ್ 28ನೇ ನಿಮಿಷದಲ್ಲಿ, ನಾಯಕ ಕೇತನ್ ಕುಶ್ವಾಹ 30ನೇ ನಿಮಿಷದಲ್ಲಿ ಗೋಲನ್ನು ಬಾರಿಸಿ ಅಂತರವನ್ನು ಹಿಗ್ಗಿಸಿದರು. ಇನ್ನು ಮೂರನೇ ಅವಧಿಯಲ್ಲಿ ಆಶಿಶ್‌ 34 ನೇ ನಿಮಿಷದಲ್ಲಿ ಗೋಲು ಬಾರಿಸಿ ಮಿಂಚಿದರು

ಭಾರತ ತಂಡದ ಅದ್ಭುತ ಗೆಲುವನ್ನು ಗುರುತಿಸಿ, ಹಾಕಿ ಇಂಡಿಯಾ ಚಿನ್ನದ ಪದಕ ಗೆದ್ದ ಪ್ರತಿಯೊಬ್ಬ ಆಟಗಾರನಿಗೆ ₹3 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ ₹1.5 ಲಕ್ಷ ನಗದು ಬಹುಮಾನವನ್ನು ಘೋಷಿಸಿತು.

ಪ್ರಧಾನಿ ಮೋದಿ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, 18 ವರ್ಷದೊಳಗಿನವರ ಹಾಕಿ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ಪುರುಷರ ತಂಡವನ್ನು ಅಭಿನಂದಿಸಿದರು, "2026 ರ ಪುರುಷರ ಅಂಡರ್ 18 ಏಷ್ಯಾ ಕಪ್ ಗೆದ್ದ ಭಾರತೀಯ ಪುರುಷರ U18 ಹಾಕಿ ತಂಡಕ್ಕೆ ಅಭಿನಂದನೆಗಳು. ತಂಡವು ಪಂದ್ಯಾವಳಿಯಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದೆ. ಅಲ್ಲದೆ ಫೈನಲ್‌ನಲ್ಲಿ ಸ್ಮರಣೀಯ ಗೆಲುವು ಸಾಧಿಸಿತು ಎಂದು ಪ್ರಧಾನಿ ಬರೆದಿದ್ದಾರೆ.

ಮಹಿಳಾ ತಂಡಕ್ಕೆ ಕಂಚಿನ ಪದಕ

ಪುರುಷರ ತಂಡದೊಂದಿಗೆ, ಭಾರತೀಯ ಮಹಿಳಾ U18 ಹಾಕಿ ತಂಡವು ಸಹ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದಿದೆ. ಭಾರತೀಯ ಮಹಿಳಾ ತಂಡವು ಕಂಚಿನ ಪದಕ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿತು. ಈ ಸಾಧನೆ ಮಾಡಿದ ಪ್ರತಿಯೊಬ್ಬ ಆಟಗಾರ್ತಿಯರಿಗೆ ₹100,000 ಮತ್ತು ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ₹50,000 ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ.

Story first published: Saturday, June 6, 2026, 22:49 [IST]
Other articles published on Jun 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+