IND vs AUS T20: ಭಾರತಕ್ಕೆ 187 ರನ್ ಗುರಿ ನೀಡಿದ ಆಸ್ಟ್ರೇಲಿಯಾ
ಹೋಬಾರ್ಟ್: ಟೀಮ್ ಡೇವಿಡ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಬಾರಿಸಿದ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಮೂರನೇ ಟಿ20 ಪಂದ್ಯದಲ್ಲಿ 187 ರನ್‌ಗಳ ಗುರಿಯನ್ನು ಭಾರತಕ್ಕೆ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭ ಕಳಪೆಯಾಗಿತ್ತು. ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ (6), ಜೋಶ್ ಇಂಗ್ಲೀಷ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇವರಿಬ್ಬರಿಗೂ ಟೀಮ್ ಇಂಡಿಯಾದ ವೇಗಿ ಅರ್ಷದೀಪ್ ಸಿಂಗ್ ಖೆಡ್ಡಾ ತೋಡುವಲ್ಲಿ ಸಫಲರಾದರು. ಪರಿಣಾಮ ಆಸೀಸ್ 14 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೂರನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಹಾಗೂ ನಾಯಕ ಮಿಚೆಲ್ ಮಾರ್ಷ್ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಈ ಜೋಡಿ ಭಾರತೀಯ ಬೌಲರ್‌ಗಳ ರಣತಂತ್ರವನ್ನು ಮೆಟ್ಟಿನಿಂತು ರನ್ ಕಲೆ ಹಾಕಿತು. ಈ ವೇಳೆ ಈ ಜೋಡಿ 35 ಎಸೆತಗಳಲ್ಲಿ 59 ರನ್ ಸೇರಿಸಿತು. 14 ಎಸೆತಗಳಲ್ಲಿ 11 ರನ್ ಬಾರಿಸಿದ್ದ ಮಿಚೆಲ್ ಮಾರ್ಷ್ ಬಿಗ್ ಹಿಟ್ ಬಾರಿಸಲು ಹೋಗಿ ವರುಣ್ ಚಕ್ರವರ್ತಿ ಎಸೆತದಲ್ಲಿ ತಿಲಕ್ ವರ್ಮಾ ಅವರಿಗೆ ಕ್ಯಾಚ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಓವನ್ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. 5ನೇ ವಿಕೆಟ್‌ಗೆ ಮಾರ್ಕಸ್ ಹಾಗೂ ಟೀಮ್ ಡೇವಿಡ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಜೋಡಿ 27 ಎಸೆತಗಳಲ್ಲಿ 45 ರನ್ ಸೇರಿಸಿತು. ಈ ವೇಳೆ ಕೇವಲ 38 ಎಸೆತಗಳಲ್ಲಿ 74 ರನ್ ಸೇರಿಸಿದ್ದ ಟೀಮ್ ಡೇವಿಡ್ ಶಿವಂ ದುಬೆ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರ ಇನಿಂಗ್ಸ್‌ನಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ.
ಸ್ಟೋಯ್ನಿಸ್ ಅರ್ಧಶತಕ
ಮಾರ್ಕಸ್ ಸ್ಟೋಯ್ನಿಸ್ ಹಾಗೂ ಮ್ಯಾಥ್ಯೂ ಶಾರ್ಟ್ ಜೋಡಿ ಸಹ ಸೊಗಸಾದ ಆಟವನ್ನು ಆಡಿತು. ಈ ಜೋಡಿ 39 ಎಸೆತಗಳಲ್ಲಿ 64 ರನ್ ಸೇರಿಸಿ ಮಿಂಚಿತು. ಈ ವೇಳೆ ಸ್ಟೋಯ್ನಿಸ್ 8 ಬೌಂಡರಿ, 2 ಸಿಕ್ಸರ್ ನೆರವಿನಿಂದ 64 ರನ್ ಸಿಡಿಸಿ ತಂಡದ ಮೊತ್ತವನ್ನ ಹಿಗ್ಗಿಸುವಲ್ಲಿ ಸಫಲರಾದರು.
ಮ್ಯಾಥ್ಯೂ ಶಾರ್ಟ್ 15 ಎಸೆತಗಳಲ್ಲಿ ಅಜೇಯ 26 ರನ್ ಕಲೆ ಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆ ಹಾಕಿತು.
ಅರ್ಷದೀಪ್ ಸಿಂಗ್ ಅಬ್ಬರ
ಟೀಮ್ ಇಂಡಿಯಾದ ಪರ ಮೂರನೇ ಟಿ20 ಕ್ರಿಕೆಟ್‌ನಲ್ಲಿ ಆಡುವ ಅವಕಾಶವನ್ನು ಪಡೆದ ಅರ್ಷದೀಪ್ ಸಿಂಗ್ 4 ಓವರ್ ಬೌಲಿಂಗ್ ನಡೆಸಿ 35 ರನ್ ನೀಡಿ 3 ವಿಕೆಟ್ ಕಬಳಿಸಿದರು. ಸ್ಪಿನ್ ಬೌಲರ್ ವರುಣ್ ಚಕ್ರವತ್ತಿ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications