Asia Cup T20: ಸಂಜು ಸ್ಯಾಮ್ಸನ್ ಅರ್ಧಶತಕ: ಓಮನ್‌ಗೆ 189 ರನ್ ಗುರಿ ನೀಡಿದ ಭಾರತ
ಭರವಸೆಯ ಆಟಗಾರ ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ, ಏಷ್ಯಾ ಕಪ್ ಟಿ20 ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿ 188 ರನ್ ಕಲೆ ಹಾಕಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆರಂಭಿಕರಾಗಿ ಕಣಕ್ಕೆ ಇಳಿದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಶುಭಮನ್ ಗಿಲ್ 5 ರನ್ ಬಾರಿಸಿದ್ದಾಗ ಬೋಲ್ಡ್ ಆದರು. ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ ಟೀಮ್ ಇಂಡಿಯಾ ಅಂದುಕೊಂಡಿದ್ದ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 34 ರನ್‌ಗಳಿಗೆ 66 ರನ್ ಸೇರಿಸಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 38 ರನ್ ಬಾರಿಸಿ ಔಟ್ ಆದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇವರು ರನೌಟ್ ಆದರು. ನಾಲ್ಕನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಜೋಡಿ 23 ಎಸೆತಗಳಲ್ಲಿ 45 ರನ ಸೇರಿಸಿತ. ಅಕ್ಷರ್ ಪಟೇಲ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 26 ರನ್ ಬಾರಿಸಿ ಔಟ್ ಆದರು. ಆಲ್‌ರೌಂಡರ್ ಶಿವಂ ದುಬೆ 5 ರನ್ ಬಾರಿಸಿ ಔಟ್ ಆದರು.
ಸಂಜು ಭರ್ಜರಿ ಬ್ಯಾಟಿಂಗ್
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ನಡೆಸಿದರು. ಟಾಪ್ ಆರ್ಡರ್‌ನಲ್ಲಿ ಬ್ಯಾಟ್ ಮಾಡಿದ ಸಂಜು 45 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ನೆವಿನಿಂದ 56 ರನ್ ಬಾರಿಸಿ ಔಟ್ ಆದರು. ಸಂಜು ಔಟ್ ಆಗುವ ಮುನ್ನ ತಿಲಕ್ ವರ್ಮ ಅವರೊಂದಿಗೆ 26 ಎಸೆತಗಳಲ್ಲಿ 41 ರನ್ ಸೇರಿಸಿತು.ಭರವಸೆಯ ಆಟಗಾರ ತಿಲಕ್ ವರ್ಮಾ 18 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್ ಬಾರಿಸಿದರು.
ಹರ್ಷಿತ್ ರಾಣಾ ಉತ್ತಮ ಬ್ಯಾಟಿಂಗ್ ನಡೆಸಿದರು. ಇವರು 1 ಸಿಕ್ಸರ್ ಸಹಾಯದಿಂದ ಅಜೇಯ 13 ರನ್ ಬಾರಿಸಿದರು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟ್ ಮಾಡಲು ಬಾರಲೇ ಇಲ್ಲ. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಸೇರಿಸಿತು.
ರೋಹಿತ್ ನೆನಪಿಸಿದ ಸೂರ್ಯ
ಟಾಸ್ ಗೆದ್ದ ಭಾರತದ ನಾಯಕ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ವೇಳೆ ನಿಮ್ಮ ತಂಡದಲ್ಲಿ ಏನಾದ್ರೂ ಬದಲಾವಣೆಗಳು ಇವೆಯಾ ಎಂದು ಕೇಳಿದಾಗ, ಸೂರ್ಯ ನಮ್ಮ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಹರ್ಷಿತ್ ರಾಣಾ ಅವರ ಹೆಸರನ್ನು ಹೇಳಿದ ಸೂರ್ಯ, ಇನ್ನೊಂದು ಹೆಸರನ್ನು ನೆನಪು ಹಾರಿದರು. ತುಂಬ ಹೊತ್ತು ನೆನಪಿಸಿಕೊಂಡರು. ಆಟಗಾರನ ಹೆಸರು ನೆನಪಾಗದೇ ಇದ್ದಾಗ ನಾನು ರೋಹಿತ್ ನಂತೆ ಆಗಿದ್ದೇನೆ ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications