Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's Asia Cup Rising Stars: ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್

ಬ್ಯಾಂಕಾಕ್: ಸಂಘಟಿತದ ಆಟದ ಪ್ರದರ್ಶನ ನೀಡಿದ ಭಾರತದ ಮಹಿಳಾ ತಂಡ ಏಷ್ಯಾ ಕಪ್‌ ರೈಸಿಂಗ್ ಸ್ಟಾರ್ಸ್‌ ಫೈನಲ್‌ ಟೂರ್ನಿಯಲ್ಲಿ 46 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಭಾರತ "ಎ" ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಭಾರತದ ಪರ ಇನಿಂಗ್ಸ್‌ ಆರಂಭಿಸಿದ ನಂದಿನಿ ಕಶ್ಯಪ್ (8) ಹಾಗೂ ದಿನೇಶ್ ವೃಂದಾ (19) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ್ತಿ ಅನುಷ್ಕಾ ಶರ್ಮಾ (8), ಮಿನ್ನು ಮಣಿ (0) ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಈ ಆಟಗಾರರು ಬಾಂಗ್ಲಾದೇಶದ ಬೌಲರ್‌ಗಳ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. 44 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಭಾರತ ಮಹಿಳಾ ತಂಡ ಸಂಕಷ್ಟಕ್ಕೆ ಸಿಲುಕಿತು.

India Women

8.1 ಓವರ್‌ಗಳಲ್ಲಿ ಟಾಪ್‌ ಆರ್ಡರ್ ಬ್ಯಾಟರ್‌ಗಳ ಪೆವಿಲಿಯನ್ ಸೇರಿದರೂ ತಂಡದ ಮೇಲೆ ಒತ್ತಡ ಬೀಳದಂತೆ ಬ್ಯಾಟ್ ಮಾಡಿದ ಹೆಗ್ಗಳಿಕೆ ತೇಜಲ್ ಹಸಬ್ನಿಸ್ ಹಾಗೂ ನಾಯಕಿ ರಾಧಾ ಯಾದವ್ ಅವರಿಗೆ ಸಲ್ಲುತ್ತದೆ. ಈ ಜೋಡಿ ಭಾರತ ಮಿಡ್ಲ್ ಓವರ್‌ಗಳಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಈ ಜೋಡಿ 16.3 ಓವರ್‌ಗಳ ವರೆಗೆ ವಿಕೆಟ್‌ ಬೀಳದಂತೆ ನೋಡಿಕೊಂಡು 69 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದ ನಾಯಕಿ ರಾಧಾ ಯಾದವ್ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 36 ರನ್‌ ಬಾರಿಸಿ ಔಟ್ ಅದರು. ಯುವ ಆಟಗಾರ್ತಿ ತೇಜಲ್ ಹಸಬ್ನಿಸ್ 34 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 51 ರನ್‌ ಬಾರಿಸಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 134 ರನ್ ಸೇರಿಸಿತು. ಬಾಂಗ್ಲಾ ತಂಡದ ಪರ ಫಾಹಿಮಾ ಖಾತುನ್ 4ವಿಕೆಟ್‌ ಉರುಳಿಸಿದರು.

ರನ್‌ ಕಲೆ ಹಾಕಲು ಪರದಾಟ

135 ರನ್‌ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾದೇಶ ತಂಡದ ಆರಂಭ ಕಳಪೆಯಾಗಿತ್ತು. ಇಶ್ಮಾ ತಂಜಿಮ್ 3 ರನ್‌ ಬಾರಿಸಿ ಔಟ್ ಆದರು. 3 ಬೌಂಡರಿ ನೆರವಿನಿಂದ 20 ರನ್‌ ಸಿಡಿಸಿದ್ದ ಶಮೀಮಾ ಸುಲ್ತಾನ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಬಾಂಗ್ಲಾ ಪರ ಸರ್ಮಿನ್ ಸುಲ್ತಾನಾ (18), ಸಾದಿಯಾ ಅಕ್ಟರ್ (10), ಫಾಹಿಮಾ ಖಾತುನ್ (14) ಎರಂಡಕಿಯ ರನ್‌ ಕಲೆ ಹಾಕಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಬಾಂಗ್ಲಾ 19.1 ಓವರ್‌ಗಳಲ್ಲಿ 88 ರನ್‌ ಸಿಡಿಸಿ ಆಲೌಟ್ ಆಯಿತು. ಭಾರತದ ಪರ ಪ್ರೇಮಾ ರಾವತ್ 3 ವಿಕೆಟ್‌ ಕಬಳಿಸಿದರು.

Story first published: Sunday, February 22, 2026, 17:57 [IST]
Other articles published on Feb 22, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+