ದಾಖಲೆ ರನ್ ಚೇಸ್‌ನೊಂದಿಗೆ ಆಸ್ಟ್ರೇಲಿಯಾ ಸದೆಬಡಿದ ಭಾರತದ ವನಿತೆಯರು

ಮೆಲ್ಬರ್ನ್, ಫೆಬ್ರವರಿ 8: ಮೆಲ್ಬರ್ನ್‌ನ ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಶನಿವಾರ (ಫೆಬ್ರವರಿ 8) ನಡೆದ ಮಹಿಳಾ ಟಿ20 ತ್ರಿಕೋನ (ಭಾರತ-ಆಸ್ಟ್ರೇಲಿಯಾ-ಇಂಗ್ಲೆಂಡ್) ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಭಾರತದ ವನಿತಾ ತಂಡ, 7 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಅಷ್ಟೇ ಅಲ್ಲ ದಾಖಲೆಯ ರನ್ ಚೇಸ್‌ಗಾಗಿಯೂ ಭಾರತ ಮಹಿಳಾ ತಂಡ ಗಮನ ಸೆಳೆದಿದೆ.
ಭಾರತದ ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಸುಲಭ ಜಯ ಗಳಿಸಿದೆ. ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಭಾರತದ ದೀಪ್ತೀ ಶರ್ಮಾ 2 ವಿಕೆಟ್ ಉರುಳಿಸಿದ್ದೂ ಎದುರಾಳಿಯ ರನ್ ಕದಿಯುವಿಕೆಗೆ ಕಡಿವಾಣ ಹಾಕಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ವನಿತಾ ತಂಡದ ಪರ ಆಶ್ಲೀ ಗಾರ್ಡ್ನರ್ 93 ರನ್ (57 ಎಸೆತ), ನಾಯಕಿ ಮೆಗ್ ಲ್ಯಾನಿಂಗ್ 37, ಬೆತ್ ಮೂನಿ 16, ಎಲ್ಲಿಸ್ ಪೆರ್ರಿ 13 ರನ್ ಕೊಡುಗೆಯಿತ್ತರು. ಆಸೀಸ್ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 173 ರನ್ ಮಾಡಿತು.
ಗುರಿ ಬೆಂಬತ್ತಿದ ಭಾರತ, ಶೆಫಾಲಿ ವರ್ಮಾ 49, ಸ್ಮೃತಿ ಮಂಧಾನ 55, ಜೆಮಿಮಾ ರೋಡ್ರಿಗಸ್ 30, ನಾಯಕಿ ಹರ್ಮನ್‌ಪ್ರೀತ್ ಅಜೇಯ 20, ದೀಪ್ತಿ ಶರ್ಮಾ 11 ರನ್‌ನೊಂದಿಗೆ 19.4 ಓವರ್‌ಗೆ 3 ವಿಕೆಟ್ ಕಳೆದು 117 ರನ್ ಮಾಡಿತು. ಆಶ್ಲೀ ಗಾರ್ಡ್ನರ್ ಪಂದ್ಯಶ್ರೇಷ್ಠೆ ಎನಿಸಿದರು.
ದಾಖಲೆ ಬರೆದ ಭಾರತದ ವನಿತೆಯರು
ಈ ಗೆಲುವಿನೊಂದಿಗೆ ಮೆಲ್ಬರ್ನ್‌ನ ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆಗೆ ಭಾರತದ ವನಿತೆಯರು ಕಾರಣರಾಗಿದ್ದಾರೆ. ಮೆಲ್ಬರ್ನ್‌ನ ಜಂಕ್ಷನ್‌ನಲ್ಲಿ ಅತ್ಯಧಿಕ ಮೊತ್ತ ಮತ್ತು ಚೇಸಿಂಗ್‌ನ ಅತ್ಯಧಿಕ ರನ್ ಆಗಿ ಭಾರತದ 177/3 (19.4 Ov) ಸಾಧನೆ ದಾಖಲಿಸಲ್ಪಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications