Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್‌: ಚಿನ್ನದ ಪದಕ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ: ಲಂಕಾ ವಿರುದ್ಧ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್‌ ವಿಭಾಗದ ಫೈನಲ್ಸ್‌ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದೆ. ಈ ಮೂಲಕ ಭಾರತ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡಂತಾಗಿದೆ. ಬ್ಯಾಟಿಂಗ್‌ಗೆ ಸವಾಲಾಗಿದ್ದ ಪಿಚ್‌ನಲ್ಲಿ ಸಾಧಾರಣ ಮೊತ್ತವನ್ನು ಪೇರಿಸಿದ ಬಳಿಕ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಭಾರತ ಅರ್ಹವಾಗಿಯೇ ಗೆದ್ದು ಬೀಗಿದೆ.

ಬೌಲಿಂಗ್‌ನಲ್ಲಿ ಆರಂಭದಿಂದಲೇ ಯಶಸ್ಸು ಪಡೆದ ಭಾರತ ತಂಡ ಶ್ರೀಲಂಕಾ ತಂಡಕ್ಕೆ ಯಾವ ಹಂತದಲ್ಲಿಯೂ ದೊಡ್ಡ ಅವಕಾಶ ನೀಡಲೇ ಇಲ್ಲ. ನಾಲ್ಕನೇ ವಿಕೆಟ್‌ಗೆ ಹಸಿನಿ ಪೆರೆರ ಹಾಗೂ ನೀಲಾಕ್ಷಿ ಡಿಸಿಲ್ವ ಉತ್ತಮ ಜೊತೆಯಾಟ ನೀಡಿದರೂ ಈ ಜೊತೆಯಾಟ ಅಪಾಯಕಾರಿಯಾಗುವ ಮುನ್ನ ಬೇರ್ಪಡಿಸುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಭಾರತದ ಪರವಾಗಿ ತಿತಾಸ್ ಸಧು ಮೂರು ವಿಕೆಟ್ ಕಬಳಿಸಿದರೆ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಪಡೆದುಕೊಂಡರು. ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ಹಾಗೂ ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

India Women Clinches Gold at Asian Games 2023 Womens Cricket by Beating Sri Lanka Women

ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ತಂಡ ಮೊದಲ ವಿಕೆಟನ್ನು ಶೀಘ್ರದಲ್ಲಿಯೇ ಕಳೆದುಕೊಂಡಿತಾದರೂ ನಂತರ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟ ಪಡೆದುಕೊಂಡಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 9 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಸ್ಮೃತಿ ಮಂಧಾನ ಹಾಗೂ ಜಮಿಮಾ ರೋಡ್ರಿಗಸ್ 73 ರನ್‌ಗಳ ಉತ್ತಮ ಜೊತೆಯಾಟವನ್ನು ನೀಡಿದರು. ರನ್‌ಗಳಿಸಲು ಸವಾಲಾಗಿದ್ದ ಪಂದ್ಯದಲ್ಲಿ ಈ ಜೋಡಿ ವೇಗವ ಆಗಿ ರನ್‌ಗಳಿಸದಿದ್ದರೂ ಈ ಜೊತೆಯಾಟ ಭಾರತ ತಂಡಕ್ಕೆ ದೊಡ್ಡ ಬಲ ತುಂಬಿತು.

ಸ್ಮೃತಿ ಮಂಧಾನ 45 ಎಸೆತಗಳಲ್ಲಿ 46 ರನ್‌ಗಳನ್ನು ಗಳಿಸುವ ಮೂಲಕ ಈ ಪಂದ್ಯದಲ್ಲಿ ಭಾರತದ ಪರವಾಗಿ ಅತಿ ಹೆಚ್ಚಿ ನಸ್ಕೋರ್ ಗಳಿಸಿದ ಆಟಗಾರ್ತಿ ಎನಿಸಿದರು. 89 ರನ್‌ಗಳಾಗಿದ್ದಾಗ ಈ ಜೊಡಿ ಬೇರ್ಪಟ್ಟಿತು. ನಂತರ ಬಂದ ಆಟಗಾರ್ತಿಯರಿಂದ ಉತ್ತಮ ಜೊತೆಯಾಟ ಬಾರಲಿಲ್ಲ. ಜಮಿಮಾ 40 ಎಸೆತಗಳಲ್ಲಿ 42 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 116 ರನ್‌ಗಳನ್ನು ಗಳಿಸಲು ಶಕ್ತವಾಗಿತ್ತು.

ಭಾರತ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮನ್ಜೋತ್ ಕೌರ್, ಪೂಜಾ ವಸ್ತ್ರಾಕರ್, ಟೈಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್

ಬೆಂಚ್: ಕನಿಕಾ ಅಹುಜಾ, ಮಿನ್ನು ಮಣಿ, ಅಂಜಲಿ ಸರ್ವಾಣಿ, ಬಾರೆಡ್ಡಿ ಅನುಷಾ, ಉಮಾ ಚೆಟ್ರಿ

ಶ್ರೀಲಂಕಾ ಆಡುವ ಬಳಗ: ಚಾಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ವಿಶ್ಮಿ ಗುಣರತ್ನೆ, ನೀಲಾಕ್ಷಿ ಡಿ ಸಿಲ್ವಾ, ಹಾಸಿನಿ ಪೆರೇರಾ, ಓಷದಿ ರಣಸಿಂಗ್, ಇನೋಕಾ ರಣವೀರ, ಕವಿಶಾ ದಿಲ್ಹಾರಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಇನೋಶಿ ಪ್ರಿಯದರ್ಶನಿ
ಬೆಂಚ್: ಹರ್ಷಿತಾ ಸಮರವಿಕ್ರಮ, ಅಚಿನಿ ಕುಲಸೂರ್ಯ, ಇಮೇಶಾ ದುಲಾನಿ, ಕೌಶಾನಿ ನುತ್ಯಂಗನಾ

Story first published: Monday, September 25, 2023, 14:48 [IST]
Other articles published on Sep 25, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+