Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎರಡನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ; ಸಮಬಲ ಸಾಧಿಸಿದ ಇಂಗ್ಲೆಂಡ್‌

2026 ರ ಮಹಿಳಾ ಟಿ20 ವಿಶ್ವಕಪ್ ಜೂನ್ 12 ರಂದು ಆರಂಭವಾಗಲಿದೆ. ಈ ಪಂದ್ಯಾವಳಿಯ ಆರಂಭಕ್ಕೂ ಮುನ್ನ, ಭಾರತ ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಎರಡನೇ ಏಕದಿನ ಟಿ20 ಪಂದ್ಯದಲ್ಲಿ ಭಾರತ 26 ರನ್‌ಗಳಿಂದ ಸೋಲು ಕಂಡಿದೆ. ಈ ಮೂಲಕ ಇಂಗ್ಲೆಂಡ್‌ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಎರಡನೇ ಟಿ20 ಪಂದ್ಯದಲ್ಲಿ, ಟೀಮ್ ಇಂಡಿಯಾ 169 ರನ್‌ಗಳ ಗುರಿಯನ್ನು ಎದುರಿಸಿತು. ಸಾಧಾರಣ ಗುರಿಯನ್ನು ಹಿಂಬಾಲಿಸುವಲ್ಲಿ ಭಾರತ ಮಹಿಳಾ ತಂಡ ವಿಫಲವಾಯಿತು. ಈ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ಗೂ ಮುನ್ನ ತನ್ನ ಪೆಟ್ಟು ಬಿದ್ದಂತೆ ಆಗಿದೆ. ಅಲ್ಲದೆ ಹರ್ಮನ್ ಪ್ರೀತ್‌ ಕೌರ್‌ ಪಡೆ 150+ ರನ್‌ಗಳನ್ನು ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ವಿಫಲವಾಗಿದೆ. 2022 ರಿಂದ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೊಡ್ಡ ಗುರಿಗಳನ್ನು ಬೆನ್ನಟ್ಟುವಲ್ಲಿ ಕಳಪೆ ದಾಖಲೆಯನ್ನು ಹೊಂದಿದೆ.

India

ಹರ್ಮನ್ ಪ್ರೀತ್ ಪಡೆಗೆ 150 ಅಥವಾ ಅದಕ್ಕಿಂತ ಹೆಚ್ಚಿನ ಗುರಿ ನೀಡಿದಾಗ ಒತ್ತಡಕ್ಕೆ ಒಳಗಾಗಿ ಪಂದ್ಯವನ್ನು ಕೈ ಚೆಲ್ಲಿದ್ದಾರೆ. 4 ವರ್ಷಗಳಲ್ಲಿ ಟೀಮ್ ಇಂಡಿಯಾ ಇಂತಹ 17 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಗೆದ್ದಿದೆ. ನಿಜಕ್ಕೂ ಈ ಅಂಕಿ ಅಂಶಗಳು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿವೆ. ಈ ಅಂಕಿ ಅಂಶವು ಮುಂಬರುವ ಟಿ20 ವಿಶ್ವಕಪ್‌ಗೂ ಮುನ್ನ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 168 ರನ್ ಗಳಿಸಿತು. 169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತವು 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 142 ರನ್‌ ಸೇರಿಸಿ ಸೋಲು ಕಂಡಿತು. ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯವು ಜೂನ್ 2 ರಂದು ಟೌಂಟನ್ ಮೈದಾನದಲ್ಲಿ ನಡೆಯಲಿದೆ.

ಸೋಲಿನ ಬಳಿಕ ನಾಯಕಿ ಹೇಳಿದ್ದಿಷ್ಟು..

ಎರಡನೇ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿರುವ ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್‌, ಇಂಗ್ಲೆಂಡ್‌ ತಂಡ ಚೆನ್ನಾಗಿ ಬ್ಯಾಟ್ ಮಾಡಿದೆ. ಫ್ರೇಯಾ ಕೆಂಪ್ ಬ್ಯಾಟಿಂಗ್ ಮಾಡಿದ ರೀತಿ ಶ್ಲಾಘನೀಯ. ನಾವು ಉತ್ತಮ ಆರಂಭವನ್ನು ಪಡೆದರೂ ಸಹ ಮಧ್ಯದ ಓವರ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದೆವು. ಈ ಹಂತದಲ್ಲಿ ನಾವು ಹೆಚ್ಚು ಡಾಟ್‌ ಬೌಲ್‌ ಆಡಿದ್ದರಿಂದಲೇ ಸೋಲು ಕಂಡೆವು ಎಂದು ತಿಳಿಸಿದ್ದಾರೆ.

Story first published: Saturday, May 30, 2026, 23:55 [IST]
Other articles published on May 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+