Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಲೆಂಜರ್ಸ್ ಟ್ರೋಫಿ 20 ಫೈನಲ್‌: ಮಂಗಳವಾರ ರೆಡ್-ಬ್ಲೂ ಮುಖಾಮುಖಿ

India women red to face india blue in challengers trophy final

ಆಲೂರು, ಆಗಸ್ಟ್ 20: ಮಂಗಳವಾರ ನಡೆಯಲಿರುವ ಮಹಿಳೆಯರ ಚಾಲೆಂಜರ್ಸ್ ಟ್ರೋಫಿ ಟಿ20ಯ ಫೈನಲ್‌ ಪಂದ್ಯದಲ್ಲಿ ವಿಮೆನ್ ರೆಡ್ ಮತ್ತು ವಿಮೆನ್ ಬ್ಲೂ ತಂಡಗಳು ಮುಖಾಮುಖಿಯಾಗಲಿವೆ.

ಭಾನುವಾರ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಡಿಯಾ ಗ್ರೀನ್ ತಂಡವನ್ನು ಮಣಿಸುವ ಮೂಲಕ ಇಂಡಿಯಾ ರೆಡ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು.

ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಗ್ರೀನ್ ತಂಡ ಕೇವಲ 51 ರನ್‌ಗಳಿಗೆ ಸರ್ವಪತನಗೊಂಡಿತು. ಸುಲಭ ಗುರಿ ಬೆನ್ನತ್ತಿದ ರೆಡ್ ತಂಡ ನಾಯಕಿ ದೀಪ್ತಿ ಶರ್ಮಾ ವಿಕೆಟ್ ಕಳೆದುಕೊಂಡು 9.2 ಓವರ್‌ಗಳಲ್ಲಿಯೇ ಗೆದ್ದು ಬೀಗಿತು.

ಗ್ರೀನ್ ತಂಡದ ಸಜೀವನ್ ಸಾಜನಾ ಮತ್ತು ಸಿ. ಪ್ರತ್ಯೂಷಾ ಅವರನ್ನು ಹೊರುತುಪಡಿಸಿ ಯಾವ ಆಟಗಾರ್ತಿಯೂ ಎರಡಂಕಿ ಮೊತ್ತ ದಾಟಲಿಲ್ಲ. ರೀಮಾಲಕ್ಷ್ಮಿ ಎಕ್ಕಾ ಮತ್ತು ಶಿಖಾ ಪಾಂಡೆ ಮಾರಕ ಬೌಲಿಂಗ್ ದಾಳಿಗೆ ಗ್ರೀನ್ ತಂಡ ತತ್ತರಿಸಿತು.

ಸಂಕ್ಷಿಪ್ತ ಸ್ಕೋರ್
ಇಂಡಿಯಾ ವಿಮೆನ್ ಗ್ರೀನ್: 51/10 (18.4) ಸಜೀವನ್ ಸಾಜನಾ 11, ಸಿ. ಪ್ರತ್ಯೂಷಾ 14, ಶಿಖಾ ಪಾಂಡೆ 4/2, ರೀಮಾಲಕ್ಷ್ಮಿ ಎಕ್ಕಾ 6/3

ಇಂಡಿಯಾ ವಿಮೆನ್ ರೆಡ್: 52/1 (9.2) ಪೂನಂ ರಾವತ್ 26*, ಹರ್ಲೀನ್ ಡಿಯೋಲ್ 24*

ಫಲಿತಾಂಶ: ಇಂಡಿಯಾ ರೆಡ್ ತಂಡಕ್ಕೆ ಒಂಬತ್ತು ವಿಕೆಟ್ ಗೆಲುವು ಮತ್ತು ಫೈನಲ್ ಪ್ರವೇಶ.

Story first published: Monday, August 20, 2018, 18:30 [IST]
Other articles published on Aug 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+