ಇಂಗ್ಲೆಂಡ್ ಮಹಿಳೆಯರು-ಭಾರತದ ಮಹಿಳೆಯರ ಮಧ್ಯೆ ಟೆಸ್ಟ್ ಪಂದ್ಯ

ಮುಂಬೈ: ಈ ವರ್ಷದ ಕೊನೆಯಲ್ಲಿ ಭಾರತದ ಮಹಿಳೆಯರು ಮತ್ತು ಇಂಗ್ಲೆಂಡ್ ಮಹಿಳೆಯರ ಮಧ್ಯೆ ಒಂದು ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಇದು ಭಾರತದ ವನಿತಾ ತಂಡಕ್ಕೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ.
ಹಿಂದೆಯೂ ಭಾರತ ವನಿತಾ ತಂಡ ಟೆಸ್ಟ್ ಪಂದ್ಯವೊಂದರಲ್ಲಿ ಪಾಲ್ಗೊಂಡಿತ್ತು. 2014ರ ಡಿಸೆಂಬರ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಆಡಿದ್ದವು. ಮಿಥಾಲಿ ರಾಜ್ ಅವರು ಭಾರತ ತಂಡಕ್ಕೆ ನಾಯಕತ್ವ ವಹಿಸಿಕೊಂಡಿದ್ದರು. ಅದಾಗಿ 6 ವರ್ಷಗಳ ಬಳಿಕ ಮತ್ತೆ ಭಾರತದ ಮಹಿಳಾ ತಂಡ ಟೆಸ್ಟ್‌ಗಾಗಿ ಕಣಕ್ಕಿಳಿಯಲಿದೆ.
ಸದ್ಯ ಭಾರತದ ಮಹಿಳಾ ತಂಡ ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿದೆ. ಕೊರೊನಾವೈರಸ್‌ನಿಂದಾಗಿ ಸುಮಾರು ಒಂದು ವರ್ಷ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದ ಭಾರತದ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೆ ಕ್ರಿಕೆಟ್ ಟೂರ್ನಿ ಆಡಲಾರಂಭಿಸಿದ್ದಾರೆ.
ಭಾರತ-ಇಂಗ್ಲೆಂಡ್ ಮಹಿಳಾ ತಂಡಗಳ ಮಧ್ಯೆ ಎಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ ಅನ್ನೋದನ್ನು ಶಾ ತಿಳಿಸಿಲ್ಲ. ಆದರೆ ಬಹುಶಃ ಭಾರತ ಮಹಿಳೆಯರ ಇಂಗ್ಲೆಂಡ್ ಪ್ರವಾಸದ ವೇಳೆ, ಅಂದರೆ ಜೂನ್ ಅಥವಾ ಜುಲೈನಲ್ಲಿ ಈ ಟೆಸ್ಟ್ ಪಂದ್ಯ ನಡೆಯುವುದನ್ನು ನಿರೀಕ್ಷಿಸಲಾಗಿದೆ. ಸದ್ಯ ಭಾರತ ಮತ್ತು ಇಂಗ್ಲೆಂಡ್ ಪುರುಷರ ತಂಡಗಳ ಮಧ್ಯೆ ಪ್ರವಾಸ ಸರಣಿಗಳು ನಡೆಯುತ್ತಿವೆ. ಟೆಸ್ಟ್ ಸರಣಿ ಇತ್ತೀಚೆಗಷ್ಟೇ ಮುಗಿದಿದ್ದು, ಮಾರ್ಚ್ 12ರಿಂದ 5 ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications