Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವರ್ಷವಾದ್ರೂ ಆಟಗಾರ್ತಿಯರಿಗೆ ವಿಶ್ವಕಪ್‌ನ ಹಣ ಕೊಟ್ಟಿಲ್ಲ ಬಿಸಿಸಿಐ!

India Women’s Team To Receive T20 World Cup 2020 Prize Money This Week

ಕೆಲ ದಿನಗಳ ಹಿಂದಷ್ಟೇ ಮಹಿಳಾ ಕ್ರಿಕೆಟ್ ತಂಡಕ್ಕೆ ಕಡಿಮೆ ವೇತನ ಶ್ರೇಣಿಯನ್ನು ಘೋಷಿಸಿದೆ ಎಂದು ಭಾರೀ ಟೀಕೆಗೆ ಒಳಗಾಗಿದ್ದ ಬಿಸಿಸಿಐ ಇದೀಗ ಮತ್ತೊಂದು ಕರ್ಮಕಾಂಡಕ್ಕೆ ಸಿಲುಕಿಕೊಂಡಿದೆ. ಕಳೆದ ವರ್ಷ ಫೆಬ್ರವರಿ - ಮಾರ್ಚ್ ತಿಂಗಳಿನಲ್ಲಿ ನಡೆದ ಮಹಿಳಾ ಟಿ ಟ್ವೆಂಟಿ ವಿಶ್ವಕಪ್ ಪಂದ್ಯದ ಮೊತ್ತವನ್ನು ಇನ್ನೂ ಸಹ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕಳೆದ ವರ್ಷ ನಡೆದ ಮಹಿಳಾ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಮತ್ತು ಆಸ್ಟ್ರೇಲಿಯಾ ವನಿತೆಯರ ತಂಡ ಸೆಣಸಾಡಿದ್ದವು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ತಂಡವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಮಹಿಳಾ ಟೀಂ ಇಂಡಿಯಾ ತಂಡಕ್ಕೆ 3.50 ಕೋಟಿ ರೂ ಬಹುಮಾನ ಹಣವನ್ನು ನೀಡಲಾಗಿತ್ತು. ಈ 3.50 ಕೋಟಿ ರೂ ಮೊತ್ತವನ್ನು ಮಹಿಳಾ ಭಾರತೀಯ ತಂಡದ ಎಲ್ಲಾ ಸದಸ್ಯರುಗಳಿಗೂ ಹಂಚಬೇಕಾಗಿತ್ತು.

ಆದರೆ ಇದುವರೆಗೂ ಸಹ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಆ ಮೊತ್ತ ಸಿಕ್ಕಿಲ್ಲ. ಆಟಗಾರ್ತಿಯರಿಗೆ ಬಿಸಿಸಿಐ ಇನ್ನೂ ಹಣವನ್ನು ವಿತರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ ಪ್ರತಿಕ್ರಿಯಿಸಿರುವ ಬಿಸಿಸಿಐ ಈ ವಾರಾಂತ್ಯದೊಳಗೆ ಎಲ್ಲಾ ಆಟಗಾರ್ತಿಯರಿಗೂ ಸಹ ವಿಶ್ವಕಪ್ ಟೂರ್ನಿಯ ಹಣ ತಲುಪಲಿದೆ ಎಂದು ಭರವಸೆ ನೀಡಿದೆ.

Story first published: Monday, May 24, 2021, 13:52 [IST]
Other articles published on May 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+