For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ: ಪ್ರಮುಖ ಆಟಗಾರ್ತಿಯರಿಗೆ ಕೊಕ್

ಭಾರತ ಮಹಿಳಾ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಗೆ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು ಈ ಪ್ರವಾಸಕ್ಕೆ ಭಾರತ ತಂಡದ ಪ್ರಮುಖ ಆಟಗಾರ್ತಿಯರಾದ ರೇಣುಕಾ ಸಿಂಗ್, ರಿಚಾ ಘೋಷ್, ರಾಜೇಶ್ವರಿ ಗಾಯಕ್ವಾಡ್ ಹಾಗೂ ಶಿಖಾ ಪಾಂಡೆಗೆ ಕೊಕ್ ನೀಡಲಾಗಿದೆ.

ರಿಚಾ ಅನುಪಸ್ಥಿತಿಯಲ್ಲಿ, ಉಮಾ ಚೆಟ್ರಿ ಎರಡೂ ಮಾದರಿಯ ಸರಣಿಗಳಿಗೆ ಕರೆ ಪಡೆದುಕೊಂಡಿದ್ದಾರೆ. ಅಸ್ಸಾಂನ 20 ವರ್ಷದ ಉಮಾ ಚೆಟ್ರಿ ಇತ್ತೀಚೆಗೆ ಹಾಂಕಾಂಗ್‌ನಲ್ಲಿ ನಡೆದ ಉದಯೋನ್ಮುಖ ಏಷ್ಯಾ ಕಪ್‌ನಲ್ಲಿ ಭಾರತ ಎ ಮಹಿಳೆಯರ ಪರವಾಗಿ ಆಡಿದ್ದರು.

India Women squad announced for Bangladesh tour

ಎಡಗೈ ಸ್ಪಿನ್ನರ್‌ಗಳಾದ ಅನುಷಾ ಬಾರೆಡ್ಡಿ ಮತ್ತು ರಾಶಿ ಕನೋಜಿಯಾ ಕೂಡ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಸ್ವೀಕರಿಸಿದ್ದು ಎರಡೂ ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಕೇರಳದ ಆಲ್‌ರೌಂಡರ್ ಮಿನ್ನು ಮಣಿಯನ್ನು ಟಿ20ಐ ಸರಣಿಗೆ ಮಾತ್ರ ಆಯ್ಕೆ ಮಾಡಲಾಗಿದೆ.

ಎಡಗೈ ಸ್ಪಿನ್ನರ್ ರಾಧಾ ಯಾದವ್ ಈ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಮತ್ತೊಬ್ಬರು ಪ್ರಮುಖ ಆಟಗಾರ್ತಿಯಾಗಿದ್ದಾರೆ. ಮತ್ತೊಂದೆಡೆ ಬಲಗೈ ಬ್ಯಾಟರ್ ಪ್ರಿಯಾ ಪೂನಿಯಾ ಮತ್ತು ಎಡಗೈ ವೇಗದ ಬೌಲರ್ ಮೋನಿಕಾ ಪಟೇಲ್ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

ಟೀಮ್ ಇಂಡಿಯಾ ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ಅವೇದಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಎಸ್. ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಮಿನ್ನು ಮಣಿ.

ಟೀಮ್ ಇಂಡಿಯಾ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (ಉಪನಾಯಕಿ), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಚೆಟ್ರಿ (ಉಪನಾಯಕಿ), ಅಮನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಸ್ನೇಹ ರಾಣಾ.

Story first published: Monday, July 3, 2023, 8:53 [IST]
Other articles published on Jul 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+