Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಪಂದ್ಯ: ವೇದಾ ಕೃಷ್ಣಮೂರ್ತಿ ಮಿಂಚಿನ ಆಟ ಭಾರತಕ್ಕೆ ಜಯ

India women team won against South Africa in T20

ಸೆನ್‌ವೆಸ್ ಪಾರ್ಕ್‌, ಫೆಬ್ರವರಿ 13: ದಕ್ಷಿಣ ಆಫ್ರಿಕಾ ಮಹಿಳ ತಂಡದ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಭರ್ಜರಿ ಜಯಗಳಿಸಿದ್ದಾರೆ.

ಆಲ್‌ರೌಂಡ್ ಪ್ರದರ್ಶನ ತೋರಿದ ಭಾರತದ ವನಿತೆಯರ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ ಮಹಿಳೆಯರು 165 ರನ್‌ಗಳ ಸವಾಲಿನ ಗುರಿಯನ್ನೇ ನೀಡಿದ್ದವು. ಆತ್ಮವಿಶ್ವಾಸದಿಂದ ಗುರಿ ಬೆನ್ನು ಹತ್ತಿದ ವನಿತೆಯರ ತಂಡ ಇನ್ನೂ 7 ವಿಕೆಟ್ ಮತ್ತು ಎರಡು ಓವರ್ ಇರುವಂತೆಯೇ ಗೆದ್ದು ಬಿಟ್ಟಿತು.

ಆರಂಭಿಕ ಬ್ಯಾಟ್ಸ್‌ವುಮನ್‌ಗಳಾದ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸ್ಮೃತಿ ಮಂದಾನಾ ಅವರು ಭಾರತಕ್ಕೆ ಅದ್ಬುತ ಆರಂಭ ಒದಗಿಸಿಕೊಟ್ಟರು. ಬಿರುಸಿನ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ಕೇವಲ 15 ಬಾಲ್‌ಗೆ 28 ರನ್‌ ಭಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.

ನಾಯಕಿ ಮಿಥಾಲಿ ರಾಜ್‌ ಅವರು ಅದ್ಬುತ ಅರ್ಧಶತಕ ಗಳಿಸಿ ಕೊನೆಯ ವರೆಗೆ ನಾಟ್‌ಔಟ್‌ ಆಗಿ ಉಳಿದರು 48 ಎಸೆತಗಳಲ್ಲಿ 54 ರನ್‌ ಸಿಡಿಸಿದ ಅವರು 6 ಬೌಂಡರಿ ಮತ್ತು 1 ಸಿಕ್ಸರ್‌ ಭಾರಿಸಿದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ರೋಡ್ರಿಗಿಸ್ 27 ಎಸೆತದಲ್ಲಿ 37 ಭಾರಿಸಿ ಔಟಾದರು. ಅವರ ನಂತರ ಸ್ಕ್ರೀಸಿಗಿಳಿದ ವೇದಾ ಕೃಷ್ಣಮೂರ್ತಿ 22 ಎಸೆತಗಳಲ್ಲಿ ಮೂರು ಬೌಂಡರಿ ಮೂರು ಸಿಕ್ಸರ್ ಭಾರಿಸಿ 37 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಹರ್ಮನ್‌ಪ್ರೀತ್ ಕೌರ್ ಅವರು ಆಡಿದ ಮೊದಲ ಬಾಲಿನಲ್ಲೇ ರನ್‌ಔಟ್ ಆಗಿ ನಿರಾಶೆ ಮೂಡಿಸಿದರು.

Story first published: Tuesday, February 13, 2018, 19:38 [IST]
Other articles published on Feb 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+