For Quick Alerts
ALLOW NOTIFICATIONS  
For Daily Alerts
 

ಕ್ರಾಂತಿ ಗೌಡ ಅಬ್ಬರ: ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದ ಟೀಮ್ ಇಂಡಿಯಾ ವನಿತೆಯರ ಇತಿಹಾಸ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯ ಮಂಗಳವಾರ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ಈ ಮೂಲಕ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20 ಸರಣಿ ಹಾಗೂ ಏಕದಿನ ಸರಣಿಯನ್ನು ಗೆದ್ದು ಬೀಗಿದೆ. ಮೂರನೇ ಏಕದಿನ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ 13 ರನ್‌ಗಳಿಂದ ಗೆದ್ದ ಇತಿಹಾಸ ಬರೆದಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಪ್ರತಿಕಾ ರಾವಲ್‌ (26), ಸ್ಮೃತಿ ಮಂಧನಾ (45), ಹರ್ಲಿನ್‌ ಡಿಯೋಲ್ (45), ಜೆಮಿಮಾ ರೊಡ್ರಿಗಸ್‌ (50), ರಿಚಾ ಘೋಷ್‌ (38) ಸಮಯೋಚಿತ ಬ್ಯಾಟಿಂಗ್ ನಡೆಸಿ ಆಧಾರವಾದರು. ಈ ವೇಳೆ ನಾಯಕ ಹರ್ಮನ್ ಪ್ರೀತ್ ಕೌರ್‌ (102) ತಮ್ಮ ವೃತ್ತಿ ಜೀವನದ ಏಳನೇ ಶತಕ ದಾಖಲಿಸಿ, ಮಿಥಾಲಿ ರಾಜ್‌ ದಾಖಲೆ ಸಮನಾಗಿಸಿದರು. ಅಂತಿಮವಾಗಿ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 318 ರನ್‌ ಸೇರಿಸಿತು.

India Women Triumph in England Harmanpreet Kaur s Century Secures ODI and T20 Series Win

ಸವಾಲಿನ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಮಹಿಳಾ ತಂಡದ ಆರಂಭ ಕಳಪೆಯಾಗಿತ್ತು. ಮೂರನೇ ವಿಕೆಟ್‌ಗೆ ಎಮ್ಮಾ ಲ್ಯಾಂಬ್ ಹಾಗೂ ನ್ಯಾಟ್ ಸ್ಕಿವರ್-ಬ್ರಂಟ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಭಾರತದ ಬೌಲರ್‌ಗಳನ್ನು ಕಾಡಿದರು. ಅಲ್ಲದೆ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು. ಎಮ್ಮಾ ಲ್ಯಾಂಬ್ 5 ಬೌಂಡರಿ ಸೇರಿದಂತೆ 68 ರನ್‌ ಬಾರಿಸಿದ್ದಾಗ ಔಟ್ ಆದರು. ನ್ಯಾಟ್ ಸ್ಕಿವರ್-ಬ್ರಂಟ್ 11 ಬೌಂಡರಿ ನೆರವಿನಿಂದ 98 ರನ್‌ ಬಾರಿಸಿ ಶತಕದ ಅಂಚಿನಲ್ಲಿ ಔಟ್ ಆದರು.

ಉಳಿದಂತೆ ಇಂಗ್ಲೆಂಡ್ ತಂಡದ ಸೋಫಿಯಾ ಡಂಕ್ಲಿ (34), ಆಲಿಸ್ ಡೇವಿಡ್ಸನ್-ರಿಚರ್ಡ್ಸ್ (44), ಚಾರ್ಲಿ ಡೀನ್ (21) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಪರಿಣಾಮ ಇಂಗ್ಲೆಂಡ್‌ 49.5 ಓವರ್‌ಗಳಲ್ಲಿ 305 ರನ್‌ಗಳಿಗೆ ಆಲೌಟ್ ಆಯಿತು.

India Women Triumph in England Harmanpreet Kaur s Century Secures ODI and T20 Series Win

ಕ್ರಾಂತಿ ಗೌಡ ಆರ್ಭಟ

ಟೀಮ್ ಇಂಡಿಯಾ ಪರ ವೇಗದ ಬೌಲರ್‌ ಕ್ರಾಂತಿ ಗೌಡ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದರು. ಇವರು 9.5 ಓವರ್‌ಗಳಲ್ಲಿ 52 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು. ಉಳಿದಂತೆ ಶ್ರೀ ಚರಣಿ 2 ವಿಕೆಟ್‌ ಪಡೆದರು.

ಐದನೇ ವಿದೇಶಿ ಗೆಲುವು

ಭಾರತ ಮಹಿಳಾ ತಂಡ ಇತ್ತೀಚಿಗೆ ವಿದೇಶಿ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ಟೀಮ್ ಇಂಡಿಯಾ ವನಿತೆಯರು ಸರಣಿ ಗೆಲುವುಗಳನ್ನು ಸಾಧಿಸಿದ್ದಾರೆ. ಭಾರತೀಯ ಮಹಿಳಾ ತಂಡವು ಐದನೇ ಬಾರಿಗೆ ವಿದೇಶಿ ಪ್ರವಾಸದಲ್ಲಿ T20 ಮತ್ತು ODI ಸರಣಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಏಕದಿನ ಹಾಗೂ ಟಿ200 ಸರಣಿಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು ಇದೇ ಮೊದಲು.

Story first published: Wednesday, July 23, 2025, 9:45 [IST]
Other articles published on Jul 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+