Ind W vs Eng W, 3ನೇ ಏಕದಿನ: ಸ್ಮೃತಿ, ದೀಪ್ತಿ ಅರ್ಧ ಶತಕ: ಇಂಗ್ಲೆಂಡ್‌ಗೆ 170 ರನ್ ಗುರಿ

ಭಾರತ ವನಿತೆಯರ ತಂಡ ಹಾಗೂ ಇಂಗ್ಲೆಂಡ್ ವನಿತೆಯರ ತಂಡಗಳ ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡದಿಂದ ನೀರಸವಾಗಿ ಬ್ಯಾಟಿಂಗ್ ಪ್ರದರ್ಶಿಸಿದೆ. ಸ್ಮೃತಿ ಮಂಧಾನ ಹಾಗೂ ದೀಪ್ತಿ ಶರ್ಮಾ ಅರ್ಧ ಶತಕ ಸಿಡಿಸಿ ಮಿಂಚಿದ್ದರು ಕೂಡ ಭಾರತ ತಂಡ 169 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು.
ಯುವ ಆರಂಭಿಕ ಆಟಗಾರ್ತಿ ಶಫಾಲಿ ವ್ಮಾ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿದಿದ್ದು ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಯಸ್ತಿಕಾ ಭಾಟಿಯಾ ಕೂಡ ಶೂನ್ಯಕ್ಕೆ ಔಟಾದರು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ನಾಯಕಿ ಹರ್ಮನ್‌ಪ್ರೀತ ಕೌರ್ ನಾಲ್ಕು ರನ್‌ಗಳಿಗೆ ಔಟಾದರೆ ಹರ್ಲಿನ್ ಡಿಯೋಲ್ ಕೂಡ ಒಂದಂಕಿಗೆ ಔಟಾದರು. ಆದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಧಾನ ಈ ಪಂದ್ಯದಲ್ಲಿ 50 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪ್ತಿ ಶರ್ಮಾ ಅಮೋಘ ಹೋರಾಟ ಪ್ರದರ್ಶಿಸಿ ಅಜೇಯ 68 ರನ್‌ಗಳಿಸಿದರು. ಹೀಗಾಗಿ ಭಾರತ ತಂಡ 169 ರನ್‌ಗಳಿಸಲು ಸಾಧ್ಯವಾಯಿತು.
ಸರಣಿ ಗೆದ್ದಿರುವ ಭಾರತ: ಇನ್ನು ಇಂಗ್ಲೆಂಡ್ ಮಹಿಳೆಯರ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದೆ. ಈ ಮೂಲಕ ಸರಣಿಯನ್ನು ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದ್ದು ಅಂತಿಮ ಪಂದ್ಯವನ್ನು ಕುಡ ಗೆದ್ದು ಸರಣಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆಯುವ ನಿರೀಕ್ಷೆ ಮೂಡಿಸಿತ್ತು.
ಆಡುವ ಬಳಗ ಹೀಗಿದೆ
ಇಂಗ್ಲೆಂಡ್ ಆಡುವ ಬಳಗ: ಟಮ್ಮಿ ಬ್ಯೂಮಾಂಟ್, ಎಮ್ಮಾ ಲ್ಯಾಂಬ್, ಸೋಫಿಯಾ ಡಂಕ್ಲೆ, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ನಾಯಕಿ & ವಿಕೆಟ್ ಕೀಪರ್), ಫ್ರೇಯಾ ಕೆಂಪ್, ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಫ್ರೇಯಾ ಡೇವಿಸ್
ಬೆಂಚ್: ಲಾರೆನ್ ಬೆಲ್, ಇಸ್ಸಿ ವಾಂಗ್, ಮಾಯಾ ಬೌಚಿಯರ್, ಆಲಿಸ್ ಡೇವಿಡ್ಸನ್ ರಿಚರ್ಡ್ಸ್
ಭಾರತ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ದಯಾಲನ್ ಹೇಮಲತಾ, ಜೂಲನ್ ಗೋಸ್ವಾಮಿ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಸ್ನೇಹ ರಾಣಾ, ಸಬ್ಬಿನೇನಿ ಮೇಘನಾ, ಮೇಘನಾ ಸಿಂಗ್, ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ, ಸಿಮ್ರಾನ್ ಬಹದ್ದೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications