ಸೂಪರ್ ಸಂಡೆಯ ಮಜಾ ಹೆಚ್ಚಿಸಲಿದೆ ಭಾರತ, ದಕ್ಷಿಣ ಆಫ್ರಿಕಾ ಫೈನಲ್ ಫೈಟ್: ಜೆಮಿಮಾ ಆಕರ್ಷಣೆ
ಸುಮಾರು ಒಂದು ತಿಂಗಳಿನಿಂದ ಭಾರತದಲ್ಲಿ ನಡೆಯುತ್ತಿದ್ದ ಮಹಿಳಾ ವಿಶ್ವಕಪ್‌ಗೆ ಭಾನುವಾರ ತೆರೆ ಬೀಳಲಿದೆ. ಸೂಪರ್ ಸಂಡೆಯ ಮಜೆಯನ್ನು ಈ ಬಾರಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಹೆಚ್ಚಿಸಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಯಾರೇ ಗೆದ್ದರೂ ಇತಿಹಾಸದ ಪುಟವನ್ನು ಸೇರಲಿದ್ದಾರೆ. ಸುಮಾರು 25 ವರ್ಷಗಳ ಬಳಿಕ ಮಹಿಳಾ ಏಕದಿನ ವಿಶ್ವಕಪ್‌ಗೆ ನೂತನ ಅಧಿಪತಿ ಸಿಗಲಿದ್ದಾರೆ. ಭಾರತ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಮಾಡಿದ ತಂಡ ಮಾಡುವ ಕನಸು ಕಾಣುತ್ತಿದೆ.
ನಿಶ್ಚಿತವಾಗಿ ಎರಡೂ ತಂಡಗಳು ಬಲಾಢ್ಯವಾಗಿವೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಕೊಂಚ ಸ್ಟ್ರಾಂಗ್ ಆಗಿ ಕಂಡರೂ, ದಕ್ಷಿಣ ಆಫ್ರಿಕಾ ಕಳೆದ ಕೆಲವು ದಿನಗಳಿಂದ ಆಡಿದ ರೀತಿ ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿವೆ. ಇಂಗ್ಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ ಮಣಿಸಿದರೆ, ಭಾರತ 7 ಬಾರಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಮಣ್ಣು ಮುಕ್ಕಿಸಿದೆ. ಇನ್ನೊಂದು ಗೆಲುವು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾಗಿದೆ.

ಹರ್ಮನ್ ಪ್ರಿತ್ ಕೌರ್ ಮುಂದಾಳತ್ವದ ಪಡೆ ಟೂರ್ನಿಯನ್ನು ಆರಂಭಿಸಿದಾಗ ನೆಚ್ಚಿನ ತಂಡ ಎಂದೇ ಬಿಂಬಿಸಲಾಗಿತ್ತು. ಆದರೆ ಲೀಗ್ ಹಂತದಲ್ಲಿ ಕಂಡ ಸತತ ಮೂರು ಸೋಲುಗಳು ತಂಡದ ಮನೋಬಲವನ್ನು ಕುಗ್ಗಿಸಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದ ಧಾಟಿ ಅಭಿಮಾನಿಗಳ ಹುಮ್ಮಸ್ಸು ದ್ವಿಗುಣಗೊಳಿಸಿತು. ಆಸ್ಟ್ರೇಲಿಯಾ ವಿರುದ್ಧ ಅಸಾಧ್ಯವಾದದನ್ನು ಮಾಡಿ ತೋರಿಸಿದಾಗ, ಆಟಗರ್ತಿಯ ಕ್ಷಮತೆ ವಿಶ್ವಕ್ಕೆ ತಿಳಿಯಿತು. ಭಾನುವಾರ ಮತ್ತೊಮ್ಮೆ ಮೈದಾನದಲ್ಲಿ ಅಮೋಘ ಆಟವನ್ನು ಪ್ರದರ್ಶಿಸಿದರೆ, ಕಳೆದ ಎರಡು ಬಾರಿ ಮಾಡಲಾಗದ ಸಾಧನೆಯನ್ನು ವನಿತೆಯರು ಮಾಡಿ ಬೀಗಬಹುದು.
ಜೆಮಿಮಾ ಆಕರ್ಷಣೆ
ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದು, ಫೈನಲ್ ಪಂದ್ಯದ ರೋಚಕತೆ ಹೆಚ್ಚಿಸಿದ್ದಾರೆ. ಸ್ಮೃತಿ ಮಂಧಾನ, ಶೆಪಾಲಿ ವರ್ಮ್ ಕಡೆಯ ಬಾರಿ ಬಿಗ್ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾಗಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಮರಣೀಯ ಇನಿಂಗ್ಸ್ ಕಟ್ಟಿದ ಜೆಮಿಮಾ ರೋಡ್ರಿಗಸ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದಾರೆ. ಹರ್ಮನ್ ಪ್ರಿತ್ ಕೌರ್, ರಿಚಾ ಘೋಷ್ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದರೆ, ಕನಸಿನ ಕುದರೆಯ ಮೇಲೆ ಸವಾರಿ ಮಾಡಬಹುದು.

ಸೆಮಿಫೈನಲ್ ಪಂದ್ಯದಲ್ಲಿ ಅಮನ್‌ಜೋತ್ ಕೌರ್ ಬಿಗುವಿನ ದಾಳಿ ನಡೆಸಿದ್ದರು. ಫೈನಲ್ ಪಂದ್ಯದಲ್ಲೂ ಸ್ಟಂಪ್ ಟು ಸ್ಟಂಪ್ ಬೌಲಿಂಗ್ ನಡೆಸಿದರೆ ಗೆಲುವು ಸಾಧ್ಯ. ಟೂರ್ನಿಯಲ್ಲೇ ಸ್ಥಿರ ಪ್ರದರ್ಶನ ನೀಡಿದ ದೀಪ್ತಿ ಶರ್ಮಾ ತಂಡದ ಪರ ಮಿಂಚಬೇಕಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಂಚ ದುಬಾರಿ ಆಗಿದ್ದ ರಾಧಾ ಯಾದವ್ ಅವರ ಸ್ಥಾನದಲ್ಲಿ ಸ್ನೇಹಾ ರಾಣಾ ಆಡಿದರೂ ಅಚ್ಚರಿಯಿಲ್ಲ. ವೇಗದ ಬೌಲಿಂಗ್ ನೊಗವನ್ನು ಕ್ರಾಂತಿ ಗೌಡ ಹಾಗೂ ರೇಣುಕಾ ಸಿಂಗ್ ಠಾಕೂರ್ ಹೊರಲಿದ್ದಾರೆ. ಇವರ ಮೇಲೆ ವಿಶ್ವಸ ಹೆಚ್ಚಿದೆ.
ಲಾರಾ ಬಲ
ದಕ್ಷಿಣ ಆಫ್ರಿಕಾ ತಂಡದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದು ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ನಾಯಕಿ ಲಾರಾ ವೊಲ್ವಾರ್ಡ್ಟ್, ಜ್ಮಿನ್ ಬ್ರಿಟ್ಸ್ ಇಬ್ಬರೂ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಮಾರಿಜಾನ್ನೆ ಕಪ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ದಕ್ಷಿಣ ಆಫ್ರಿಕಾದ ಆಟಗಾರ್ತಿಯರೂ ಸಹ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದು, ಭಾರತೀಯ ಪಿಚ್‌ಗಳ ಮರ್ಮ ಅವರಿಗೂ ಚೆನ್ನಾಗಿ ತಿಳಿದಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಗೆಲುವು ಯಾರ ಪರ ವಾಲಲಿದೆ ಎಂದು ಹೇಳುವುದು ಕಷ್ಟ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications