ಹೋವ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸಂಭ್ರಮಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ಭಾರತದ ಬೌಳಿಂಗ್ ದಾಳಿಗೆ ತತ್ತರಿಸಿತು. ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 227 ರನ್‌ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ಎಮ್ಮಾ ಲ್ಯಾಂಬ್ 12, ಟಮ್ಮಿ ಬ್ಯೂಮಾಂಟ್ 7, ಸೋಫಿಯಾ ಡಂಕ್ಲಿ 29, ಆಲಿಸ್ ಕ್ಯಾಪ್ಸೆ 19, ಡೇನಿಯಲ್ ವ್ಯಾಟ್ 43, ಆಮಿ ಜೋನ್ಸ್ 3, ಡೇನಿಯಲ್ ವ್ಯಾಟ್ 43 ರನ್, ಆಲಿಸ್ ಡೇವಿಡ್ಸನ್ ರಿಚರ್ಡ್ಸ್ ಅಜೇಯ 50, ಸೋಫಿ ಎಕ್ಲೆಸ್ಟೋನ್ 31, ಷಾರ್ಲೆಟ್ ಡೀನ್ ಅಜೇಯ 24 ರನ್ ದಾಖಲಿಸಿದರು.
ಭಾರತದ ಪರ ದೀಪ್ತಿ ಶರ್ಮಾ 2 ವಿಕೆಟ್ ಕಬಳಿಸಿದ್ರೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಸ್ನೇಹ ರಾಣಾ, ಹರ್ಲೀನ್ ಡಿಯೋಲ್ ತಲಾ 1 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.

ಭಾರತದ ವನಿತೆಯರ ಭರ್ಜರಿ ಬ್ಯಾಟಿಂಗ್
ಸುಲಭದ ಗುರಿಯನ್ನು ಬೆನ್ನತ್ತಿದ ಭಾರತದ ಮಹಿಳಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 3 ರನ್ ಆಗುವಷ್ಟರಲ್ಲಿ ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ ಔಟ್ ಆದರು. ಆದರೆ, ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಮತ್ತು ಯಾಸ್ತಿಕಾ ಭಾಟಿಯಾ ಎರಡನೇ ವಿಕೆಟ್ ನಷ್ಟಕ್ಕೆ 96 ರನ್ ಕಲೆ ಹಾಕುವ ಮೂಲಕ ಭಾರತದ ಆತಂಕವನ್ನು ದೂರ ಮಾಡಿದರು.
50 ರನ್ ಗಳಿಸಿದ ಯಾಸ್ತಿಕಾ ಭಾಟಿಯಾ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕಿ ಹರ್ಮನ್ ಪ್ರೀತ್ ಕೌರ್ ಜವಾಬ್ದಾರಿಯುತ ಆಟವಾಡಿದರು. ಮಂಧಾನ ಜೊತೆ ಉತ್ತಮ ಜೊತೆಯಾಟ ಆಡಿದ ಕೌರ್ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.
ಈ ಜೋಡಿ ಮೂರನೇ ವಿಕೆಟ್‌ಗೆ 99 ರನ್ ಕಲೆ ಹಾಕಿತು. 91 ರನ್ ಗಳಿಸಿದ ಸ್ಮೃತಿ ಮಂಧಾನ ಔಟಾಗುವ ಮೂಲಕ ಶತಕ ವಂಚಿತರಾದರು. ನಂತರ ಬಂದ ಹರ್ಲಿನ್ ಡಿಯೋಲ್ ಜೊತೆಗೂಡಿದ ಹರ್ಮನ್‌ಪ್ರೀತ್ ಕೌರ್ ಭಾರತಕ್ಕೆ ಜಯ ತಂದುಕೊಟ್ಟರು. ಹರ್ಮನ್‌ಪ್ರೀತ್ ಕೌರ್ ಅಜೇಯ 74 ರನ್ ಗಳಿಸಿದರು.
ಇಂಗ್ಲೆಂಡ್ ಮಹಿಳೆಯರು (ಪ್ಲೇಯಿಂಗ್ 11): ಎಮ್ಮಾ ಲ್ಯಾಂಬ್, ಟಮ್ಮಿ ಬ್ಯೂಮಾಂಟ್, ಸೋಫಿಯಾ ಡಂಕ್ಲಿ, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ನಾಯಕಿ ಮತ್ತು ವಿಕೆಟ್ ಕೀಪರ್), ಆಲಿಸ್ ಡೇವಿಡ್ಸನ್ ರಿಚರ್ಡ್ಸ್, ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಇಸ್ಸಿ ವಾಂಗ್
ಭಾರತ ಮಹಿಳೆಯರು (ಪ್ಲೇಯಿಂಗ್ 11): ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್