INDW vs NZW ODI: ಚಾಂಪಿಯನ್ ನ್ಯೂಜಿಲೆಂಡ್ ಮಣಿಸಿದ ಭಾರತ ವನಿತೆಯರು
ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ತಂಡವನ್ನು 59 ರನ್‌ಗಳಿಂದ ಸೋಲಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ನ್ಯೂಜಿಲೆಂಡ್ ತಂಡ 2024ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 227 ರನ್‌ಗಳಿಗೆ ಆಲೌಟ್ ಆಯಿತು. ಭಾರತ ನೀಡಿದ 228 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಿವೀಸ್ ಪಡೆಯೂ 168 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಕಂಡಿತ್ತು. ಟೀಮ್ ಇಂಡಿಯಾ 59 ರನ್‌ಗಳಿಂದ ಮೊದಲ ಏಕದಿನ ಪಂದ್ಯವನ್ನು ಗೆದ್ದಿತು.

ಭಾರತದ ಇನ್ನಿಂಗ್ಸ್
ಭಾರತದ ಪರ ತೇಜಲ್ ಹಸ್ಬಾನಿಸ್ ಗರಿಷ್ಠ ಸ್ಕೋರರ್ ಆದರು. ತೇಜಲ್ ಅವರು 64 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರು. ಇದಲ್ಲದೇ, ದೀಪ್ತಿ ಶರ್ಮಾ (41) , ಯಶಿಕಾ ಭಾಟಿಯಾ (37), ಜೆಮಿಮಾ ರಾಡ್ರಿಗಸ್ (35) ಭಾರತದ ಪರ ಜವಾಬ್ದಾರಿಯುತ ಆಟವಾಡಿದರು. ಆದರೆ ಇವರಿಂದ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಶೆಫಾಲಿ ವರ್ಮಾ 150 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಶೆಫಾಲಿ 22 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 33 ರನ್ ಚಚ್ಚಿದರು.
ಕಿವೀಸ್ ಪತನ
ಭಾರತ ನೀಡಿದ 229 ರನ್‌ಗಳ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ಎರಡನೇ ಓವರ್‌ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ಸುಜಿ ಬೇಟ್ಸ್ 1 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಬ್ರೂಕ್ ಹ್ಯಾಲಿಡೆ 39 ರನ್ ಬಾರಿಸಿ ಅತ್ಯಧಿಕ ಸ್ಕೋರ್ ಗಳಿಸಿದರು. ಆದರೆ, ಮ್ಯಾಡಿ ಗ್ರೀನ್ 32 ರನ್ ಗಳಿಸಿ ಔಟಾದರು. ಈ ಮೂವರು ಆಟಗಾರರನ್ನು ಹೊರೆತುಪಡಿಸಿ ನ್ಯೂಜಿಲೆಂಡ್‌ನ ಯಾವೊಬ್ಬ ಬ್ಯಾಟರ್ ತಂಡದ ಗೆಲುವಿಗಾಗಿ ಕ್ರೀಸ್‌ನಲ್ಲಿ ನಿಂತು ಹೋರಾಡಲಿಲ್ಲ. ಭಾರತದ ಬೌಲರ್‌ಗಳು ಕೂಡ ಕರಾರುವಕ್ಕಾದ ಬೌಲಿಂಗ್ ಪ್ರದರ್ಶನ ನೀಡಿದರು. ಪರಿಣಾಮ ನ್ಯೂಜಿಲೆಂಡ್ ತಂಡ 168 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ರಾಧಾ ಯಾದವ್ 3 ವಿಕೆಟ್ ಉರುಳಿಸಿದರೆ, ಸೈಮಾ ಠಾಕೂರ್ 2 ವಿಕೆಟ್ ಕಬಳಿಸಿದರು. ಇದಲ್ಲದೇ ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications