Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೆ ಐಸಿಸಿ ಬರೆ

ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಪುರುಷರ ತಂಡ ಆತಿಥೇಯ ತಂಡದ ವಿರುದ್ಧ ಟೆಸ್ಟ್‌ ಸರಣಿ ಆಡುತ್ತಿದೆ. ಇದೇ ವೇಳೆ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಿದೆ. ಈ ಪ್ರವಾಸದ ವೇಳೆ ಭಾರತ ಮಹಿಳಾ ತಂಡ, ಒಂದೇ ಒಂದು ಪಂದ್ಯವನ್ನು ಗೆಲ್ಲದೇ ನಿರಾಸೆ ಅನುಭವಿಸಿದೆ. ಈ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಕ್ಲೀನ್‌ ಸ್ವೀಪ್ ಸಾಧನೆ ಮಾಡಿದೆ. ಪರ್ತ್‌ನಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೆ, ಐಸಿಸಿ ಮತ್ತೊಂದು ಪೆಟ್ಟು ನೀಡಿದೆ.

ಪರ್ತ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ 6 ವಿಕೆಟ್‌ಗೆ 298 ರನ್‌ಗಳ ಸವಾಲಿನ ಸ್ಕೋರ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ 45.1 ಓವರ್‌ಗಳಲ್ಲಿ 215 ರನ್‌ ಸೇರಿಸಿ ಸೋಲು ಕಂಡಿತು. ಈ ಸೋಲಿನೊಂದಿಗೆ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಕ್ಲೀಸ್‌ ಸ್ವೀಪ್‌ ಸೋಲು ಕಂಡಿದೆ. ಐಸಿಸಿ, ಟೀಮ್ ಇಂಡಿಯಾ ಮೇಲೆ ಛಾಟಿ ಬೀಸಲು ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

India Women s Cricket Team Faces Clean Sweep Against Australia Penalized by ICC for Slow Over-Rate

ಟೀಮ್ ಇಂಡಿಯಾಕ್ಕೆ ದಂಡದ ಬರೆ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ನಡೆಸಿದಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಗಿಲ್ಬರ್ಟ್ ಈ ತೀರ್ಮಾನ ಕೈಗೊಂಡಿದ್ದಾರೆ. ಹರ್ಮನ್‌ ಪ್ರೀತ್ ಕೌರ್ ಮುಂದಾಳತ್ವದ ತಂಡ ನಿಗದಿತ ಸಮಯದಲ್ಲಿ ಓವರ್‌ ಮುಗಿಸದೇ ಇರುವುದಕ್ಕೆ ದಂಡ ವಿಧಿಸಲಾಗಿದೆ. ಟೀಮ್ ಇಂಡಿಯಾ ನಿಗದಿತ ಸಮಯಕ್ಕಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಂಡಿತು. ಅಲ್ಲದೆ. ಎರಡು ಓವರ್‌ಗಳನ್ನು ಕಡಿಮೆ ಬೌಲ್ ಮಾಡಿದ ಕಾರಣ ದಂಡ ವಿಧಿಸಿದರು.

ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ತಮ್ಮಿಂದ ಆದ ತಪ್ಪನ್ನು ಒಪ್ಪಿಕೊಳ್ಳಲಾಗಿದೆ. ಮತ್ತು ಐಸಿಸಿ ತಮ್ಮ ಮೇಲೆ ವಿಧಿಸಿದ್ದ ದಂಡವನ್ನು ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ. ತಂಡದ ನಾಯಕಿ ತಪ್ಪನ್ನು ಒಪ್ಪಿಂಕೊಂಡಿದ್ದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಟೀಮ್ ಇಂಡಿಯಾದ ಮೇಲೆ ಈ ಆರೋಪವನ್ನು ಫೀಲ್ಡ್ ಅಂಪೈರ್‌ಗಳಾದ ಕ್ಲೇರ್ ಪೊಲೊಸಾಕ್ ಮತ್ತು ಡೊನೊವನ್ ಕೋಚ್, ಮೂರನೇ ಅಂಪೈರ್ ಜಾಕ್ವೆಲಿನ್ ವಿಲಿಯಮ್ಸ್ ಮತ್ತು ನಾಲ್ಕನೇ ಅಂಪೈರ್ ಡೇವಿಡ್ ಟೇಲರ್ ಮಾಡಿದ್ದಾರೆ.

India Women s Cricket Team Faces Clean Sweep Against Australia Penalized by ICC for Slow Over-Rate

ಟೀಂ ಇಂಡಿಯಾಕ್ಕೆ ಸತತ 7ನೇ ಸೋಲು

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದ್ದರಿಂದ, ಪ್ರವಾಸಿ ತಂಡ ನಿರಾಸೆ ಅನುಭವಿಸಿದೆ. ಮೂರನೇ ಪಂದ್ಯದ ಸೋಲಿನೊಂದಿಗೆ ಟೀಂ ಇಂಡಿಯಾ ಏಕದಿನದಲ್ಲಿ ಆಸ್ಟ್ರೇಲಿಯಾದ ಕೈಯಲ್ಲಿ ಸತತ 7ನೇ ಸೋಲನ್ನು ಎದುರಿಸಬೇಕಾಯಿತು.

Story first published: Thursday, December 12, 2024, 20:15 [IST]
Other articles published on Dec 12, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+