Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND W vs ENG W: 25 ಎಸೆತದಲ್ಲಿ ಬಿತ್ತು ಇಂಗ್ಲೆಂಡ್‌ 9 ವಿಕೆಟ್‌

ಭಾರತ ಸದ್ಯ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಿದೆ. ಈ ವೇಳೆ ಟೀಮ್ ಇಂಡಿಯಾ ಪುರುಷರ ತಂಡ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯಗಳನ್ನು ಆಡುತ್ತಿದೆ. ಇನ್ನೊಂದೆಡೆ ಮಹಿಳಾ ತಂಡ ಟಿ20 ಸರಣಿಗಳನ್ನು ಆಡುತ್ತಿದೆ. ಭಾರತದ ವನಿತೆಯರು ಮೂರನೇ ಟಿ20 ಪಂದ್ಯವನ್ನು ಆಡಿದ್ದು, ಈ ಪಂದ್ಯದಲ್ಲಿ ಪ್ರವಾಸಿ ತಂಡ 5 ರನ್‌ಗಳಿಂದ ಸೋಲು ಕಂಡಿದೆ. ಇದೇ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಾಣ ಆಗಿದೆ. ಮೂರನೇ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿತು. ಈ ವೇಳೆ ಇಂಗ್ಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 171 ರನ್‌ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 166 ರನ್‌ ಕಲೆ ಹಾಕಿ ಸೋಲು ಕಂಡಿತು. ಈ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಸೋಲು ಕಂಡಿತು.

India Women s Spinners Trigger Dramatic Collapse as England Lose 9 Wickets in 25 Balls

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಸೋಫಿಯಾ ಡಂಕ್ಲಿ, ಡ್ಯಾನಿ ವ್ಯಾಟ್-ಹಾಡ್ಜ್ ಆರಂಭಿಕರು ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಯಿತು. ಈ ಜೋಡಿ ಮೊದಲ ವಿಕೆಟ್‌ಗೆ 15.2 ಓವರ್‌ಗಳಲ್ಲಿ 137 ರನ್‌ ಸೇರಿಸಿತು. ಈ ಜೋಡಿಯ ಆಟಕ್ಕೆ ಬ್ರೇಕ್‌ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಸ್‌ ವಿಫಲರಾದರು. ಸೋಫಿಯಾ ಡಂಕ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 75 ರನ್‌ ಸೇರಿಸಿತು. ಡ್ಯಾನಿ ವ್ಯಾಟ್-ಹಾಡ್ಜ್ 7 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 66 ರನ್‌ ಸಿಡಿಸಿ ಔಟ್ ಆದರು.

25 ಎಸೆತದಲ್ಲಿ 9 ವಿಕೆಟ್‌

ಟೀಮ್ ಇಂಡಿಯಾ ಇಂಗ್ಲೆಂಡ್‌ ತಂಡದ ಮೊದಲ ವಿಕೆಟ್‌ ಪಡೆಯಲು 15.2 ಓವರ್‌ಗಳ ವರೆಗೆ ಕಾಯಲೇ ಬೇಕಾಯಿತು. ಆ ಬಳಿಕ ಟೀಮ್ ಇಂಡಿಯಾ 19.2 ಓವರ್‌ಗಳಲ್ಲಿ 9 ವಿಕೆಟ್‌ ಪಡೆದು ಅಬ್ಬರಿಸಿದರು. ಪುರುಷರಾಗಲಿ, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಒಂದು ತಂಡ 9 ಆಟಗಾರರು ಇಷ್ಟು ಬೇಗ ಕಳೆದುಕೊಂಡಿದ್ದು ಇದೇ ಮೊದಲು. ಟೀಮ್ ಇಂಡಿಯಾದ ಪರ ಅರುಂಧತಿ ರೆಡ್ಡಿ, ದೀಪ್ತಿ ಶರ್ಮಾ ತಲಾ 3 ವಿಕೆಟ್‌ ಪಡೆದರು.

India Women s Spinners Trigger Dramatic Collapse as England Lose 9 Wickets in 25 Balls

ಭಾರತದ ಭರ್ಜರಿ ಆರಂಭ

ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಸ್ಮೃತಿ ಮಂಧನಾ ಹಾಗೂ ಶೆಫಾಲಿ ವರ್ಮಾ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 47 ರನ್‌ ಸೇರಿಸಿತು. ಸ್ಮೃತಿ 49 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 56 ರನ್‌ ಸಿಡಿಸಿ ಔಟ್ ಆದರು. ಜೇಮಿಮಾ ರೊಡ್ರಿಗಸ್ (20), ಹರ್ಮನ್ ಪ್ರೀತ್ ಕೌರ್ (23) ದೊಡ್ಡ ಇನಿಂಗ್ಸ್ ಕಟ್ಟದೇ ನಿರಾಸೆ ಅನುಭವಿಸಿದರು.

Story first published: Saturday, July 5, 2025, 9:04 [IST]
Other articles published on Jul 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+