ತ್ರಿಕೋನ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ: 3 ಯುವ ಪ್ರತಿಭೆಗೆ ಅವಕಾಶ
ಭಾರತ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ತ್ರಿಕೋನ ಸರಣಿಗೆ ತಂಡವನ್ನ ಪ್ರಕಟಿಸಾಲಗಿದೆ. ಈ ತ್ರಿಕೋನ ಸರಣಿ ಏಪ್ರಿಲ್ 27 ರಿಂದ ಆರಂಭವಾಗುತ್ತದೆ. ಈ ತ್ರಿಕೋನ ಸರಣಿಯ ಮೊದಲ ಪಂದ್ಯ ಶ್ರೀಲಂಕಾದ ಆರ್ ಪ್ರೇಮದಾಸ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ತ್ರಿಕೋನ ಸರಣಿಯ ಉಳಿದ ಪಂದ್ಯಗಳನ್ನು ಸಹ ಆಡಲಾಗುತ್ತದೆ. ಈ ತ್ರಿಕೋನ ಸರಣಿಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ಹರ್ಮನ್ ಪ್ರೀತ್ ಕೌರ್ ವಹಿಸಿಕೊಂಡಿದ್ದಾರೆ. ಇನ್ನು ಅನುಭವಿ ಸ್ಮೃತಿ ಮಂದನಾ ಉಪನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ತ್ರಿಕೋನ ಸರಣಿಗಾಗಿ ಘೋಷಿತ ತಂಡದಲ್ಲಿ ಅನುಭವಿ ಆಟಗಾರ್ತಿಯರಿಗೂ ಮಣೆ ಹಾಕಲಾಗಿದೆ. ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನಾ ಅವರನ್ನು ಹೊರತು ಪಡಿಸಿ ಪ್ರತಿಕಾ ರಾವಲ್, ಹರ್ಲಿನ್ ಡಿಯೋಲ್, ಜಿಮಿಮಾ ರೋಡ್ರಿಗಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್ ರೂಪದಲ್ಲಿ ರಿಚಾ ಘೋಷ್ ತಂಡ ಸೇರಿಕೊಂಡಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡುವ ಪ್ರಮುಖ ವೇಗಿ ರೇಣುಕಾ ಸಿಂಗ್ ಅವರನ್ನು ಆಯ್ಕೆ ಮಾಡಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಟಿಟಾ ಸಾಧು ಅವರನ್ನು ಕೈ ಬಿಡಲಾಗಿದೆ. ಇವರಿಬ್ಬರು ಸಹ ಗಾಯಕ್ಕೆ ತುತ್ತಾಗಿದ್ದರಿಂದ ಇವರನ್ನು ಕೈ ಬಿಡಲಾಗಿದೆ. ಇನ್ನು ಶೆಫಾಲಿ ವರ್ಮಾ ಮತ್ತೆ ತಂಡದಿಂದ ದೂರ ಉಳಿದಿದ್ದಾರೆ.
ಮೂವರಿಗೆ ಅವಕಾಶ
ಮುಂಬರುವ ತ್ರಿಕೋನ್ ಸರಣಿ ಭಾರತ ತಂಡದಲ್ಲಿ ಮೂವರು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿರು ಲೆಫ್ಟ್ ಆರ್ಮ್ ಸ್ಪಿನ್ ಬೌಲರ್ ಶ್ರೀ ಚರಣಿ ಅವರಿಗೆ ಅವಕಾಶ ನೀಡಲಾಗಿದೆ. ಇವರು ಈ ಆವೃತ್ತಿಯಲ್ಲಿ 4 ವಿಕೆಟ್ ಪಡೆದು ಅಬ್ಬರಿಸಿದ್ರು. ಚಾಲೆಂಜರ್ಸ್ ಟ್ರೋಫಿಯಲ್ಲಿ 18 ವಿಕೆಟ್‌ಗಳನ್ನು ಪಡೆದಿರುವ ಶುಚಿ ಉಪಾಧ್ಯಾಯ ಅವರಿಗೆ ಅವಕಾಶ ಸಿಕ್ಕಿದೆ. ಇನ್ನು ಗುಜರಾತ್ ಜೈಂಟ್ಸ್ ಪರ ಡಬ್ಲ್ಯುಪಿಎಲ್‌ನಲ್ಲಿ ಮಿಂಚಿದ್ದ ಕಾಶ್ವಿ ಗೌತಮ್ ಅವರಿಗೆ ಟೀಮ್ ಇಂಡಿಯಾ ಬಾಗಿಲು ತೆರೆದಿದೆ. ಇವರು ಈ ವರ್ಷದ ಮಹಿಳಾ ಲೀಗ್‌ನಲ್ಲಿ 11 ವಿಕೆಟ್ ಪಡೆದಿದ್ದರು.

ತ್ರಿಕೋನ ಸರಣಿಗೆ ಪ್ರಕಟಿತ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ಕಾಶ್ವಿ ಗೌತಮ್, ಸ್ನೇಹ ರಾಣಾ, ಅರುಂಧತಿ ರೆಡ್ಡಿ, ಶ್ರೀಪಾಸ್ ಹಸ್ನಿ, ತೇಜಲ್, ಶ್ರೀ ಚರಣಿ, ಶುಚಿ ಉಪಾಧ್ಯಾಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications