For Quick Alerts
ALLOW NOTIFICATIONS  
For Daily Alerts
 

ಸ್ಮೃತಿ ಹಾಗೂ ಪ್ರತೀಕಾ ದಾಖಲೆಯ ಜೊತೆಯಾಟ

ಈ ತಿಂಗಳ ಅಂತ್ಯದಲ್ಲಿ ಮಹಿಳಾ ವಿಶ್ವಕಪ್‌ ಏಕದಿನ ಪಂದ್ಯ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಭಾರತ ಹಾಗೂ ಆಸ್ಟ್ರೇಲಿಯಾ ವನಿತೆಯರ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯ ಚಂಡೀಗಡ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿತು. ಅಲ್ಲದೆ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 281 ರನ್‌ ಸೇರಿಸಿತು.

ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ ಈ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 114 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಇದು ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಮೂರನೇ ಅತ್ಯಧಿಕ ಜೊತೆಯಾಟ ಎಂಬ ಕೀರ್ತಿಗೆ ಪಾತ್ರವಾಗಿದೆ. 2009ರಲ್ಲಿ ಕ್ಯಾರೋಲಿನ್ ಅಟ್ಕಿನ್ಸ್ ಮತ್ತು ಸಾರಾ ಟೇಲರ್ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ 119 ರನ್ ಜೊತೆಯಾಟವನ್ನು ನೀಡಿದ್ದರು. ಎರಡನೇ ಅತಿ ಹೆಚ್ಚು ಆರಂಭಿಕ ಜೊತೆಯಾಟದ ಕಾಣಿಕೆ ಸಹ ಹೇಲಿ ಮ್ಯಾಥ್ಯೂಸ್ ಮತ್ತು ಕಿಶಾ ನೈಟ್ ಹೊಂದಿದ್ದು, ಈ ಜೋಡಿ 115 ರನ್‌ಗಳ ಜೊತೆಯಾಟ ನೀಡಿತ್ತು. ಈಗ ಭಾರತದ ಜೋಡಿ ಮೂರನೇ ಸ್ಥಾನ ಪಡೆದರು.

India Women s Team dominates Australia with a record partnership and Harmanpreet Kaur s 150th ODI

ಸ್ಮೃತಿ ಹಾಗೂ ಪ್ರತಿಕಾ ಆರಂಭಿಕರಾಗಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಈ ಜೋಡಿ ಆಡಿದ 15 ಇನಿಂಗ್ಸ್‌ಗಳಲ್ಲಿ 80ರ ಸರಾಸರಿಯಲ್ಲಿ 1200 ರನ್‌ ಕಲೆ ಹಾಕಿದೆ. ಈ ಇಬ್ಬರು ಆಟಗಾರರ ನಡುವೆ 6 ಅರ್ಧಶತ, 5 ಶತಕದ ಜೊತೆಯಾಟ ನೀಡಿದೆ. ಈ ದಾಖಲೆಗಳು ಮುಂದಿನ ವಿಶ್ವಕಪ್‌ನಲ್ಲಿ ಇವರ ಮೇಲೆ ಅಭಿಮಾನಿಗಳು ಅಪಾರ ವಿಶ್ವಾಸವನ್ನು ಇಡುವಂತೆ ಮಾಡಿದೆ.

ಭಾರತದ ಪರ ಪ್ರತಿಕಾ ರಾವಲ್‌ 64, ಸ್ಮೃತಿ ಮಂಧನಾ 58, ಹಾರ್ಲಿನ್‌ ಡಯೋಲ್‌ 54 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 281 ರನ್‌ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು.

India Women s Team dominates Australia with a record partnership and Harmanpreet Kaur s 150th ODI

ಹರ್ಮನ್ ಪ್ರೀತ್ ಕೌರ್‌ @150

ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರಿತ್ ಕೌರ್ ಅವರಿಗೆ ವಿಶೇಷ ದಿನವಾಗಿದೆ. ಈ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ 150 ನೇ ಏಕದಿನ ಪಂದ್ಯವನ್ನು ಆಡಿದ ದಾಖಲೆಯನ್ನು ಬರೆದರು. ಟೀಮ್ಇಂಡಿಯಾದಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆಯನ್ನು ಲೇಡಿ ಸಚಿನ್ ಖ್ಯಾತಿ ಮಿಥಾಲಿ ರಾಜ್‌ ಹೊಂದಿದ್ದಾರೆ. ಇವರು 232 ಪಂದ್ಯಗಳನ್ನು ಆಡಿದ್ದರೆ, ವೇಗಿ ಜೂಲನ್‌ ಗೋಸ್ವಾಮಿ 204 ಪಂದ್ಯ ಆಡಿದ್ದಾರೆ. ಮೂರನೇ ಸ್ಥಾನದಲ್ಲಿ ಹರ್ಮನ್ ನಿಲ್ಲುತ್ತಾರೆ.

Story first published: Sunday, September 14, 2025, 17:58 [IST]
Other articles published on Sep 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+