IRE vs IND: ಐರ್ಲೆಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ
ಭಾರತ ಮತ್ತು ಐರ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಮೊದಲ ಪಂದ್ಯ ಶುಕ್ರವಾರ ರಾಜ್‌ಕೋಟ್‌ನ ನಿರಂಜನ್‌ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಸಾರಥ್ಯದ ಟೀಮ್ ಇಂಡಿಯಾ ಐರ್ಲೆಂಡ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 238 ರನ್ ಗಳಿಸಿತು . 239 ರನ್‌ಗಳ ಗುರಿಯನ್ನು ಭಾರತ ತಂಡ 34.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ ಜಯ ಸಾಧಿಸಿತು. ಭಾರತದ ಪರ ಪ್ರತೀಕಾ ರಾವಲ್ ಮತ್ತು ತೇಜಲ್ ಹಸ್ಬ್ನಿಸ್ ಅದ್ಭುತ ಅರ್ಧಶತಕ ಸಿಡಿಸಿ ಮಿಂಚಿದರು.

ಪ್ರತೀಕಾ -ತೇಜಲ್ ಅಬ್ಬರ
ಐರ್ಲೆಂಡ್ ನೀಡಿದ 239 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ಭರ್ಜರಿ ಆರಂಭ ಪಡೆಯಿತು. ಸ್ಪೋಟಕ ಬ್ಯಾಟಿಂಗ್ ಮಾಡಿದ ನಾಯಕಿ ಸ್ಮೃತಿ ಮಂಧಾನ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿ ಔಟಾದರು. ಮತ್ತೊಂದೆಡೆ ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್ ತನ್ನ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ನಂತರ ಹರ್ಲೀನ್ ಡಿಯೋಲ್ 20 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ ಕೇವಲ 9 ರನ್‌ಗೆ ವಿಕೆಟ್ ಕಳೆದುಕೊಂಡರು. ಈ ವೇಳೆ ಒಂದಾದ ಪ್ರತೀಕಾ ರಾವಲ್ ಮತ್ತು ತೇಜಲ್ ಹಸ್ಬ್ನಿಸ್ ತಂಡದ ಗೆಲುವಿಗಾಗಿ ಅದ್ಭುತ ಪ್ರದರ್ಶನ ನೀಡಿದರು.
ಪ್ರತೀಕಾ ರಾವಲ್ 96 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ತೇಜಲ್ ಹಸ್ಸಾಬ್ನಿಸ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿದರು. ಅವರು 45 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 60 ರನ್‌ಗಳ ಅಮೋಘ ಇನಿಂಗ್ಸ್ ಆಡಿ ಔಟಾದರು. ಕೊನೆಯಲ್ಲಿ ರಿಚಾ ಘೋಷ್ ಎರಡೂ ಎಸೆತಗಳಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಐರ್ಲೆಂಡ್ ಪರ ಆಮಿ ಮ್ಯಾಗೈರ್ ಗರಿಷ್ಠ 3 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಐರ್ಲೆಂಡ್ ಪರ ನಾಯಕ ಗ್ಯಾಬಿ ಲೂಯಿಸ್ 129 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ 92 ರನ್ ಸಿಡಿಸಿದ್ದರು. ಆದರೂ ಅವರು ಶತಕ ಪೂರೈಸದೆ ವಿಕೆಟ್ ಕಳೆದುಕೊಂಡರು. ಅವರನ್ನು ಹೊರತುಪಡಿಸಿ, ಐರ್ಲೆಂಡ್ ಪರ ಲೇಹ್ ಪಾಲ್ 71 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 59 ರನ್ ಗಳಿಸಿದರು. ಭಾರತದ ಪರ ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದರೆ, ಟೈಟಾಸ್ ಸಾಧು, ಸೈಮಾ ಠಾಕೋರ್, ಸಯಾಲಿ ಸತ್ಘರೆ ಮತ್ತು ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications