ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ಭಾರತಕ್ಕೆ ವಿರೋಚಿತ ಗೆಲವು, ಬೌಲರ್‌ಗಳ ಪಾರುಪತ್ಯ

By Manjunatha
India won by 63 runs against South Africa in 3rd test

ಜೊಹಾನ್ಸ್‌ಬರ್ಗ್, ಜನವರಿ 28: ದಕ್ಷಿಣ ಆಫ್ರಿಕ ವಿರುದ್ಧದ ಮೂರು ಪಂದ್ಯದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ವಿರೋಚಿತ ಗೆಲುವು ಸಾಧಿಸಿದೆ.

ಬೌಲರ್‌ಗಳ ಸಂಘಟಿತ ದಾಳಿಯಿಂದಾಗಿ ಭಾರತ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು 63 ರನ್‌ನಿಂದ ಗೆದ್ದುಕೊಂಡಿದೆ. 2-1 ರಿಂದ ಸರಣಿ ಸೋತರೂ ಕೊನೆಯ ಪಂದ್ಯ ಗೆಲ್ಲುವ ಮೂಲಕ ಮಾನ ಉಳಿಸಿಕೊಂಡಿದೆ.

LIVE: ಐಪಿಎಲ್ ಹರಾಜು: ಮುಂಬೈ ಪಾಲಾದ ಎವಿನ್ ಲೆವಿಸ್LIVE: ಐಪಿಎಲ್ ಹರಾಜು: ಮುಂಬೈ ಪಾಲಾದ ಎವಿನ್ ಲೆವಿಸ್

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ 187 ರನ್ ಗಳಿಸಿತ್ತು, ಆನಂತರ ದ.ಆಫ್ರಿಕಾ 194 ರನ್‌ಗಳಿಗೆ ಆಲ್‌ಔಟ್ ಆಯಿತು, ಆನಂತರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 247 ರನ್‌ ಗಳಿಸಿ ದ.ಆಫ್ರಿಕಾ ಗೆಲುವಿಗೆ 240 ರನ್‌ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ ದ.ಆಫ್ರಿಕಾ ಮೊದಲಿಗೆ ಒಂದು ವಿಕೆಟ್ ಕಳೆದುಕೊಂಡಿತಾದರೂ ಆನಂತರ ಇನ್ನಿಂಗ್ಸ್‌ ಸಂಭಾಳಿಸಿಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ ಎಲ್ಗರ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು ಅವರ ಜೊತೆಗೂಡಿದ ಹಶೀಮ್ ಆಮ್ಲಾ 52 ರನ್‌ ಗಳಿಸಿದರು. ಇವರಿಬ್ಬರ ಹದವರಿತ ಬ್ಯಾಟಿಂಗ್ ಭಾರತದಿಂದ ವಿಜಯಲಕ್ಷ್ಮಿಯನ್ನು ದೂರ ಕರೆದುಕೊಂಡು ಹೋಗಿತ್ತು.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

120 ರನ್‌ಗಳಿಗೆ ಕೇವಲ 1 ವಿಕೆಟ್‌ ಮಾತ್ರ ಕಳೆದುಕೊಂಡು ಸುಸ್ಥಿತಿಯಲ್ಲೆ ಇದ್ದ ದ.ಆಫ್ರಿಕಾ ಆ ನಂತರ ಕುಸಿತದ ಹಾದಿ ಹಿಡಿಯಿತು. ಮಹಮ್ಮದ್ ಶಮಿ ಅವರು ನಿಖರ ದಾಳಿಗೆ ತರಗೆಲೆಗಳಂತೆ ದ.ಆಪ್ರಿಕಾ ಬ್ಯಾಟ್ಸ್‌ಮನ್‌ಗಳು ಉದುರಿದರು.

ಆಮ್ಲಾ ಅವರನ್ನು ಪೆವಿಲಿಯನ್‌ಗೆ ಕಳಿಸುವ ಮೂಲಕ ಇಶಾಂತ್‌ ಶರ್ಮ ಭಾರತದ ಗೆಲುವಿಗೆ ಮಾರಕವಾಗಬಹುದಾಗಿದ್ದ ಜೊತೆಯಾಟವನ್ನು ಮುರಿದರು. ಆ ನಂತರ ಬಂದ ಡಿವಿಲಿಯರ್ಸ್‌ (6) ಹೆಚ್ಚು ಹೊತ್ತು ಉಳಿಯಲಿಲ್ಲ. ಅವರನ್ನು ಬುಮ್ರಾ ಔಟ್‌ ಮಾಡಿದರು.

ಪಾಪ್‌ ಡುಪ್ಲಿಸಿಸ್ ಕೇವಲ ಎರಡು ರನ್‌ ಗಳಿಸಿ ಇಶಾಂತ್‌ ಶರ್ಮಾ ಅವರವಿಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅದರ ಮರು ಓವರ್‌ನಲ್ಲೇ ಕೀಪರ್ ಡಿ ಕಾಕ್ ಖಾತೆಯನ್ನೇ ತೆರೆಯದೆ ಬುಮ್ರಾ ಅವರಿಗೆ ವಿಕೆಟ್ ಒಪ್ಪಿಸಿದರು.

ಆ ನಂತರ ಬಂದ್‌ ಟೇಲ್‌ ಎಂಡರ್‌ಗಳಾದ ಫಿಲೆಂಡರ್, ರಬಾಡಾ, ಮೋರ್ನೆ ಮಾರ್ಕಲ್, ಲುಂಗಿ ಗಿನಿ, ಫೆಲುಕ್ವಾಯೊ ಅವರುಗಳನ್ನು ಶಮಿ ಔಟ್ ಮಾಡಿದರು. ಕೊನೆಯ ವರೆಗೆ ಹೋರಾಟ ಮಾಡಿದ ಆರಂಭಿಕ ಬ್ಯಾಟ್ಸ್‌ಮನ್ ಎಲ್ಗರ್‌ 86 ರನ್ ಗಳಿಸಿ ಅಜೇಯರಾಗುಳಿದರು.

ಎರಡು ಟೆಸ್ಟ್‌ಗಳನ್ನು ಸೋತು ಹೈರಾಣಾಗಿದ್ದ ಭಾರತ ಕೊನೆಯ ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ಸಮಾಧಾನ ಮಾಡಿಕೊಂಡಿತು. ಉತ್ತಮ ಬೌಲಿಂಗ್ ಮಾಡಿ ಉಪಯುಕ್ತ ರನ್‌ ಕೂಡ ಗಳಿಸಿದ ಭುವನೇಶ್ವರ್‌ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದ.ಆಪ್ರಿಕಾದ ಫಿಲೆಂಡರ್ಗೆ ಸರಣಿ ಶ್ರೇಷ್ಠ ಗೌರವ ದೊರಕಿತು.

Story first published: Sunday, January 28, 2018, 10:14 [IST]
Other articles published on Jan 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X