For Quick Alerts
ALLOW NOTIFICATIONS  
For Daily Alerts
 

IND vs ENG: ರೋಹಿತ್ ಶರ್ಮಾ ಕ್ಲಿಕ್; ಭಾರತಕ್ಕೆ ಏಕದಿನ ಸರಣಿ ಜಯ

ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ 4 ವಿಕೆಟ್‌ಗಳ ಭರ್ಜರಿ ಜಯ ಸಿಕ್ಕಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಭಾರತ ವಶಪಸಿಕೊಂಡಿದೆ. ರೋಹಿತ್ ಶರ್ಮಾ ಅವರ ಅದ್ಭುತ ಶತಕದಿಂದಾಗಿ ಇಂಗ್ಲೆಂಡ್ ತಂಡ ಟಿ20 ನಂತರ ಭಾರತದ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿತು. ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ ಸರಣಿ ಗೆದ್ದಿರುವುದು ಪ್ರಮುಖವಾಗಿದೆ. ನಾಯಕ ರೋಹಿತ್ ಶರ್ಮಾ ಕೂಡ ಫಾರ್ಮ್‌ಗೆ ಮರಳಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 10 ವಿಕೆಟ್‌ಗಳ ನಷ್ಟಕ್ಕೆ 304 ರನ್ ಗಳಿಸಿತು. 305 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 44.3 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 33 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿತು.

India won the ODI series against England

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಪೂರ್ಣ 50 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಇನ್ನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 10.5 ಓವರ್‌ಗಳಲ್ಲಿ 80 ರನ್ ಸೇರಿಸಿದರು. 26 ರನ್ ಗಳಿಸಿದ್ದ ಸಾಲ್ಡ್ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಔಟಾದರು. ಇದಾದ ನಂತರ ಇಂಗ್ಲೆಂಡ್ ಪರ ಬೆನ್ ಡಕೆಟ್ 56 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 65 ರನ್ ಗಳಿಸಿದರು. ಜೋ ರೂಟ್ 72 ಎಸೆತಗಳಲ್ಲಿ 6 ಬೌಂಡರಿಗಳಿಂದ 69 ರನ್ ಗಳಿಸಿದರು.

ಹ್ಯಾರಿ ಬ್ರೂಕ್ (31), ಜೋಸ್ ಬಟ್ಲರ್ (34) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (41) ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ತಂಡದ ಸ್ಕೋರ್ ಅನ್ನು 304ಕ್ಕೆ ಕೊಂಡೊಯ್ದರು. ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿ ಮಿಂಚಿದರು. ಅವರು ಬೆನ್ ಡಕೆಟ್, ಜೋ ರೂಟ್ ಮತ್ತು ಜೇಮೀ ಓವರ್ಟನ್ ಅವರನ್ನು ಔಟ್ ಮಾಡಿದರು. ಮೊಹಮ್ಮದ್ ಶಮಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಲಾ 1 ವಿಕೆಟ್ ಪಡೆದರು. ಪರಿಣಾಮ ಒಂದು ಎಸೆತ ಬಾಕಿ ಇರುವಾಗ 304 ರನ್‌ಗಳಿಗೆ ಆಲೌಟ್ ಆಯಿತು.

ಇಂಗ್ಲೆಂಡ್ ನೀಡಿದ 305 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಲು ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಕ್ರೀಸ್‌ಗೆ ಬಂದರು. ಇಬ್ಬರೂ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 136 ರನ್‌ಗಳ ಶತಕದ ಜೊತೆಯಾಟಯನ್ನು ಗಳಿಸಿದರು. ಭಾರತಕ್ಕೆ ಮೊದಲ ಹಿನ್ನಡೆ ಗಿಲ್ ರೂಪದಲ್ಲಿ ಎದುರಾಗಿದ್ದು, ಜೇಮೀ ಓವರ್ಟನ್ ಬೌಲಿಂಗ್‌ನಲ್ಲಿ 60 ರನ್‌ಗಳಿಸಿದ ಗಿಲ್ ಔಟಾದರು. ಇದಾದ ನಂತರ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು, ಆದರೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ . ಕೇವಲ 5 ರನ್ ಗಳಿಸಿದ ನಂತರ ಆದಿಲ್ ರಶೀದ್‌ಗೆ ಬಲಿಯಾದರು.

ಸತತ ಎರಡು ವಿಕೆಟ್‌ ಬಿದ್ದರೂ ರೋಹಿತ್ ಶರ್ಮಾ ಅಬ್ಬರ ನಿಲ್ಲಲಿಲ್ಲ. ಅವರು 76 ಎಸೆತಗಳಲ್ಲಿ 9 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಏಕದಿನ ವೃತ್ತಿಜೀವನದ 32 ನೇ ಶತಕವನ್ನು ಪೂರೈಸಿದರು. ಹಿಟ್‌ಮ್ಯಾನ್ 90 ಎಸೆತಗಳಲ್ಲಿ 17 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 119 ರನ್ ಗಳಿಸಿ ಗೆಲುವಿನ ಸನಿಹದಲ್ಲಿ ವಿಕೆಟ್ ಕಳೆದುಕೊಂಡರು. ಶ್ರೇಯಸ್ ಅಯ್ಯರ್ 47 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ರನೌಟ್ ಆದರು.

ಶ್ರೇಯಸ್ ಅಯ್ಯರ್ ನಂತರ, ಕೆಎಲ್ ರಾಹುಲ್ 10 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಹಾರ್ದಿಕ್ ಪಾಂಡ್ಯ ಕೂಡ 10 ರನ್ ಗಳಿಸಿ ಹಿಂತಿರುಗಿದರು. ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಜೊತೆಗೂಡಿ ಭಾರತಕ್ಕೆ ಸುಲಭವಾಗಿ ಗೆಲುವು ತಂದುಕೊಟ್ಟರು. ಅಕ್ಸರ್ 43 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 41 ರನ್ ಗಳಿಸಿದರೆ, ರವೀಂದ್ರ ಜಡೇಜಾ 11 ರನ್ ಗಳಿಸಿ ಅಜೇಯರಾಗುಳಿದರು.

Story first published: Sunday, February 9, 2025, 21:52 [IST]
Other articles published on Feb 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+