India World Cup Squad 2023: ವಿಶ್ವಕಪ್‌ಗೆ 15 ಆಟಗಾರರ ಬಲಿಷ್ಠ ಭಾರತ ತಂಡ ಪ್ರಕಟ: ಕನ್ನಡಿಗನಿಗೆ ಶಾಕ್!
ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ತಂಡ ಪ್ರಕಟವಾಗಿದೆ. ರೋಹಿತ್ ಶರ್ಮಾ ನೇತೃತ್ವದ 15 ಆಟಗಾರರ ಬಳಗವನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಪ್ರಕಟಿಸಿದ್ದು ಏಷ್ಯಾಕಪ್ ತಂಡದಲ್ಲಿ ಸಣ್ಣ ಬದಲಾವಣೆಯೊಂದಿಗೆ ತಂಡವನ್ನು ಅಂತಿಮಗೊಳಿಸಲಾಗಿದೆ.
ಏಷ್ಯಾಕಪ್ ತಂಡದಲ್ಲಿ 17 ಆಟಗಾರರ ಪಡೆಯನ್ನು ಘೋಷಿಸಲಾಗಿತ್ತು. ಆದರೆ ವಿಶ್ವಕಪ್‌ನಲ್ಲಿ 15 ಆಟಗಾರರ ತಂಡಕ್ಕೆ ಮಾತ್ರವೇ ಅವಕಾಶವಿದೆ. ಹಾಗಾಗಿ ಏಷ್ಯಾಕಪ್‌ನಲ್ಲಿ ಸ್ಥಾನವನ್ನು ಪಡೆದ ಇಬ್ಬರು ಆಟಗಾರರಿಗೆ ಕೊಕ್ ಸಿಗುವುದು ನಿಶ್ಚಿತವಾಗಿತ್ತು. ಕನ್ನಡಿಗ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಹಾಗೂ ತಿಲಕ್ ವರ್ಮ ವಿಶ್ವಕಪ್ ತಂಡದಿಂದ ಹೊರಬಿದ್ದಿರುವ ಇಬ್ಬರು ಆಟಗಾರರಾಗಿದ್ದಾರೆ.

ವಿಶ್ವಕಪ್ ತಂಡದಲ್ಲಿ ಒಬ್ಬನೇ ಕನ್ನಡಿಗ
ಈ ಬಾರಿಯ ವಿಶ್ವಕಪ್ ತಂಡದಲ್ಲಿ ಕೇವಲ ಓರ್ವ ಕನ್ನಡಿಗನಿಗೆ ಭಾರತ ತಂಡದಲ್ಲಿ ಅವಕಾಶ ದೊರೆತಿದೆ. ಕೆಎಲ್ ರಾಹುಲ್ ಮಾತ್ರವೇ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಕನ್ನಡಿಗ ಆಟಗಾರ. ಏಷ್ಯಾಕಪ್ ತಂಡದಲ್ಲಿ ಪ್ರಸಿಧ್ಧ್ ಕೃಷ್ಣ ಕೂಡ ಸ್ಥಾನವನ್ನು ಪಡೆದುಕೊಂಡಿದ್ದರಾದರೂ ವಿಶ್ವಕಪ್‌ನಲ್ಲಿ ಅವರಿಗೆ ಅವಕಾಶ ದೊರೆತಿಲ್ಲ.
ಏಷ್ಯಾಕಪ್ ತಂಡವೇ ಬಹುತೇಕ ಅಂತಿಮ
ಇನ್ನು ವಿಶ್ವಕಪ್‌ಗೆ ಪ್ರಕಟಿಸಿರುವ ತಂಡದಲ್ಲಿ ನಿರೀಕ್ಷಿಸಿದಂತೆಯೇ ಏಷ್ಯಾಕಪ್‌ಗೆ ಪ್ರಕಟಿಸಿರುವ ತಂಡವನ್ನು ಬಹುತೇಕ ಉಳಿಸಿಕೊಳ್ಳಲಾಗಿದೆ. ಏಷ್ಯಾಕಪ್‌ಗೆ 17 ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದ ವಿಶ್ವಕಪ್ ತಂಡದಲ್ಲಿ 15 ಆಟಗಾರರಿಗೆ ಮಾತ್ರ ಅವಕಾಶ ಇರುವ ಕಾರಣ ಪ್ರಸಿದ್ಧ್ ಕೃಷ್ಣ ಹಾಗೂ ತಿಲಕ್ ವರ್ಮ ಅವರನ್ನು ಕೈಬಿಡಲಾಗಿದೆ.
ಸಂಯೋಜನೆ ಹೇಗಿದೆ?
ಭಾರತ ಪ್ರಕಟಿಸಿರುವ ತಂಡದಲ್ಲಿ 7 ಪರಿಪೂರ್ಣ ಬ್ಯಾಟರ್‌ಗಳು ಇದ್ದರೆ ಮೂವರು ಆಲ್‌ರೌಂಡರ್‌ಗಳು ಸ್ಥಾನ ಪಡೆದುಕೊಂಡಿದ್ದಾರೆ. ನಾಲ್ವರು ವೇಗಿಗಳು ಹಾಗೂ ಓರ್ವ ಪೂರ್ಣ ಪ್ರಮಾಣದ ಸ್ಪಿನ್ನರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೂವರು ಆಲ್‌ರೌಂಡರ್‌ಗಳ ಪೈಕಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸ್ಪಿನ್ ವಿಭಾಗದಲ್ಲಿ ತಂಡದ ಸಮತೋಲನವನ್ನು ಕಾಯ್ದುಕೊಳ್ಳಳಿದ್ದಾರೆ.
ಬಲಿಷ್ಠವಾಗಿದೆ ಭಾರತದ ಬ್ಯಾಟಿಂಗ್
ಇನ್ನು ಭಾರತ ಬಲಿಷ್ಠವಾದ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ರೋಹಿತ್ ಶರ್ಮಾ ಅವರಿಂದ ಆರಂಭಗೊಂಡು ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದಾರೆ. ಹೀಗಾಗಿ ಭಾರತದ ನೆಲದಲ್ಲಿ ನಡೆಯಲಿರುವ ಈ ವಿರ್ಶವಕಪ್ ಟೂರ್ನಿಯಲ್ಲಿ ಎಂಥಾ ಎದುರಾಳಿಗಳಾದರೂ ಈ ಪಡೆಯನ್ನು ಎದುರಿಸುವುದು ಕಷ್ಟವಾಗಲಿದೆ.
ಬೌಲಿಂಗ್ ವಿಭಾಗ ಹೇಗಿದೆ
ಬೌಲಿಂಗ್ ವಿಭಾಗದ ನೇತೃತ್ವವನ್ನು ಜಸ್ಪ್ರೀತ್ ಬೂಮ್ರಾ ವಹಿಸಿಕೊಳ್ಳಲಿದ್ದಾರೆ. ಐರ್ಲೆಂಡ್ ವಿರುದ್ಧ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿರುವ ಬೂಮ್ರಾ ಏಷ್ಯಾಕಪ್‌ನಲ್ಲಿ ಬೌಲಿಂಗ್ ದಾಳಿ ಇನ್ನಷ್ಟೇ ನಡೆಸಬೇಕಿದೆ. ಆದರೆ ಅವರ ಫಾರ್ಮ್ ಈಗಾಗಲೇ ತಂಡಕ್ಕೆ ಸ್ಪೀರ್ತಿ ನೀಡುವಂತಿದೆ. ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಸಿರಾಜ್ ಇದ್ದು ಶಾರ್ದೂಲ್ ಠಾಕೂರ್ ಇವರಿಗೆ ಸಾಥ್ ನೀಡಲಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಕುಡ ಆಲ್‌ಲೌಂಡರ್ ಆಗಿ ನೆರವಾಗಲಿದ್ದಾರೆ. ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಸ್ಪಿನ್ ವಿಭಾಗದಲ್ಲಿ ಎದುರಾಳಿಗಳಿಗೆ ಸಂಕಷ್ಟ ನೀಡಲು ಸಜ್ಜಾಗಿದ್ದಾರೆ.
ಭಾರತದ ಸ್ಕ್ವಾಡ್ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್,ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications