IND vs ZIM 1st T20: ಭಾರತ-ಜಿಂಬಾಬ್ವೆ ಹೆಡ್-ಟು-ಹೆಡ್, ಹವಾಮಾನ, ಪಿಚ್ ವರದಿ ಕುರಿತು ಸಂಪೂರ್ಣ ಮಾಹಿತಿ
ಜುಲೈ 6 ಶನಿವಾರ, ಭಾರತ ಮತ್ತು ಜಿಂಬಾಬ್ವೆ ನಡುವೆ ಟಿ20 ಸರಣಿಯ ಮೊದಲ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30ಕ್ಕೆ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಆಟಗಾರರು ಅಂತರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ನಾಯಕರಾಗಿರುವ ಶುಬ್‌ಮನ್ ಗಿಲ್ ಅವರ ಕೈಯಲ್ಲಿ ಭಾರತ ತಂಡದ ಕಮಾಂಡ್ ಇರಲಿದೆ. ಇದಕ್ಕೂ ಮೊದಲು ಗಿಲ್ ಐಪಿಎಲ್‌ನಲ್ಲಿ ಗುಜರಾತ್‌ಗೆ ನಾಯಕರಾಗಿದ್ದರು.

ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಆರಂಭಿಕರಾಗಿ ಬ್ಯಾಟಿಂಗ್‌ಗೆ ಬರಲಿದ್ದಾರೆ ಎಂದು ಶುಭಮನ್ ಗಿಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದಲ್ಲದೇ ಸದ್ಯ ಭಾರತ ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ ಗಳಿದ್ದು, ಜಿತೇಶ್ ಶರ್ಮಾ ಹಾಗೂ ಧ್ರುವ ಜುರೈಲ್ ಒಬ್ಬರಿಗೆ ಅವಕಾಶ ಸಿಗಲಿದೆ. ಪ್ರತಿಕೂಲ ಹವಾಮಾನದಿಂದಾಗಿ ಬಾರ್ಬಡೋಸ್‌ನಿಂದ ವಿಮಾನ ವಿಳಂಬವಾದ ಕಾರಣ ಸಂಜು ಸ್ಯಾಮ್ಸನ್ ಮೊದಲ ಎರಡು ಪಂದ್ಯಗಳಿಂದ ದೂರ ಉಳಿದಿದ್ದಾರೆ.
ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಐಪಿಎಲ್ ಸ್ಟಾರ್ ಆಟಗಾರರಿಂದ ಕಂಗೊಳಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ಲೇಯಿಂಗ್ -11 ಅನ್ನು ನೋಡಲು ತುಂಬಾ ಆಸಕ್ತಿದಾಯಕವಾಗಿದೆ. ಐಪಿಎಲ್ 2024ರ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಮತ್ತು ರಿಯಾನ್ ಪರಾಗ್ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ.
ಮತ್ತೊಂದೆಡೆ ಉಗಾಂಡಾ ವಿರುದ್ಧದ ಸೋಲಿನ ನಂತರ ಜಿಂಬಾಬ್ವೆ 2024ರ ಟಿ20 ವಿಶ್ವಕಪ್‌ನಲ್ಲಿ ಸ್ಥಾನವನ್ನು ಕಳೆದುಕೊಂಡಿತ್ತು. ಸಿಕಂದರ್ ಮತ್ತು ಬ್ಲೆಸ್ಸಿಂಗ್ ಮುಜರಬಾನಿಯಂತಹ ಅನುಭವಿ ಆಟಗಾರರು ತಂಡದಲ್ಲಿದ್ದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.
ಪಿಚ್ ವರದಿ
ಹರಾರೆ ಹೆಚ್ಚು ಸ್ಕೋರಿಂಗ್ ಸ್ಥಳವಾಗಿದೆ ಎಂದು ನಿರೀಕ್ಷಿಸಲಾಗಿದೆ. ಕಡಿಮೆ ಸ್ಕೋರಿಂಗ್ ಟಿ20 ವಿಶ್ವಕಪ್ 2024ರ ನಂತರ, ಸಿಕ್ಸರ್ ಮತ್ತು ಬೌಂಡರಿಗಳನ್ನು ನೋಡಲು ಇಷ್ಟಪಡುವವರಿಗೆ ಈ ಪಂದ್ಯವು ಸ್ವಲ್ಪ ಉತ್ಸಾಹ ತರುಬಹುದು. ಇಂತಹ ಪರಿಸ್ಥಿತಿಯಲ್ಲಿ ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡುಬರುತ್ತಿದೆ.
ಹವಾಮಾನ ವರದಿ
ಮೊದಲ ಟಿ20 ಪಂದ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲದಿರುವುದು ಅಭಿಮಾನಿಗಳಿಗೆ ಸಂತಸದ ವಿಷಯವಾಗಿದ್ದು, ಶೇ.0ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹರಾರೆ ಹವಾಮಾನ ಇಲಾಖೆ ತಿಳಿಸಿದೆ.
ಪಂದ್ಯದ ಸಮಯದಲ್ಲಿ ತಾಪಮಾನವು 24 °C ರಿಂದ 25 °C ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳು ಭಾರತೀಯ ಯುವ ತಂಡದ ಸಂಪೂರ್ಣ ಅಮೋಘ ಆಟವನ್ನು ಯಾವುದೇ ಆಡಚಣೆ ಇಲ್ಲದೆ ನೋಡಬಹುದು.
ಭಾರತ vs ಜಿಂಬಾಬ್ವೆ ಹೆಡ್-ಟು-ಹೆಡ್
ಭಾರತ ಮತ್ತು ಜಿಂಬಾಬ್ವೆ ನಡುವೆ ಇದುವರೆಗೆ 6 ಟಿ20 ಪಂದ್ಯಗಳು ನಡೆದಿದ್ದು, ಈ ಪಂದ್ಯಗಳಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸಿದೆ. ಭಾರತದ ವಿರುದ್ಧ ಜಿಂಬಾಬ್ವೆ 6 ಪಂದ್ಯಗಳಲ್ಲಿ 2 ಗೆದ್ದಿದೆ, ಆದರೆ ಭಾರತ 4 ಪಂದ್ಯಗಳಲ್ಲಿ ಜಯ ದಾಖಲಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಂಬಾಬ್ವೆಯನ್ನು ಲಘುವಾಗಿ ಪರಿಗಣಿಸುವುದು ಸರಿಯಲ್ಲ.
ಭಾರತ vs ಜಿಂಬಾಬ್ವೆ ಸಂಭಾವ್ಯ ಪ್ಲೇಯಿಂಗ್-11
ಭಾರತ: ಶುಭಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್(ವಿಕೆಟ್‌ಕೀಪರ್), ರಿಯಾನ್ ಪರಾಗ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ಸಾಯಿ ಸುದರ್ಶನ್
ಜಿಂಬಾಬ್ವೆ: ಸಿಕಂದರ್ ರಜಾ (ನಾಯಕ), ಬಿ ಮುಜರಬಾನಿ, ಬ್ರ್ಯಾಂಡನ್ ಮಾವುಟಾ, ಬ್ರಿಯಾನ್ ಬೆನೆಟ್, ಎಂ ಶುಂಬಾ, ಜೊನಾಥನ್ ಕ್ಯಾಂಪ್‌ಬೆಲ್, ಟೆಂಡೈ ಚಟಾರಾ, ಲ್ಯೂಕ್ ಜೊಂಗ್ವೆ, ಇನೋಸೆಂಟ್ ಕೈಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ಬ್ರಾಂಡನ್ ಮಾವುಟಾ, ಡಿಯೋನ್ ಮೈಯರ್ಸ್, ಆಂಟಮ್ ನಾಕ್ ವಿಯರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications