ಲಾಕ್‌ಡೌನ್ ನಿಯಮ ಮುರಿದು ಪ್ರಯಾಣಿಸಿದ ಭಾರತೀಯ ಕ್ರಿಕೆಟಿಗನಿಗೆ ದಂಡ!

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ. ಸರ್ಕಾರದ ಈ ಆದೇಶವನ್ನು ಪಾಲಿಸಿ ಎಂದು ಸೆಲೆಬ್ರಿಟಿಗಳು ಕರೆ ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಆಟಗಾರರೂ ಕೂಡ ಈ ಸಂದೇಶವನ್ನು ನೀಡಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಆಲ್‌ರೌಂಡರ್ ಆಟಗಾರನೋರ್ವ ಈ ಆದೇಶವನ್ನು ಮುರಿದು ದಂಡ ಹಾಕಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಲಾಕ್‌ಡೌನ್‌ ಮುರಿದ ಕಾರಣಕ್ಕೆ ದಂಡ ಹಾಕಿಸಿಕೊಂಡಿರುವ ಆಟಗಾರ ರಿಷಿ ಧವನ್. ಪಾಸ್‌ ಇಲ್ಲದೆ ಕಾರ್‌ನಲ್ಲಿ ಬ್ಯಾಂಕ್‌ಗೆ ಪ್ರಯಾಣವನ್ನು ಮಾಡಿದ್ದರು ರಿ‍ಷಿ ಧವನ್. ಈ ಕಾರಣಕ್ಕೆ ರಿಷಿ ಧವನ್‌ಗೆ 500 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಇದಕ್ಕೂ ಮುನ್ನ ರಿಷಿ ಧವನ್ ಕೊರೊನಾ ವೈರಸ್ ರಿಲೀಫ್ ಫಂಡ್‌ಗೆ 1 ಲಕ್ಷ ರೂಪಾಯಿಯ ನೆರವನ್ನು ನೀಡಿದ್ದರು.

ಜಪಾನ್‌ನ ಸುಮೋ ಕುಸ್ತಿಪಟುಗೆ ಕೊರೊನಾವೈರಸ್ ಸೋಂಕುಜಪಾನ್‌ನ ಸುಮೋ ಕುಸ್ತಿಪಟುಗೆ ಕೊರೊನಾವೈರಸ್ ಸೋಂಕು

'ನಾಕಾ ಬಳಿ ಮಧ್ಯಾಹ್ನ 12.40ರ ಸುಮಾರಿಗೆ ರಿಷಿ ಧವನ್ ಇದ್ದ ಕಾರನ್ನು ಪೊಲೀಸ್ ಸಿಬ್ಬಂದಿಗಳು ತಡೆದಿದ್ದಾರೆ. ನಿಯಮದ ಪ್ರಕಾರ ಈ ಸಂದರ್ಭದಲ್ಲಿ ರಿಷಿ ಧವನ್ ಬಳಿ ಅಗತ್ಯ ಪಾಸ್‌ ಇರಲಿಲ್ಲ. ಹೀಗಾಗಿ 500 ರೂಪಾಯಿಯ ದಂಡವನ್ನು ವಿಧಿಸಲಾಗಿದೆ. ಸ್ಥಳದಲ್ಲೇ ಧವನ್ ಈ ದಂಡ ಮೊತ್ತವನ್ನು ಪಾವತಿಸಿದ್ದಾರೆ' ಎಂದು ಮಂಡಿ ಎಸ್‌ಪಿ ಗುರುದೇವ್ ಚಾಂದ್ ಶರ್ಮಾ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಮೂಲದ ರಿಷಿ ಧವನ್ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆಯನ್ನು ಮಾಡಿದ್ದಾರೆ. ಅದೇ ವರ್ಷ ಜಂಬಾಬ್ವೆ ವಿರುದ್ಧದ ಸರಣಿಯಲ್ಲಿ ಟಿ20 ಗೂ ಆಯ್ಕೆಯಾಗಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಿಷಿ ಧವನ್‌ಗೆ ಮಿಂಚಲು ಸಾಧ್ಯವಾಗಲಿಲ್ಲ. ಮೂರು ಏಕದಿನ ಮತ್ತು ಏಕೈಕ ಟಿ20 ಪಂದ್ಯದಲ್ಲಿಷ್ಟೇ ಧವನ್ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲು ಸಾಧ್ಯವಾಗಿದೆ.

ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾನ್ ಹಾರ್ಕೋರ್ಟ್ ಡು ಪ್ರೀಜ್ ನಿಧನದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾನ್ ಹಾರ್ಕೋರ್ಟ್ ಡು ಪ್ರೀಜ್ ನಿಧನ

ಐಪಿಎಲ್‌ನಲ್ಲಿ ರಿಷಿ ಧವನ್ ಕಿಂಗ್ಸ್‌ ಇಲವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇತ್ತೀಚೆಗೆ ನಡೆದ ರಣಜಿ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ತಂಡವನ್ನು ರಿಷಿ ಪ್ರತಿನಿಧಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, April 10, 2020, 21:40 [IST]
Other articles published on Apr 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X