ಹುಟ್ಟೂರಿನ ಬೀದಿ ಗುಡಿಸಿದ ಸುರೇಶ್ ರೈನಾ
ಗಾಜಿಯಾಬಾದ್, ನ. 19 : ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ಕ್ರಿಕೆಟಿಗ ಸುರೇಶ್ ರೈನಾ ಕೈ ಜೋಡಿಸಿದ್ದಾರೆ. ನರೇಂದ್ರ ಮೋದಿ ರೈನಾ ಹೆಸರನ್ನು ನಾಮಿನೇಶನ್ ಮಾಡಿದ್ದರು. ತಮ್ಮ ಹೂಟ್ಟೂರಿನಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡ ಟಿ-20 ಸ್ಪೆಷಲಿಸ್ಟ್ ಸ್ಥಳೀಯರು ಮತ್ತು ಮಕ್ಕಳ ಜತೆ ಬೀದಿ ಗುಡಿಸಿದರು.
ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಬಹಳ ಹಿಂದೆಯೇ ನಿರ್ಧಾರ ಮಾಡಿದ್ದೆ. ಇದೊಂದು ಮಾದರಿ ಕಾರ್ಯಕ್ರಮ. ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದ್ದಾರೆ.[ಸ್ವಚ್ಛ ಭಾರತಕ್ಕೆ ಮತ್ತೆ 9 ಜನರನ್ನು ಆಹ್ವಾನಿಸಿದ ಮೋದಿ]

ಅಭಿಯಾನವನ್ನು ದೇಶ ಭಕ್ತಿಯ ಸಂಕೇತ ಎಂದೇ ಪರಿಗಣಿಸಬಹುದು. ನಾನು ಅಭಿಯಾನ ಪೂರೈಸಿದಕ್ಕೆ ಸಂತೃಪ್ತಿಯಿದೆ. ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ಟಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಅಪ್ ಲೋಡ್ ಮಾಡಿರುವ ರೈನಾ, ಉತ್ತರ ಪ್ರದೇಶದ ಪ್ರವೀಣ್ ಕುಮಾರ್, ಪಿಯೂಶ್ ಚಾವ್ಲಾ, ಆರ್ ಪಿ ಸಿಂಗ್ ಜತೆಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್ ಅವರನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಮುಂದಾಗಲು ಹೆಸರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications