ಈ ತಂಡಕ್ಕೆ ಭಾರತೀಯ ಆಟಗಾರರೇ ದೊಡ್ಡ ಸಮಸ್ಯೆ ಆಗಬಲ್ಲರು: ಗೌತಮ್ ಗಂಭೀರ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್‌ಗಳ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡರೆ ಕೆಕೆಆರ್ ತಂಡದ ಬ್ಯಾಟಿಂಗ್ ಸರದಿ ಮತ್ತಷ್ಟು ಬಲಿಷ್ಠವಾಗಬೇಕಿದೆ ಎಂದಿದ್ದಾರೆ.
ಬಾಲಿವುಡ್ ನಟ ಶಾರೂಖ್ ಖಾನ್ ಮಾಲಿಕತ್ವದ ಕೆಕೆಆರ್ ತಂಡ ಈ ಬಾರಿಯ ಹರಾಜಿನಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಹರ್ಭಜನ್ ಸಿಂಗ್ ಹಾಗೂ ಕರುಣ್ ನಾಯರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ.
ಶುಬ್ಮನ್ ಗಿಲ್ ಅವರನ್ನು ಹಾಗೂ ಕೆಲ ಸಂದರ್ಭಗಳಲ್ಲಿ ನಿತೀಶ್ ರಾಣಾ ಅವರನ್ನು ಹೊರತುಪಡಿಸಿದರೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಸಮಸ್ಯೆಯನ್ನು ನೀಡಬಹುದು. ಹೆಚ್ಚಿನ ಗುಣಮಟ್ಟವನ್ನು ಉಳದವರಿಂದ ನಾನು ಕಾಣುತ್ತಿಲ್ಲ. ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ದಿನೇಶ್ ಕಾರ್ತಿಕ್ ಕೆಳ ದರ್ಜೆಯಲ್ಲಿ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ತೀರಾ ಕಳಪೆ ಆಟವನ್ನು ಅವರು ಪ್ರದರ್ಶಿಸಿದ್ದರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಇದೇ ಕಾರಣದಿಂದಾಗಿ ಕೆಕೆಆರ್ ತಂಡ ಇಯಾನ್ ಮಾರ್ಗನ್ ಹಾಗೂ ಆಂಡ್ರೆ ರಸೆಲ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಕೆಕೆಆರ್ ತಮಡ ಈ ಬಾರಿ ಸ್ಪರ್ಧೆಯನ್ನು ನೀಡಬೇಕಾದರೆ ರಸೆಲ್ ಈ ಬಾರಿ ಆರ್ಭಟಿಸಬೇಕಾದ ಅಗತ್ಯವಿದೆ. ಅವರು ಕಪ್ ಗೆಲ್ಲದೆ 6-7 ವರ್ಷಗಳಾಗಿದೆ. ಹಾಗಾಗಿ ಅವರು ಪಂದ್ಯಾವಳಿಯನ್ನು ಗೆಲ್ಲಬೇಕಾದ ಅಗತ್ಯವಿದೆ ಎಂದು ಗಂಭೀರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೆಕೆಆರ್ ಸಂಪೂರ್ಣ ತಂಡ ಹೀಗಿದೆ: ಇಯಾನ್ ಮಾರ್ಗಾನ್, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ಸಂದೀಪ್ ವಾರಿಯರ್, ಶಿವಂ ಮಾವಿ, ಕಮಲೇಶ್ ನಾಗರ್ಕೋಟಿ, ಲಾಕಿ ಫರ್ಗುಸನ್, ಪ್ಯಾಟ್ ಕಮ್ಮಿನ್ಸ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್, ರಿಂಕು ಸಿಂಗ್ , ಪವನ್ ನೇಗಿ, ವೆಂಕಟೇಶ್ ಅಯ್ಯರ್, ಬೆನ್ ಕಟಿಂಗ್, ಹರ್ಭಜನ್ ಸಿಂಗ್, ಕರುಣ್ ನಾಯರ್, ವೈಭವ್ ಅರೋರಾ, ಶೆಲ್ಡನ್ ಜಾಕ್ಸನ್, ಶಕೀಬ್ ಅಲ್ ಹಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications