Jasprit Bumrah: ಇಂಗ್ಲೆಂಡ್ ವಿರುದ್ಧದ 1 ವಿಕೆಟ್ ಪಡೆಯುತ್ತಲೇ ವಿಶೇಷ ಕ್ಲಬ್‌ಗೆ ಬುಮ್ರಾ ಎಂಟ್ರಿ
ಟೀಮ್ ಇಂಡಿಯಾದ ಸದ್ಯ ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರದರ್ಶನ ನೀಡುತ್ತಿದೆ. ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಂಬೈನ ವಾಂಖೆಡೆ ಅಂಗಳದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಭಾರತ ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮೇಲೆ ನೆಟ್ಟಿರಲಿವೆ. ಇವರು ಈ ಪಂದ್ಯದಲ್ಲಿ 1 ವಿಕೆಟ್ ಪಡೆಯುತ್ತಲೇ ದೊಡ್ಡ ದಾಖಲೆಯನ್ನು ಬರೆಯುವ ಕನಸು ಹೊಂದಿದ್ದಾರೆ. ಬುಮ್ರಾ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುತ್ತಲೇ ದೊಡ್ಡ ದಾಖಲೆ ಬರೆಯಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಎಂಟನೇ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಆ ದಾಖಲೆ ಯಾವುದು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಟೀಮ್ ಇಂಡಿಯಾದ ಭರವಸೆಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇವರು ತಂಡದ್ದಲ್ಲಿದ್ದಾಗ ವಿಕೆಟ್‌ಗಳ ಅವಶ್ಯಕತೆ ಇದ್ದಾಗ ನಾಯಕ ಇವರ ಕೈಯಲ್ಲಿ ಚೆಂಡನ್ನು ನೀಡಿದರೆ ಸಾಕು, ತಮ್ಮ ಬೌಲಿಂಗ್ ಕ್ಷಮತೆಯನ್ನು ಪ್ರದರ್ಶಿಸಲು ಇವರು ಯಾವಾಗಲೂ ಸೈ. ಜಸ್ಪ್ರೀತ್ ಬುಮ್ರಾ ತಮ್ಮ ವಿಭಿನ್ನ ಶೈಲಿಯ ಬೌಲಿಂಗ್‌ನಿಂದ ಹೆಸರುವಾಸಿ. ಇವರು ಸ್ಲೋವರ್ ಒನ್, ಯಾರ್ಕರ್, ಇನ್ ಸ್ವಿಂಗ್ ಹಾಗೂ ಔಟ್ ಸ್ವಿಂಗ್ ಗಳನ್ನು ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದಾರೆ. ಅಲ್ಲದೆ ಇವರು ಪರ್ಫೆಕ್ಟ್ ಲೈನ್ ಹಾಗೂ ಲೆಂಥ್‌ನಲ್ಲಿ ಬೌಲಿಂಗ್ ಮಾಡುವ ಬೌಲರ್ ಹೀಗಾಗಿ ಇವರ ಚೆಂಡುಗಳನ್ನು ಎದುರಿಸಲು ಬ್ಯಾಟರ್‌ಗಳು ಕಷ್ಟ ಪಡುತ್ತಾರೆ.

32 ವರ್ಷದ ಜಸ್ಪ್ರೀತ್ ಬುಮ್ರಾ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಇವರು ಈಗಾಗಲೇ ಭಾರತದ ಪರ 52 ಟೆಸ್ಟ್, 89 ಏಕದಿನ ಪಂದ್ಯ, 93 ಟಿ20 ಪಂದ್ಯಗಳನ್ನು ಆಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ಪಂದ್ಯಗಳಲ್ಲಿ ಇವರು ಒಟ್ಟು 499 ವಿಕೆಟ್ ಕಬಳಿಸಿದ್ದಾರೆ.
ಇಂಗ್ಲೆಂಡ್ ವಿರದ್ಧದ ಪಂದ್ಯದಲ್ಲಿ ಇನ್ನು ಒಂದು ವಿಕೆಟ್ ಪಡೆಯುವಲ್ಲಿ ಬುಮ್ರಾ ಸಫಲರಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ಏಳನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ಕುಂಬ್ಳೆಗೆ ಅಗ್ರಸ್ಥಾನ
ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿದ ಕೀರ್ತಿ ಅನಿಲ್ ಕುಂಬ್ಳೆ ಅವರದ್ದಾಗಿದೆ. ಇವರು ಆಡಿದ 401 ಪಂದ್ಯಗಳ 499 ಇನಿಂಗ್ಸ್‌ಗಳಲ್ಲಿ 953 ವಿಕೆಟ್ ಪಡೆದಿದ್ದಾರೆ.
ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಸಾಧಕರು
ಅನಿಲ್ ಕುಂಬ್ಳೆ, 953 ವಿಕೆಟ್
ಆರ್.ಅಶ್ವಿನ್, 765 ವಿಕೆಟ್
ಹರ್ಭಜನ್ ಸಿಂಗ್, 707 ವಿಕೆಟ್
ಕಪಿಲ್ ದೇವ್, 687 ವಿಕೆಟ್
ರವೀಂದ್ರ ಜಡೇಜಾ, 634 ವಿಕೆಟ್
ಜಹೀರ್ ಖಾನ್, 597 ವಿಕೆಟ್
ಜಾವಗಲ್ ಶ್ರೀನಾಥ್, 551 ವಿಕೆಟ್
ಜಸ್ಪ್ರೀತ್ ಬುಮ್ರಾ, 499 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications