IPL Mega Auction 2025: ಎರಡನೇ ದಿನ ಮೆಗಾ ಹರಾಜಿನಲ್ಲಿ ಲಾಟರಿ ಹೊಡೆದ ಭಾರತೀಯ ಬೌಲರ್‌ಗಳು
ಐಪಿಎಲ್ 2025ರ ಮೆಗಾ ಹರಾಜಿನ ಎರಡನೇ ದಿನ ಭಾರತೀಯ ಬೌಲರ್‌ಗಳ ಮೇಲೆ ಫ್ರಾಂಚೈಸಿಗಳು ದೊಡ್ಡ ಮಟ್ಟದಲ್ಲಿ ಬಾಜಿ ಕಟ್ಟಿವೆ. ಸೋಮವಾರ ಎರಡನೇ ದಿನ, ಎಲ್ಲಾ 10 ಫ್ರಾಂಚೈಸಿಗಳು ವಿದೇಶಿ ಬೌಲರ್‌ಗಳಿಗಿಂತ ಭಾರತದ ಸ್ಟಾರ್ ಬೌಲರ್‌ಗಳನ್ನು ಬಿಡ್ ಮಾಡಲು ಪೈಪೋಟಿ ನಡೆಸಿದವು. ಅದರಂತೆ ಹೆಚ್ಚಿನ ಬೆಲೆಗೆ ಭಾರತೋಯ ಬೌಲರ್‌ಗಳನ್ನು ಬಿಡ್ ಮಾಡಿದವು. ಈ ಮೆಗಾ ಹರಾಜಿನಲ್ಲಿ ಭಾರತದ ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ದೀಪಕ್ ಚಹಾರ್ ಲಾಟರಿ ಹೊಡೆದರು.
ಐಪಿಎಲ್ ಫ್ರಾಂಚೈಸಿಗಳು ಭುವನೇಶ್ವರ್ ಕುಮಾರ್ ಮತ್ತು ದೀಪಕ್ ಚಹಾರ್ ಅವರನ್ನು ದುಬಾರಿ ಬೆಲೆ ಬಿಡ್ ಮಾಡಿದವು. ಭುವನೇಶ್ವರ್ ಕುಮಾರ್ ಮೆಗಾ ಹರಾಜಿನ ಎರಡನೇ ದಿನದಂದು ಭಾರೀ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೇರಿದರು.

ಭುವಿ ಹಲವು ವರ್ಷಗಳಿಂದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಪರ ಆಡುತ್ತಿದ್ದರು. ಆದರೆ ಈ ಬಾರಿ ಅವರನ್ನು ಎಸ್‌ಆರ್‌ಎಚ್ ಬಿಡುಗಡೆ ಮಾಡಿತ್ತು. ಇದೀಗ ಆರ್‌ಸಿಬಿ ಭುವಿ ಅವರನ್ನು ಮೆಗಾ ಹರಾಜಿನಲ್ಲಿ 10.75 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಭುವಿ ಎರಡನೇ ದಿನದಂದು ಮೆಗಾ ಹರಾಜಿನಲ್ಲಿ ಬಿಡ್ ಆದ ಅತ್ಯಂತ ದುಬಾರಿ ಭಾರತೀಯ ಬೌಲರ್‌ಗಳಲ್ಲಿ ಒಬ್ಬರಾದರು.
ದೀಪಕ್ ಚಹಾರ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಕೆಲವು ಆವೃತ್ತಿಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ಮೆಗಾ ಹರಾಜಿನಲ್ಲಿ ಅವರಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದೆ. ದೀಪಕ್ ಚಹಾರ್‌ಗೆ ಮುಂಬೈ ಇಂಡಿಯನ್ಸ್ 9.25 ಕೋಟಿ ರೂ. ನೀಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಭಾರತ ತಂಡದ ಬಲಗೈ ವೇಗದ ಬೌಲರ್ ಮುಖೇಶ್ ಕುಮಾರ್ ಅವರನ್ನು ಹೆಚ್ಚು ಮೊತ್ತಕ್ಕೆ ಖರೀದಿ ಮಾಡಿದೆ. ಡೆಲ್ಲಿ ಮುಖೇಶ್‌ಗೆ ರೈಡ್ ಟು ಮ್ಯಾಚ್ ಕಾರ್ಡ್ ಬಳಸಿ 8 ಕೋಟಿ ರೂ.ಗೆ ಬಿಡ್ ಮಾಡಿದೆ. ಮತ್ತೊಂದೆಡೆ ಇತ್ತೀಚೆಗಷ್ಟೇ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದ ಆಕಾಶ್ ದೀಪ್ 8 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ್ದಾರೆ. ಆರ್‌ಸಿಬಿ ಕೂಡ ಆಕಾಶ್‌ಗಾಗಿ ಬಿಡ್ ಮಾಡಿತ್ತು. ಆದರೆ ಅಂತಿಮವಾಗಿ ಲಕ್ನೋ ತಂಡಕ್ಕೆ ಸೇರಿಕೊಂಡರು.
ಟೀಂ ಇಂಡಿಯಾಗೆ ಚೊಚ್ಚಲ ಟಿ20 ಪಂದ್ಯವನ್ನಾಡಿರುವ ತುಷಾರ್ ದೇಶಪಾಂಡೆ ಚೆನ್ನೈ ಸೂಪರ್ ಕಿಂಗ್ಸ್ ಪರ ಕಳೆದ ಐಪಿಎಲ್ ಆವತ್ತಿಯಲ್ಲಿ ಭಾರೀ ಸದ್ದು ಮಾಡಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಅವರನ್ನು ರಾಜಸ್ಥಾನ ರಾಯಲ್ಸ್ 6.50 ಕೋಟಿ ರೂ. ಬಿಡ್ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications