Rohit Sharma: ಇನ್ನೇರಡು ಶತಕ ಬಾರಿಸಿದರೆ ದಾಖಲೆ ಪುಟ ಸೇರುವ ರೋಹಿತ್ ಶರ್ಮಾ
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರಿಂದ, 2007 ಟಿ20 ವಿಶ್ವಕಪ್ ಆಡಲು ಅವಕಾಶ ಪಡೆದಿದ್ದರು. ಆದರೆ 2011ರ ವಿಶ್ವಕಪ್‌ನಲ್ಲಿ ತಂಡ ಸೇರುವ ಕನಸು ನನಸಾಗಿರಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ರೋಹಿತ್ ತಮ್ಮ ಬ್ಯಾಟಿಂಗ್ ಮೇಲೆ ಸತತ ವರ್ಕ್ ಮಾಡಿದರು. ಪರಿಣಾಮ ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು.
2013ರ ಚಾಂಪಿಯನ್ಸ್ ಟ್ರೋಫಿಯ ವೇಳೆಗೆ ರೋಹಿತ್ ಅವರಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಗುರುತಿಸಿದ್ದ ಆಗಿನ ನಾಯಕ ಮಹೇಂದ್ರ ಸಿಂಗ್ ಧೋನಿ, ಅವರಿಗೆ ಓಪನ್ ಮಾಡಲು ಸೂಚಿಸಿದರು. ಎಸ್.. ಅಂದು ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯನ್ನು ಹೊತ್ತ ರೋಹಿತ್ ಹಿಂತಿರುಗಿ ನೋಡಲೇ ಇಲ್ಲ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಬಿಗ್ ಇನಿಂಗ್ಸ್ ಕಟ್ಟುತ್ತಾ ಸಾಗಿದರು. ಪರಿಣಾಮ ಅಭಿಮಾನಿಗಳ ಸಂಖ್ಯೆಯಲ್ಲೂ ಏರಿಕೆ ಆಯಿತು.

ವೇಗದ ರನ್‌ಗಳ ಸರದಾರ
ರೋಹಿತ್ ಶರ್ಮಾ ಅವರ ಆಟವನ್ನು ಕಂಡು ಅಭಿಮಾನಿಗಳು ಅವರನ್ನು ಹಿಟ್ ಮ್ಯಾನ್ ಎಂದೇ ಕರೆಯುತ್ತಾರೆ. ರೋಹಿತ್ ರನ್‌ಗಳನ್ನು ವೇಗವಾಗಿ ಕಲೆ ಹಾಕುವ ಲೆಕ್ಕಾಚಾರದಲ್ಲಿ ಎಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದಾರೆ. ರೋಹಿತ್ ಒಮ್ಮೆ ಕ್ರೀಸ್‌ಗೆ ಕಚ್ಚಿ ನಿಂತು ಬಿಟ್ಟರೆ ಮುಗೀತು ಬಿಗ್ ಇನಿಂಗ್ಸ್ ಫಿಕ್ಸ್. ಇವರ ಬಾರಿಸುವ ಪುಲ್ ಶಾಟ್‌ಗಳನ್ನು ನೋಡಲೇ ಅಭಿಮಾನಿಗಳು ಮೈದಾನಕ್ಕೆ ಆಗಮಿಸುತ್ತಾರೆ.
ದಾಖಲೆಯ ಸನಿಹದಲ್ಲಿ ರೋಹಿತ್
ಟೀಮ್ ಇಂಡಿಯಾದ ಪರ ಸ್ಪೋಟಕ ಇನಿಂಗ್ಸ್ ಆರಂಭಿಸುವ ಕೀರ್ತಿ ವೀರೇಂದ್ರ ಸೆಹ್ವಾಗ್ ಅವರಿಗೆ ಸಲ್ಲುತ್ತದೆ. ಈ ಒಂದು ದಶಕದಲ್ಲಿ ರೋಹಿತ್ ಈ ಸ್ಥಾನವನ್ನು ತುಂಬಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಿಂದಲೇ ಸೆಟ್ ಆಗಿ ಬರುತ್ತಿದ್ದ ರೋಹಿತ್, ಕ್ರೀಸ್‌ಗೆ ಬರುತ್ತಿದ್ದಂತೆ ಬಿಗ್ ಇನಿಂಗ್ಸ್ ಕಟ್ಟುತ್ತಿದ್ದರು. ವೇಗವಾಗಿ ರನ್ ಕಲೆ ಹಾಕುವುದು, ಮೂರಂಕಿ ಮುಟ್ಟುವುದು ರೋಹಿತ್‌ಗೆ ತುಂಬ ಸುಲಭ.. ಮುಂಬರುವ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲೂ ಇದೇ ರೀತಿ ಬ್ಯಾಟ್ ಮಾಡಿದರೆ ದಾಖಲೆಯನ್ನು ನಿರ್ಮಿಸಬಹುದು.

ರೋಹಿತ್ ಶರ್ಮಾ ಬಾರಿಸಿದ ಶತಕ ಎಷ್ಟು?
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ರೋಹಿತ್ ಎರಡು ಶತಕಗಳನ್ನು ಪೂರೈಸಿದರೆ, ಅಂತಾರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಪೂರ್ಣಗೊಳಿಸುತ್ತಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ವಿಶ್ವದಲ್ಲೇ ಅತಿ ಹೆಚ್ಚು ಶತಕಗಳನ್ನು ಬಾರಿಸಿರುವ ಕೀರ್ತಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿದ್ದು, ಇವರು 100 ಶತಕಗಳನ್ನು ಬಾರಿಸಿದ್ದಾರೆ. ಭಾರತದ ಪರ ಗರಿಷ್ಠ ಶತಕ ಬಾರಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, ಇವರು 80 ಶತಕ ಬಾರಿಸಿದ್ದಾರೆ.
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 48 ಶತಕಗಳನ್ನು ಬಾರಿಸಿ, ರಾಹುಲ್ ದ್ರಾವಿಡ್ ಜೊತೆಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ರೋಹಿತ್ ಎರಡು ಶತಕಗಳನ್ನು ಬಾರಿಸಿದರೆ, ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications