ಕ್ರೀಡಾಭ್ಯಾಸ ಶುರು ಮಾಡಿದ ಭಾರತದ ನಾಯಕ ವಿರಾಟ್ ಕೊಹ್ಲಿ: ವೀಡಿಯೋ

ನವದೆಹಲಿ, ಮೇ 16: ಭಾರತದಲ್ಲಿ ಸುಮಾರು 50 ದಿನಗಳಿಂದಲೂ ಲಾಕ್ ಡೌನ್ ಜಾರಿಯಲ್ಲಿದೆ. ಸದ್ಯ ನಿಷೇಧ ಕೊಂಚ ಸಡಿಲವಾಗಿರುವುದರಿಂದ ಕ್ರೀಡಾ ಚಟುವಟಿಕೆಗಳೂ ಚಾಲನೆಗೊಳ್ಳುವುದರಲ್ಲಿವೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ಕ್ರೀಡಾಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಹುರುಪು ತುಂಬಿದ್ದಾರೆ.
ಬಿಸಿಸಿಐಯು ಆಟಗಾರರಿಗೆ ನಿಯಂತ್ರಿತ ವಾತಾವರಣದಲ್ಲಿ ಕ್ರೀಡಾಭ್ಯಾಸ ನಡೆಸಲು ಅನುವು ಮಾಡಿಕೊಡುವತ್ತ ಎದುರು ನೋಡುತ್ತಿದೆ. ಈ ಮಧ್ಯೆ ವಿರಾಟ್ ಕೊಹ್ಲಿ ಶುಕ್ರವಾರ (ಮೇ 15) ತನ್ನ ಸೊಸೈಟಿ ಕಟ್ಟಡದ ಸಮೀಪ ಓಡುವ ಅಭ್ಯಾಸ ನಡೆಸಿದ್ದಾರೆ. ತಾನು ಕ್ರೀಡಾಭ್ಯಾಸ ನಡೆಸುತ್ತಿರುವ ವೀಡಿಯೋವನ್ನು ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕೊಹ್ಲಿ ಅಭ್ಯಾಸಲ್ಲಿ ತೊಡಗಿರುವ ವೀಡಿಯೋಗೆ ಈಗಾಗಲೇ ಸುಮಾರು 16 ಲಕ್ಷಕ್ಕೂ ಹೆಚ್ಚು ವ್ಯೂವ್ಸ್, 8000ಕ್ಕೂ ಕಾಮೆಂಟ್‌ಗಳು ಬಂದಿವೆ. ಅನಿವಾರ್ಯ ಸುದೀರ್ಘ ಬಿಡುವಿನ ಬಳಿಕ ಕ್ರಿಕೆಟ್ ಅಂಗಳಕ್ಕೆ ಮರಳಲು ತಯಾರಿ ನಡೆಸುತ್ತಿರುವ ಕಿಂಗ್ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ತಾನು ಹಂಚಿಕೊಂಡಿರುವ ವೀಡಿಯೋದಲ್ಲಿ ಕೊಹ್ಲಿ, 'ಕೆಲಸದಲ್ಲಿ ತೊಡಗಿಕೊಳ್ಳೋದು ಬದುಕಿನ ರೀತಿ, ಅದಕ್ಕೆ ವೃತ್ತಿಪರತೆ ಬೇಕಿಲ್ಲ. ಆಯ್ಕೆ ನಿಮ್ಮದು' ಎಂದು ಸ್ಫೂರ್ತಿಯ ಸಾಲೊಂದನ್ನು ಬರೆದುಕೊಂಡಿದ್ದಾರೆ. ಭಾರತದ ಆಟಗಾರರಾದ ಮೊಹಮ್ಮದ್ ಶಮಿ, ಕೆಎಲ್ ರಾಹುಲ್ ಸೇರಿದಂತೆ ಇನ್ನಿತರರು ಕೂಡ ಆಗೀಗ ತಮ್ಮ ಫಿಟ್ನೆಸ್ ಅಭ್ಯಾಸದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications