ಕ್ರಿಕೆಟ್ ವಿವಾದ: ರಾಹುಲ್ ದ್ರಾವಿಡ್ ಬಗ್ಗೆ ಗಂಗೂಲಿ ಲೂಸ್ ಟಾಕ್!

ಕ್ರಿಕೆಟ್ ಎನ್ನುವುದು ನಮ್ಮ ದೇಶದಲ್ಲಿ ಬರೀ ಕ್ರೀಡೆಯಾಗಿ ಉಳಿದಿಲ್ಲ, ಇದನ್ನೂ ಮೀರಿ ನಿಂತಿರುವುದು ಎನ್ನುವುದು ಗೊತ್ತಿರುವ ವಿಚಾರ. ಆ ಕಾರಣಕ್ಕಾಗಿಯೇ, ಪಂದ್ಯ ಗೆಲ್ಲಿಸಿ ಕೊಡುವವರು ಹೀರೋಗಳಾಗುತ್ತಾರೆ, ಪಂದ್ಯ ಸೋಲಲು ಕಾರಣರಾದವರು ಇಲ್ಲಿ ವಿಲನ್ ಗಳಾಗುತ್ತಾರೆ.
ಕ್ರಿಕೆಟ್ ಎಷ್ಟು ಜನಪ್ರಿಯ ಕ್ರೀಡೆಯೋ ಅದೇ ರೀತಿ ವಿವಾದ ಕೂಡಾ ಸುತ್ತುವರಿದುಕೊಂಡು ಇರುತ್ತಲೇ ಇರುತ್ತದೆ. ಒಂದಲ್ಲಾ ಒಂದು ಕಾರಣಕ್ಕಾಗಿ ಆಟಗಾರರು ಮತ್ತು ಕ್ರಿಕೆಟ್ ಮಂಡಳಿ ಸುದ್ದಿಯಲ್ಲಿರುತ್ತದೆ. ಲೈಮ್ ಲೈಟಿನಲ್ಲಿ ಇರಬೇಕು ಎನ್ನುವ ಕಾರಣಕ್ಕಾಗಿಯೇ ಸುಖಾಸುಮ್ಮನೆ ವಿವಾದವನ್ನು ಹುಟ್ಟು ಹಾಕುವವರಿಗೂ ಇಲ್ಲಿ ಬರವಿಲ್ಲ.
ಭಾರತೀಯ ಕ್ರಿಕೆಟ್ ಕಂಡ ಎರಡು ಸರ್ವಶ್ರೇಷ್ಟ ಆಟಗಾರರಾದ ಹಿಂದಿನ ಬಿಸಿಸಿಐ ಅಧ್ಯಕ್ಷ, ಮಾಜಿ ನಾಯಕ ಮತ್ತು ಎಡಗೈ ಬ್ಯಾಟ್ಸಮ್ಯಾನ್ ಸೌರವ್ ಗಂಗೂಲಿ ಮತ್ತು ಹಾಲೀ ಭಾರತೀಯ ತಂಡದ ಕೋಚ್, ಮಾಜಿ ನಾಯಕ ರಾಹುಲ್ ದ್ರಾವಿಡ್ ನಡುವೆ ನಾಯಕತ್ವ ನಿಭಾಯಿಸುವ ವಿಚಾರದಲ್ಲಿ ವಿವಾದ ಉಂಟಾಗಿತ್ತು.
ಮಾಜಿ ನಾಯಕ ಸೌರವ್ ಗಂಗೂಲಿ ರಿಟೈರ್ಡ್ ಆಗುವ ಮುನ್ನ ಮತ್ತು ನಂತರವೂ ಸದಾ ಸುದ್ದಿಯಲ್ಲಿರುವವರು, ಆದರೆ, ರಾಹುಲ್ ದ್ರಾವಿಡ್ ವಿಚಾರದಲ್ಲಿ ಹಾಗಲ್ಲ. ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾದಾಗ ಗಂಗೂಲಿ ನೀಡಿದ್ದ ಹೇಳಿಕೆ ಭಾರೀ ವಿವಾದವನ್ನು ಹುಟ್ಟು ಹಾಕಿತ್ತು.

ದೈಹಿಕವಾಗಿ, ಮಾನಸಿಕವಾಗಿ ಗಂಗೂಲಿ ನಾಯಕನಾಗಲು ನಾಲಾಯಕ್ ಎಂದಿದ್ದ ಚಾಪೆಲ್
2005ರಲ್ಲಿ ಭಾರತೀಯ ತಂಡದ ಕೋಚ್ ಆಗಿದ್ದ ಜಾನ್ ರೈಟ್ ತಮ್ಮ ಅವಧಿಯನ್ನು ವಿಸ್ತರಿಸಿಕೊಳ್ಳಲು ನಿರಾಕರಿಸಿದ್ದರು. ಹೊಸ ಕೋಚಿನ ಹುಡುಕಾಟದಲ್ಲಿದ್ದ ಬಿಸಿಸಿಐಗೆ ಆಸ್ಟ್ರೇಲಿಯಾ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅವರ ಹೆಸರನ್ನು ಸೌರವ್ ಗಂಗೂಲಿ ಶಿಫಾರಸು ಮಾಡಿದ್ದರು, ಆ ವೇಳೆ ಗಂಗೂಲಿ ತಂಡದ ನಾಯಕರಾಗಿದ್ದರು. ಚಾಪೆಲ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿದ ನಂತರ ಅವರ ಕಾರ್ಯಶೈಲಿ ಮತ್ತು ಗಂಗೂಲಿ ನಡುವೆ ಹೊಂದಾಣಿಕೆ ಆಗುತ್ತಿರಲಿಲ್ಲ. ಬಿಸಿಸಿಐಗೆ ಬರೆದಿದ್ದ ಈಮೇಲ್ ಸೋರಿಕೆಯಾಗಿತ್ತು, "ದೈಹಿಕವಾಗಿ ಮತ್ತು ಮಾನಸಿಕವಾಗಿ ಗಂಗೂಲಿ ನಾಯಕನಾಗಲು ನಾಲಾಯಕ್' ಎಂದು ಚಾಪೆಲ್, ಈಮೇಲ್ ನಲ್ಲಿ ಬರೆದಿದ್ದರು.
ತಂಡ ಸೇರಿಕೊಂಡ ಯುವ ವೇಗಿ, ಶಿಖರ್ ಧವನ್‌ಗೆ ರಾಹುಲ್ ದ್ರಾವಿಡ್ ಸ್ಪೆಷಲ್ ಕ್ಲಾಸ್

2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಆಡಲಾದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ
ಇದಾದ ನಂತರ ದಾದಾ ಎಂದೇ ಕರೆಯಲ್ಪಡುತ್ತಿದ್ದ ಗಂಗೂಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ರಾಹುಲ್ ದ್ರಾವಿಡ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಜೊತೆಗೆ, ಏಕದಿನ ಪಂದ್ಯದಿಂದ ಕೈಬಿಡಲಾಗಿತ್ತು. 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಆಡಲಾದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಹೀನಾಯ ಸಾಧನೆಯನ್ನು ಮಾಡಿತ್ತು. ಆ ವೇಳೆ ಗಂಗೂಲಿ ತಂಡದಲ್ಲಿದ್ದರು ಮತ್ತು ದ್ರಾವಿಡ್ ನಾಯಕರಾಗಿದ್ದರು.

ದ್ರಾವಿಡ್ ಬಗ್ಗೆ ಅಂದು ಗಂಗೂಲಿ ಮಾಡಿದ್ದ ಲೂಸ್ ಟಾಕ್!
2007ರ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಭಾರತ ಕ್ವಾಲಿಫೈ ಹಂತಕ್ಕೂ ತಲಪದೇ ತೀವ್ರ ಮುಖಭಂಗಕ್ಕೆ ಗುರಿಯಾಗಿತ್ತು. ಈ ವಿಚಾರದ ಬಗ್ಗೆ 2011ರಲ್ಲಿ ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ಸೌರವ್ ಗಂಗೂಲಿ, ನಾಯಕರಾಗಿದ್ದ ರಾಹುಲ್ ದ್ರಾವಿಡ್ ಬಗ್ಗೆ ವಿವಾದಕಾರಿ ಹೇಳಿಕೆಯನ್ನು ನೀಡಿದ್ದರು. "ರಾಹುಲ್ ದ್ರಾವಿಡ್ ಯಾವ ರೀತಿಯ ಕ್ರಿಕೆಟಿಗ ಎಂದರೆ, ಎಲ್ಲವೂ ತೊಂದರೆಯಿಲ್ಲದೇ ಸಾಗಬೇಕೆಂದು ಬಯಸುತ್ತಾರೆ. ಪಂದ್ಯ ಕೈಚೆಲ್ಲಿ ಹೋಗುತ್ತಿದೆ ಎಂದು ಗೊತ್ತಿದ್ದರೂ, ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಚಾಪೆಲ್ ಅವರು ತಪ್ಪು ಮಾಡುತ್ತಿದ್ದರೂ ಅದನ್ನು ಪ್ರಶ್ನಿಸುವ ಧೈರ್ಯ ದ್ರಾವಿಡ್ ಅವರಿಗೆ ಇರಲಿರಲಿಲ್ಲ"ಎಂದು ಹೇಳಿದ್ದರು.

ಸೌರವ್ ಬಹಳ ವರ್ಷದವರೆಗೆ ರಾಷ್ಟ್ರೀಯ ತಂಡಕ್ಕೆ ಆಡಿದ್ದಾರೆ
"ಗಂಗೂಲಿ ಅವರು ನನಗೆ ಚಾಪೆಲ್ ಅವರನ್ನು ಎದುರಿಸುವ ಧೈರ್ಯವಿಲ್ಲ ಎಂದು ಹೇಳಿದ್ದರೆ ಅದು ಅವರ ಅಭಿಪ್ರಾಯ. ಸೌರವ್ ಬಹಳ ವರ್ಷದವರೆಗೆ ರಾಷ್ಟ್ರೀಯ ತಂಡಕ್ಕೆ ಆಡಿದ್ದಾರೆ. ಆದರೆ ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಅವರು ತಿಳಿದಿದ್ದರೆ ಅದು ತಪ್ಪಾಗುತ್ತದೆ"ಎಂದು ದ್ರಾವಿಡ್ ಗೌರವಾನ್ವಿತವಾಗಿ ಹೇಳಿಕೆಯನ್ನು ನೀಡಿದ್ದರು. ದ್ರಾವಿಡ್ ಬಗ್ಗೆ ಸೌರವ್ ಗಂಗೂಲಿ ಆಡಿದ್ದ ಮಾತು ದ್ರಾವಿಡ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications