Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಹೋಟೆಲ್ ಬಿಲ್ ಪಾವತಿಸಿದ ಅಭಿಮಾನಿ

Indian cricket fan Navdeep Singh paid the hotel bill of Indian cricketers in Australia

ಸಿಡ್ನಿ: ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾದ ಹೋಟೆಲ್ ಬಿಲ್ ಪಾವತಿಸಿ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಅಲ್ಲಿ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20ಐ ಸರಣಿ ಮುಗಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರನೇ ಪಂದ್ಯ ಜನವರಿ 7ರಂದು ಆರಂಭವಾಗಲಿದೆ.

ಆಸ್ಟ್ರೇಲಿಯಾದಲ್ಲೇ ಇದ್ದ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ರಿಷಭ್ ಪಂತ್, ಶುಬ್ಮನ್ ಗಿಲ್, ರೋಹಿತ್ ಶರ್ಮಾ, ನವದೀಪ್ ಸೈನಿ ಮತ್ತು ಪೃಥ್ವಿ ಶಾ ಅವರಿದ್ದ ಭಾರತ ತಂಡದ ಹೋಟೆಲ್ ಬಿಲ್ (ಆಸ್ಟ್ರೇಲಿಯಾನ್ ಡಾಲರ್ 118, 6,628.22 ರೂ.) ಪಾವತಿಸಿದ್ದಾರೆ. ಅದರ ಟ್ವೀಟ್‌ಗಳು ವೈರಲ್ ಆಗಿವೆ.

ಟೀಮ್ ಇಂಡಿಯಾ ಆಟಗಾರರ ಬಿಲ್ ಪಾವತಿಸಿದವರ ಹೆಸರು ನವದೀಪ್ ಸಿಂಗ್. ಅವರೂ ಕೂಡ ಆಸ್ಟ್ರೇಲಿಯಾ ಹೋಟೆಲ್‌ನಲ್ಲಿದ್ದಾಗ ಅಚಾನಕ್ ಅದೇ ಹೋಟೆಲ್‌ನಲ್ಲಿ ಭಾರತೀಯ ಆಟಗಾರರೂ ಇದ್ದರು. ಹೀಗಾಗಿ ಖುಷಿಗೊಂಡ ನವದೀಪ್, ಭಾರತೀಯ ಆಟಗಾರರಿಗೆ ಗೊತ್ತಾಗದಂತೆಯೇ ಅವರ ಬಿಲ್ ಪಾವತಿಸಿ ತಂಡದ ಮೇಲಿದ್ದ ಪ್ರೀತಿ ತೋರಿಕೊಂಡಿದ್ದಾರೆ.

ನವದೀಪ್ ಅವರ ಮೊದಲ ಟ್ವೀಟ್‌ನಲ್ಲಿ, 'ನನ್ನ ಪಕ್ಕದಲ್ಲೇ ಗಿಲ್, ಪಂತ್, ಶರ್ಮಾ, ಸೈನಿ ಇದ್ದಾರೆ' ಎಂದು ಬರೆದುಕೊಂಡಿದ್ದರು. ಮುಂದಿನ ಟ್ವೀಟ್‌ನಲ್ಲಿ ತಿನಿಸಿನ ಫೋಟೋ ಹಂಚಿಕೊಂಡಿದ್ದರು. ಕೊನೇ ಟ್ವೀಟ್‌ನಲ್ಲಿ, ರೋಹಿತ್ ಅವರು ಹಣ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದನ್ನು ಮತ್ತು ರಿಷಭ್ ಪಂತ್ ಅವರು ಊಟ ಕೊಡಿಸಿದ್ದಕ್ಕಾಗಿ ಪತ್ನಿಗೆ ಥ್ಯಾಂಕ್ಸ್ ಹೇಳಿದ್ದಾಗಿ ನವದೀಪ್ ಬರೆದುಕೊಂಡಿದ್ದಾರೆ.

Story first published: Saturday, January 2, 2021, 11:44 [IST]
Other articles published on Jan 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+