Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀ ಇಂಡಿಯಾ ಕೋಚ್ ಹುದ್ದೆ: ಆರು ಮಂದಿ ಹೆಸರು ಅಂತಿಮ ಸುತ್ತಿಗೆ

Indian Cricket Head Coach: Six Names for Final Round

ಮುಂಬೈ, ಆಗಸ್ಟ್ 13: ಕ್ರಿಕೆಟ್ ಟೀಂ ಇಂಡಿಯಾ ಕೋಚ್ ಹುದ್ದೆ ಆಯ್ಕೆ ಆರು ಮಂದಿಯ ಹೆಸರು ಅಂತಿಮಗೊಳಿಸಲಾಗಿದ್ದು, ಆರರಲ್ಲಿ ಮೂರು ಮಂದಿ ಭಾರತೀಯರು ಇದ್ದಾರೆ.

ಕಪಿಲ್ ದೇವ್ ನೇತೃತ್ವದ ಸಿಎಸಿ (ಕ್ರಿಕೆಟ್ ಸಲಹಾ ಸಮಿತಿ)ಯು ಈ ಆರು ಮಂದಿಯ ಸಂದರ್ಶನ ನಡೆಸಲಿದ್ದು, ಸಂದರ್ಶನದ ನಂತರ ಭಾರತ ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಆಗಲಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕೋಚ್ ಮೈಕ್ ಹೆಸನ್, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕೋಚ್, ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ, ಅಫ್ಘನಿಸ್ತಾನ ತಂಡದ ಕೋಚ್ ಫಿಲ್ ಸಿಮೊನ್ಸ್‌ ಅವರುಗಳು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅಂತಿಮ ಹಂತಕ್ಕೆ ತಲುಪಿರುವ ವಿದೇಶಿ ಕೋಚ್‌ಗಳಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್, ಭಾರತ ಕ್ರಿಕೆಟ್ ತಂಡದ ಮಾಜಿ ಮ್ಯಾನೆಜರ್ ಲಾಲ್‌ಚಂದ ರಜಪೂತ್ ಮತ್ತು ರವಿಶಾಸ್ತ್ರಿ ಅವರು ಸಹ ಅಂತಿಮ ಸುತ್ತಿನಲ್ಲಿದ್ದಾರೆ.

ಕಪಿಲ್ ದೇವ್, ಅಂಶುಮನ್ ಗಾಯಕ್‌ವಾಡ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರು ಕೋಚ್ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.

ಮೈಕ್ ಹೆಸನ್ ಮತ್ತು ಟಾಮ್ ಮೂಡಿ ಅವರುಗಳ ಹೆಸರುಗಳು ಸದ್ಯಕ್ಕೆ ಮುನ್ನೆಲೆಯಲ್ಲಿದ್ದು, ಆದರೆ ನಾಯಕ ವಿರಾಟ್ ಕೊಹ್ಲಿ ಅವರ ಒಲವು ರವಿಶಾಸ್ತ್ರಿ ಅವರ ಪರವಾಗಿದೆ.

Story first published: Tuesday, August 13, 2019, 15:08 [IST]
Other articles published on Aug 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+