ಕೊಹ್ಲಿ ಹಾಗೂ ರಹಾನೆ ನಾಯಕತ್ವದ ವ್ಯತ್ಯಾಸ ಹೇಳಿದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಶೇನ್ ಲೀ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಬ್ಬರು ಆಟಗಾರರು ನಾಯಕನಾಗಿ ಮುನ್ನಡೆಸುವ ರೀತಿಯ ಬಗ್ಗೆ ಶೇನ್ ಲೀ ಮಾತನಾಡಿದ್ದು ಕೊಹ್ಲಿಗಿಂತ ರಹಾನೆ ಉತ್ತಮ ನಾಯಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಟಗಾರರು ಗೆರೆ ದಾಟಲು ಭಯಪಡುತ್ತಾರೆ. ಭಾರತೀಯ ತಂಡದಿಂದ ಅವರು ಸಂಪೂರ್ಣವಾದ ವೃತ್ತಿಪರತೆಯನ್ನು ಅವರು ಬಯಸುತ್ತಾರೆ. ಆಟಗಾರರು ಸಂಪೂರ್ಣ ಫಿಟ್ ಆಗಿರಬೇಕು, ಅಂಗಳದಲ್ಲಿ ಶ್ರೇಷ್ಠ ಆಟವನ್ನು ಪ್ರದರ್ಶಿಸಬೇಕು, ಉತ್ತಮ ಕ್ಯಾಚ್ ಪಡೆಯಬೇಕು, ಆದರೆ ಆಟಗಾರರು ಸ್ವಲ್ಪ ಭಯದಲ್ಲಿದ್ದಂತೆ ಕಂಡು ಬರುತ್ತಾರೆ. ಆದರೆ ರಹಾನೆ ನಾಯಕತ್ವದಲ್ಲಿ ಅವರೆಲ್ಲರೂ ನಿರಾಳರಾಗಿರುವಂತೆ ತೋರುತ್ತದೆ" ಎಂದು ಹೇಳಿದ್ದಾರೆ.

ಕೊಹ್ಲಿ ನಾಯಕತ್ವ ತ್ಯಜಿಸುತ್ತಾರೆಯೇ?
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸುತ್ತಾರೆಯೇ ಎಂಬ ಪ್ರಶ್ನೆಯನ್ನು ಅವರೇ ಹಾಕಿಕೊಂಡ ಶೇನ್ ಲೀ, ನನಗೆ ಆ ಬಗ್ಗೆ ಅನುಮಾನವಿದೆ. ನಾನು ಭಾರತೀಯ ತಂಡದ ಆಯ್ಕೆಗಾರನಾಗಿದ್ದರೆ ನಾನು ವಿರಾಟ್ ಕೊಹ್ಲಿಯ ಬದಲಿಗೆ ಅಜಿಂಕ್ಯ ರಹಾನೆಯನ್ನು ಆಯ್ಕೆ ಮಾಡಿರುತ್ತಿದ್ದೆ. ಕೊಹ್ಲಿಗೆ ಸಂಪೂರ್ಣ ಪ್ರಮಾಣದ ಬ್ಯಾಟಿಂಗ್ ಪ್ರದರ್ಶನಕ್ಕೆ ಬಿಟ್ಟುಬಿಡುತ್ತಿದ್ದೆ. ಆಗ ತಂಡದ ಪ್ರದರ್ಶನ ಇನ್ನುಷ್ಟು ಉತ್ತಮವಾಗಿರುತ್ತಿತ್ತು. ಆದರೆ ಸಮಯವೇ ಎಲ್ಲವನ್ನೂ ಹೇಳಲಿದೆ " ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀ ಅವರ ಸೋದರನಾಗಿರುವ ಶೇನ್ ಲೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಸಿಸ್ ನೆಲದಲ್ಲಿ ಮಿಂಚಿದ ರಹಾನೆ ಕ್ಯಾಪ್ಟನ್ಸಿ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ಬಳಿಕ ತವರಿಗೆ ವಾಪಾಸಾಗಿದ್ದರು. ಆ ಬಳಿಕ ನಾಯಕತ್ವ ವಹಿಸಿಕೊಂಡ ಅಜಿಂಕ್ಯ ರಹಾನೆ ಮೊದಲ ಟೆಸ್ಟ್ ಪಂದ್ಯದ ಆಘಾತಕಾರಿ ಸೋಲಿನ ನಂತರವೂ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಲು ಯಶಸ್ವಿಯಾಗಿದ್ದರು. ಹೀಗಾಗಿ ಅಜಿಂಕ್ಯ ರಹಾನೆ ನೇತೃತ್ವದ ಟೀಮ್ ಇಂಡಿಯಾ ಟೆಸ್ಟ ಸರಣಿಯನ್ನು ಗೆದ್ದು ಬೀಗಿತ್ತು.

ಮತ್ತೆ ನಾಯಕತ್ವದ ಹೊಣೆ ಹೊತ್ತ ಕೊಹ್ಲಿ
ಸದ್ಯ ಟೀಮ್ ಇಂಡಿಯಾ ಮತ್ತೊಂದು ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ಧಾರಿಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಮರಳಿದ್ದಾರೆ. ತವರಿನಲ್ಲಿ ನಡೆಯುವ ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡಲಿದ ಎಂಬುದು ಕೂತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications